ಕೈವ್ : ಉಕ್ರೇನ್ ನಲ್ಲಿ ಲ್ಯಾಂಡಿಂಗ್ ಆಗುವ ಸಂದರ್ಭದಲ್ಲಿ ವಿಮಾನ ಅಪಘಾತವಾದ ಪರಿಣಾಮ 22 ಜನ ವಿದ್ಯಾರ್ಥಿಗಳು ಸಜೀವವಾಗಿ ದಹನಗೊಂಡಿರುವ ಘಟನೆ ನಡೆದಿದೆ.

ಈ ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೇ, ನಾಲ್ವರು ನಾಪತ್ತೆಯಾಗಿದ್ದಾರೆ. ಉಕ್ರೇನ್ ರಾಜಧಾನಿ ಕೈವ್ನಿಂದ ಸುಮಾರು 400 ಕಿ.ಮೀ ದೂರವಿರುವ ಚುಹುಯಿವ್ ವಿಮಾನ ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದೆ.

ಅಪಘಾತಗೊಂಡ ಈ ವಿಮಾನದಲ್ಲಿ ಶಾಲಾ ವಿದ್ಯಾರ್ಥಿಗಳು ಇದ್ದರು. ಇನ್ನೇನು ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗಬೇಕು ಎನ್ನುವಷ್ಟರಲ್ಲಿಯೇ ದೋಷ ಉಂಟಾಗಿ ಪತನಗೊಂಡಿದೆ. ಸ್ಪೋಟಗೊಂಡು ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಜ್ವಾಲೆಗೆ ವಿಮಾನ ಸುಟ್ಟು ಕರಕಲಾಗಿದೆ ಎಂದು ಉಕ್ರೇನ್ ನ ಸೇವಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ವಿಮಾನದಲ್ಲಿ ಸೇನಾ ಸಿಬ್ಬಂದಿಗಳು ಕೂಡ ಇದ್ದರು. ಹೆಚ್ಚಿನ ಸಂಖ್ಯೆಯಲ್ಲಿ ದೇಶದ ರಕ್ಷಣಾ ಸಚಿವಲಾಯದ ವಾಯುಯಾನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ಈ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆ ದೇಶದ ಸರ್ಕಾರ, ಈ ಘಟನೆಯ ತನಿಖೆಗೆ ಆದೇಶ ನೀಡಿದೆ.

Leave a Reply

Your email address will not be published. Required fields are marked *

You May Also Like

ಅರಬರ ನೆಲದಲ್ಲಿ ಇಂಡಿಯನ್ ಐಪಿಎಲ್! ಜೂಜುಕೋರ ಬಿಸಿಸಿಐನ ಕೋವಿಡ್ ಗೇಮ್

ಇಂಡಿಯನ್ಪ್ರಿಮೀಯರ್ ಲೀಗ್ ಎಂಬುದು ಕೇವಲ ಆಟವಲ್ಲ, ಅದೊಂದುಬ್ಯುಸಿನೆಸ್ ಮತ್ತು ಕಪ್ಪು ಹಣ ಬಿಳಿಪಾಗಿಸುವ ದಂಧೆ.ಹೀಗಾಗಿ ಈ ಕೋರೊನಾ ಬಿಕ್ಕಟ್ಟಿನಲ್ಲೂ ಐಪಿಎಲ್ ನಡೆಸಲುಶತಾಯಗತಾಯ ಯತ್ನಗಳು ನಡೆದ

ಯಶಸ್ವಿಯಾಗಿ ಪ್ರಯೋಗ ಕಂಡ ಹಾರುವ ಕಾರು….ಇದು ರಸ್ತೆಗೂ ಸೈ…ಹಾರುವುದಕ್ಕೂ ಸೈ!

ನವದೆಹಲಿ : ಹಾರುವ ಕಾರು ಆವಿಷ್ಕಾರಗೊಂಡಿದ್ದು, ಈ ಕಾರು ನೆಲದ ಮೇಲೆಯೂ ಉರುಳುತ್ತದೆ ಹಾಗೂ ಆಕಾಶದಲ್ಲಿಯೂ ಹಾರುವ ಸಾಮರ್ಥ್ಯ ಹೊಂದಿದೆ.

ಕೊರೋನಾ ಸೋಂಕಿನಿಂದ ಗುಣ ಹೊಂದಿದ 12 ದಿನದ ಮಗುವಿನ ಹೆಸರೇನು ಗೊತ್ತಾ?

ಒಂಭತ್ತು ದಿನದ ಮಗುವಿನಲ್ಲಿ ಕೊರೋನಾ ಪಾಸಿಟಿವ್ ಕಂಡು ಬಂದಿತ್ತು. ಇದೀಗ 12 ದಿನದ ಈ ಮಗು ಕೊರೋನಾ ಸೋಂಕಿನಿಂದ ಗುಣ ಹೊಂದಿದ್ದು ಮಗುವಿಗೆ ಇಂದು ಹೆಸರಿಡಲಾಗಿದೆ.

ಅಮೆರಿಕದಲ್ಲಿ ಕೊರೊನಾ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ ಎಷ್ಟು ಗೊತ್ತಾ?

ಅಮೆರಿಕಾ ರಾಷ್ಟ್ರದಲ್ಲಿ ವೈರಸ್ ನಿಯಂತ್ರಮಕ್ಕೆ ಬರುವ ಬೆಳವಣಿಗೆಗಳು ಕಂಡು ಬರುತ್ತಿದೆ ಎಂಬ ಭರವಸೆಗಳು ಜನರಲ್ಲಿ ಮೂಡುತ್ತಿರುವ ನಡುವಲ್ಲೇ ಇದೀಗ ಮತ್ತೆ ಅಮೆರಿಕಾದಲ್ಲಿ ಮಹಾಮಾರಿ ತನ್ನ ಅಟ್ಟಹಾಸ ಮುಂದುವರೆಸಿದೆ.