ಮುಳಗುಂದ: ಸಮೀಪದ ಶೀತಾಲಹರಿ ಗ್ರಾಮದ ಹೊರವಲಯದ ಶೆಡ್ಡವೊಂದರ ಮೇಲೆ ಗದಗ ಗ್ರಾಮೀಣ ಸಿಪಿಐ ರವಿಕುಮಾರ ಕಪ್ಪತನವರ ನೇತೃತ್ವದ ತಂಡ ದಾಳಿ ನಡೆಸಿ ಅಪಾರ ಪ್ರಮಾಣದ ಸ್ಪೋಟಕ ವಸ್ತುಗಳು ಸೇರಿದಂತೆ ಓರ್ವ ವ್ಯಕ್ತಿಯನ್ನ ವಶಕ್ಕೆ ಪಡೆದಿರುವ ಘಟನೆ ಗುರುವಾರ ನಡೆದಿದೆ.
ಶೀತಾಲಹರಿ ವ್ತಾಪ್ತಿಯಲ್ಲಿ 10ಕ್ಕೂ ಹೆಚ್ಚು ಕ್ರಷರಗಳಿದ್ದು ಸುತ್ತಮುತ್ತಲ ನೂರಾರು ಎಕರೆ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆ ನಡೆಯುತ್ತದೆ. ಕಲ್ಲಿನ ಗುಡ್ಡಗಳನ್ನ ಸ್ಪೋಟಿಸಲು ಪರವಾನಿಗೆ ಇಲ್ಲದೇ ಸ್ಪೋಟಕ ವಸ್ತಗಳ ಸಂಗ್ರಹಿಸಲಾಗಿತ್ತು. ಖಚಿತ ಮಾಹಿತಿ ತಿಳಿದು ಪೋಲಿಸರು ದಾಳಿ ನಡೆಸಿದರು.
ಈ ಕುರಿತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯತಿಶ್ ಎನ್ ಮಾಹಿತಿ ನೀಡಿ, ಅಪಾಯಕಾರಿ ಸ್ಪೋಟಕ ವಸ್ತುಗಳನ್ನ ಅಕ್ರಮವಾಗಿ ಸಂಗ್ರಹಿಸುವದು ಅಪರಾದ, ಘಟನೆಗೆ ಸಂಬಂಧಿಸಿದಂತೆ ಮುಳಗುಂದ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಎಂದು ತಿಳಿಸಿದರು.
ಈ ವೇಳೆ 625 ಎಲೆಕ್ಟ್ರಿಕ್ ಡೆಟೋನೇಟರ್, 214 ಜೆಲಿಟಿನ್ ಟ್ಯೂಬ್, 10 ಕೆ.ಜಿ ಅಮೊನಿಯಂ ನೈಟ್ರೇಟ್ ಮತ್ತು 3 ಮೆಗ್ಗರ್ ಬಾಕ್ಸ ಜಪ್ತಿ ಮಾಡಿದ್ದಾರೆ. ಆರೋಪಿತರ ಪೈಕಿ ಹನಮಂತಪ್ಪ ಯರೆವಡ್ಡ (28) ನನ್ನ ಬಂಧಿಸಲಾಗಿದ್ದು ಓರ್ವ ನಾಪತ್ತೆಯಾಗಿದ್ದಾನೆ.
.