ಇಂಡಿಯನ್ಪ್ರಿಮೀಯರ್ ಲೀಗ್ ಎಂಬುದು ಕೇವಲ ಆಟವಲ್ಲ, ಅದೊಂದುಬ್ಯುಸಿನೆಸ್ ಮತ್ತು ಕಪ್ಪು ಹಣ ಬಿಳಿಪಾಗಿಸುವ ದಂಧೆ.ಹೀಗಾಗಿ ಈ ಕೋರೊನಾ ಬಿಕ್ಕಟ್ಟಿನಲ್ಲೂ ಐಪಿಎಲ್ ನಡೆಸಲುಶತಾಯಗತಾಯ ಯತ್ನಗಳು ನಡೆದಿವೆ.ಮುಂಬೈ: ಅಂತೂ ಐಪಿಎಲ್ 13ನೆ ಆವೃತ್ತಿ ನಡೆಸಿಯೇ ಬಿಡುವ ತೀರ್ಮಾನಕ್ಕೆ ಬಿಸಿಸಿಐ ಬಂದಿದೆ. ಸದ್ಯ ಇಂಗ್ಲೆಂಡಿನಲ್ಲಿ ಇಂಗ್ಲೆಂಡ್ ಮತ್ತುವೆಸ್ಟ್ಇಂಡೀಸ್ ನಡುವೆ ಮೊದಲ ಟೆಸ್ಟ್ ‘ಕೋರೊನಾ ನಿಯಮ’ ಪಾಲಿಸಿ ಯಶಸ್ವಿಯಾಗಿದ್ದು, 2ನೆ ಟೆಸ್ಟ್ ಚಾಲ್ತಿಯಲ್ಲಿದೆ.ಇದನ್ನೇ ಸ್ಪೂರ್ತಿ ಅಥವಾ ನೆಪ ಮಾಡಿಕೊಂಡಿರುವ ಭಾರತೀಯ ಕ್ರಿಕೆಟ್ ಮಂಡಳಿ ಈಗ ಐಪಿಎಲ್ ನಡೆಸಲೇಬೇಕೆಂಬಹಠಕ್ಕಿ ಬಿದ್ದಿದೆ, ಈ ಹಠದ ಹಿಂದೆ ದೊಡ್ಡ ವ್ಯಾಪಾರಿ ಹಿತಾಸಕ್ತಿ ಕೆಲಸ ಮಾಡುತ್ತಿದೆ.
ಗುರುವಾರ ನಡೆದ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಬೆಯಲ್ಲಿ ಈ ನಿರ್ಧಾರಕ್ಕೆಬರಲಾಗಿದೆ. ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆದ ಈ ಸಭೆ ಶುಕ್ರವಾರವೂ ನಾಲ್ಕು ತಾಸುಗಳ ಕಾಲ ನಡೆಯಿತು.ಸಿಎಜಿ ನೇಮಕ ಮಾಡಿದ ಪ್ರತಿನಿಧಿಯು, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸಭೆಯಲ್ಲಿಪಾಲ್ಗೊಳ್ಳುವುದನ್ನು ಪ್ರತಿಭಟಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಹಾಗೇನೂ ಆಗದಂತೆ ‘ದೊಡ್ಡವರು’ನೋಡಿಕೊಂಡರು. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಧ್ಯಕ್ಷತೆಯಲ್ಲಿ ನಡೆದ ಸಭೆ ಅಂತಿಮವಾಗಿ ಯುಎಇನಲ್ಲಿಐಪಿಎಲ್ ನಡೆಸುವ ನಿರ್ಧಾರಕ್ಕೆ ಬಂದಿದೆ.

ಎರಡುಎಡರು-ತೊಡರುಇಲ್ಲಿ ಎರಡು ತೊಡಕುಗಳಿವೆ. ಒಂದು, ದೇಶದ ಹೊರಗೆ ಐಪಿಎಲ್ ನಡೆಸಲು ಭಾರತಸರ್ಕಾರದ ಒಪ್ಪಿಗೆ ಪಡೆಯಬೇಕು. ಜಯ್ ಶಾ ಇರುವುದರಿಂದ ಭಾರತ ಸರ್ಕಾರವಲ್ಲ, ಅದರ ‘ಅಪ್ಪ’ನೂ ಅನುಮತಿನೀಡಲೇಬೇಕು ಅಲ್ಲವಾ? ಎರಡನೇ ತೊಡಕು, ಈಗ ನಿಗದಿಯಾಗಿರುವ ಟಿ-20 ವಿಶ್ವಕಪ್ ಪಂದ್ಯಾವಳಿಯನ್ನು ಐಸಿಸಿರದ್ದು ಮಾಡಿದರಷ್ಟೇ ಐಪಿಎಲ್ ಸಾಧ್ಯ.
ಸೋಮವಾರ ಐಸಿಸಿ ಟಿ-20 ವಿಶ್ವಕಪ್ ಪಂದ್ಯಾವಳಿಯನ್ನು 2021ಕ್ಕೆಮುಂದೂಡಿದೆ. ಅಲ್ಲಿಗೆ ಗಂಗೂಲಿ-ಜಯ್ ಶಾರ ಎರಡು ಎಡರು-ತೊಡರು ನೀವಾಳಿಸಲ್ಪಟ್ಟಂತಾಯ್ತು. ಕೋವಿಡ್ ಕಾರಣಕ್ಕೆಐಸಿಸಿ ಟಿ-20 ವಿಶ್ವಕಪ್ ಮುಂದೂಡಿದ್ದರೂ, ಬಿಸಿಸಿಐ ಮಾತ್ರ ಭಾರತದಾಚೆ ‘ಇಂಡಿಯನ್’ ಲೀಗ್ ನಡೆಸಲು ಹೊರಟಿದೆ!
