ನವದೆಹಲಿ: ಹಾರುವ ಕಾರು ಆವಿಷ್ಕಾರಗೊಂಡಿದ್ದು, ಈ ಕಾರು ನೆಲದ ಮೇಲೆಯೂ ಉರುಳುತ್ತದೆ ಹಾಗೂ ಆಕಾಶದಲ್ಲಿಯೂ ಹಾರುವ ಸಾಮರ್ಥ್ಯ ಹೊಂದಿದೆ.

ಯೂರೋಪ್‍ ನ ಸ್ಲೋವಾಕಿಯಾ ದೇಶದಲ್ಲಿನ ಕ್ಲೈನ್ ವಿಷನ್ ಎಂಬ ಕಂನಪಿ ಏರ್ ಕಾರು ತಯಾರಿಸುವ ಮೂಲಕ ಹೊಸ ಕನಸಿಗೆ ಗರಿ ಮೂಡಿಸಿದೆ.

ಈ ಕಾರಿನ ತೂಕ 1,100 ಕೆ.ಜಿ ಇದೆ. ಇದು ಹೆಚ್ಚುವರಿಯಾಗಿ 200 ಕೆ.ಜಿ ತೂಕ ಹೊತ್ತಯ್ಯುವ ಸಾಮರ್ಥ್ಯ ಹೊಂದಿದೆ. ಇದು ಕೇವಲ 3 ನಿಮಿಷದೊಳಗೆ ರಸ್ತೆಯಿಂದ ಆಕಾಶಕ್ಕೆ ಹಾರಬಲ್ಲದು. 

ಈ ಫ್ಲೈಯಿಂಗ್ ಕಾರು ಪರೀಕ್ಷಾರ್ಥ ಹಾರಾಟದಲ್ಲಿ ಯಶಸ್ವಿ ಕಂಡಿದೆ. ಹಾರುವ ಸಂದರ್ಭದಲ್ಲಿ ಈ ಕಾರು ತನ್ನಷ್ಟಕ್ಕೆ ತಾನೇ ಏರೋಪ್ಲೇನ್ ಆಗಿ ಬದಲಾವಣೆ ಹೊಂದುತ್ತದೆ. ಸದ್ಯ ಈ ಕಾರು ಹಾರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈದರ್ ಆಗುತ್ತಿದೆ.

 ಇದು ಆಕಾಶದಲ್ಲಿ 300 ಮೀಟರ್ ಎತ್ತರಕ್ಕೆ ಹಾರಲಿದೆ. ಅಲ್ಲದೆ ಪ್ರತಿ ಗಂಟೆಗೆ 200 ಕಿ.ಮೀ ವೇಗದಲ್ಲಿ ಚಲಿಸುತ್ತದೆ ಎಂದು ಸಂಸ್ಥೆ ತಿಳಿಸಿದೆ. 

Leave a Reply

Your email address will not be published. Required fields are marked *

You May Also Like

ಜಗತ್ತಿನಲ್ಲಿ ಮಹಾಮಾರಿಯ ಆಟ ಹೇಗಿದೆ?

ವಾಷಿಂಗ್ಟನ್ : ಜಗತ್ತಿನಲ್ಲಿ ದಿನದಿಂದ ದಿನಕ್ಕೆ ಮಹಾಮಾರಿಯ ಅಟ್ಟಹಾಸ ಎಗ್ಗಿಲ್ಲದೆ ಸಾಗುತ್ತಿದೆ. ಸದ್ಯ ಜಗತ್ತಿನಲ್ಲಿ ಬರೋಬ್ಬರಿ 3.95 ಕೋಟಿ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, 11,06,705 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ.

ಕಾಶ್ಮೀರದಲ್ಲಿ ಮುಂದುವರೆದ ಪಾಕ್ ದಾಳಿ: ಸರಣಿ ಕದನ ವಿರಾಮ ಉಲ್ಲಂಘನೆ

ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನ ದಾಳಿಯನ್ನು ಮುಂದುವರೆಸಿದೆ. ನಿನ್ನೆ ಮುಂಜಾನೆ ರಾಜ್ಯದ ವಿವಿಧೆಡೆ ಆರಂಭವಾಗಿರುವ ಕದನವಿರಾಮ ಉಲ್ಲಂಘನೆ ಇಡೀ ರಾತ್ರಿ ಮುಂದುವರೆದಿತ್ತು.

ವಿಯೆಟ್ನಾಂನಲ್ಲಿ ಶಿವಲಿಂಗ ಪತ್ತೆ

9ನೇ ಶತಮಾನದ ಶಿವಲಿಂಗಗಳು ವಿಯೆಟ್ನಾಂನಲ್ಲಿ ಪತ್ತೆಯಾಗಿದ್ದು ಈ ಬಗ್ಗೆ ಭಾರತ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮಾಹಿತಿ ನೀಡಿದ್ದಾರೆ.

ಯಾವ ಯಾವ ದೇಶದಲ್ಲಿ ಕೊರೊನಾ ಸ್ಥಿತಿ ಹೇಗಿದೆ ಗೊತ್ತಾ?

ಕೊರೊನಾ ವೈರಸ್ ಇಡೀ ವಿಶ್ವವನ್ನೇ ಕಂಗಾಲಾಗುವಂತೆ ಮಾಡಿದೆ. ಇಲ್ಲಿಯವರೆಗೂ 2.48 ಲಕ್ಷ ಜನರನ್ನು ಇಲ್ಲಿಯವರೆಗೂ ವೈರಸ್ ಬಲಿ ಪಡೆದಿದೆ. ನಮ್ಮ ದೇಶವೂ ಇದಕ್ಕೆ ಹೊರತಲ್ಲ. ಭಾರತದಲ್ಲಿ ಪಾಸಿಟಿವ್ ಪ್ರಕರಣ 62 ಸಾವಿರ ದಾಟಿದೆ.