ಕೋವಿಡ್ಬಿಕ್ಕಟ್ಟಿನಲ್ಲೂ ಕಮಾಯಿಇವತ್ತು ಐಪಿಎಲ್ ಕೇವಲ ಆಟವಾಗಿ ಉಳಿದಿಲ್ಲ ಎನ್ನುವುದಕ್ಕಿಂತ ಅದು ಎಂದೂಸ್ಪರ್ಧಾತ್ಮಕ ಆಟದ ಲಕ್ಷಣಗಳನ್ನೇ ಹೊಂದಿಲ್ಲ ಎನ್ನುವುದೇ ಸೂಕ್ತ.ಈ ಕೋವಿಡ್ ಬಿಕ್ಕಟ್ಟಿನಲ್ಲಿ ಐಪಿಎಲ್ ಬೇಕಿತ್ತಾ ಎಂಬ ಪ್ರಶ್ನೆ ಎದ್ದಿದೆ.ಇದಕ್ಕೆ ಸೌರವ್ ಗಂಗೂಲಿ ಹೇಳುತ್ತಾರೆ, ‘ಈ ವರ್ಷಐಪಿಎಲ್ ನಡೆಸದೇ ಇದ್ದರೆ ಬಿಸಿಸಿಐಗೆ 4 ಸಾವಿರ ಕೋಟಿ ರೂ ನಷ್ಟ. ಹೀಗೆ ನಷ್ಟವಾದರೆ ನಾವು ಈ ವರ್ಷ2 ಸಾವಿರ ದೇಶೀ ಪಂದ್ಯ ( ರಣಜಿ, ದೇವಧರ್ ಇತ್ಯಾದಿ) ನಡೆಸಲು ಆಗುವುದಿಲ್ಲ’.4 ಸಾವಿರ ಕೋಟಿ ರೂ ಇದು ಅಧಿಕೃತ ಅಡಿಟ್ ಲೆಕ್ಕ. ಜಾಹಿರಾತು, ಟಿವಿ ಟೆಲೆಕಾಸ್ಟ್ರೈಟ್ಸ್ ಇತ್ಯಾದಿ ಗೋಲ್ ಮಾಲ್ ನಡೆದೇ ನಡೆಯುತ್ತದೆ. ಇದರ ಹಿಂದೆ ಬೆಟ್ಟಿಂಗ್ ದಂಧೆಕೋರರ ಒಂದು ಅಗೋಚರನೆಟ್ ವರ್ಕ್ ಕೂಡ ಕೆಲಸ ಮಾಡುತ್ತಿರುತ್ತದೆ. ಯುಎಇಯಲ್ಲಿ ಕಡಿಮೆ ಕೋವಿಡ್ ಪ್ರಕರಣ ಇರುವುದರಿಂದ ಅದು ಸೇಫ್ ಅಂತೆ! ಕೋರೊನಾಸಂದರ್ಭಕ್ಕೆ ತಕ್ಕಂತೆ ಅನಿಲ್ ಕುಂಬ್ಳೆ ನೇತೃತ್ವದ ಸಮಿತಿ ಆಟಕ್ಕೆ ಕೆಲವು ಹೊಸ ನಿಯಮ ಸೂಚಿಸಿದೆ.
ಬೌಲರ್ ಬಾಲ್ ಗೆ ಉಗುಳು-ಜೊಲ್ಲು ಹಚ್ಚಿ ತಿಕ್ಕಬಾರದು. ಒಂದು ತಂಡ ಎರಡು ಸಲ ಈ ತಪ್ಪು ಮಾಡಿದ ನಂತರ,ಪ್ರತಿ ಸಲ ತಪ್ಪು ಮಾಡಿದಾಗಲೂ ಎದುರಾಳಿ ತಂಡಕ್ಕೆ 5 ರನ್ ಬೋನಸ್ ಸಿಗುತ್ತದೆ.
ಐಪಿಎಲ್ ಫಲಿತಾಂಶಗಳು ಬಹುತೇಕ ಫೋಟೊಫಿನಿಶ್ ಮಟ್ಟದಲ್ಲಿನಿರ್ಧಾರ ಆಗುವಾಗ 5 ರನ್ ಬೋನಸ್ ನಿಯಮವೇ ಅರ್ಥರಹಿತ.
ವಿಕೆಟ್ ಬಿದ್ದಾಗ ಅಪ್ಪಿಕೊಳ್ಳೋದು ನಿಷಿದ್ಧವಂತೆ, ಕೈಗೆ ಕೈ ಹೊಡೆಯೋದೂಬ್ಯಾನ್ ಅಂತೆ. ಪ್ರತಿದಿನ ಎಲ್ಲ ಆಟಗಾರರ ಕೋವಿಡ್ ಟೆಸ್ಟ್ ಮಾಡುತ್ತಾರಂತೆ, ಪಾಸಿಟಿವ್ ಬಂದವರು ಮನೆಗೆಹೋಗಬೇಕಂತೆ!ಐಪಿಎಲ್ ತಂಡಗಳ ಮಾಲೀಕರ ಒತ್ತಡದ ಕಾರಣದಿಂದಾಗಿ ಬಿಸಿಸಿಐ 13ನೆ ಐಪಿಎಲ್ನಡೆಸಲೇ ಬೇಕಾಗಿದೆ. ಅದರಿಂದ ಬಿಸಿಸಿಐಗೂ ಲಾಭ, ತಂಡಗಳ ಮಾಲೀಕರಿಗಂತೂ ಕಪ್ಪು ಹಣ ಬಿಳಿಪಾಗಿಸುವ ದಂಧೆಯೂಸುಲಭ.