ಮುಂಡರಗಿ: ತಾಲೂಕಿನ ಕೊರ್ಲಹಳ್ಳಿ ಬಳಿಯ ಸೇತುವೆ ಇಂದು ಬೆಳಗಿನ ಜಾವ ಕುಸಿತಗೊಂಡಿದ್ದು ಬೆಳಕಿಗೆ ಬಂದಿದೆ. ಅದೃಷ್ಟವಶಾತ್​ ಈ ಸಮಯದಲ್ಲಿ ಹೆಚ್ಚಿನ ಸಂಚಾರ ಇಲ್ಲದ ಹಿನ್ನೆಲೆಯಲ್ಲಿ ದುರ್ಘಟನೆ ಸಂಭವಿಸಿಲ್ಲ. ಆದರೆ ಘಟನೆಯಿಂದ ಬೆಳಿಗ್ಗೆ ಕಾರೊಂದು ಜಖಂಗೊಂಡಿದೆ ಎನ್ನಲಾಗಿದೆ.

ಕೆಲ ದಿನಗಳಿಂದ ಬಳ್ಳಾರಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದೆ. ಮಳೆಯಿಂದಾಗಿ ತುಂಗಭದ್ರಾ ನದಿಯ ನೀರಿನ ಮಟ್ಟವೂ ಹೆಚ್ಚಾಗಿದೆ. ನೀರಿನ ಮಟ್ಟ ಹೆಚ್ಚುತ್ತಿರುವ ಬೆನ್ನಲ್ಲೆ ಸೇತುವೆ ಕುಸಿತ ಜನರಲ್ಲಿ ಆತಂಕ ಸೇಷ್ಟಿಸಿದೆ. ಘಟನೆಯಿಂದಾಗಿ ಈ ಮಾರ್ಗದ ಸಂಚಾರದಲ್ಲಿ ವ್ಯತ್ಯಯವಾಗಿದೆ.

ಇದು ಹಡಗಲಿ ಮತ್ತು ಗದಗ ಮಾರ್ಗ ಸಂಪರ್ಕಸುವ ಸೇತುವೆಯಾಗಿದೆ. 2002ರಲ್ಲಿ ಸೇತುವೆ ನಿರ್ಮಿಸಲಾಗಿತ್ತು. ಸೇತುವೆ ನಿರ್ಮಿಸಿ 18 ವರ್ಷಗಳಾಗಿವೆಯಷ್ಟೇ. ಆರ್.ಡಿ.ಸಿ.ಎಲ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ದುರಸ್ಥಿ ಕಾರ್ಯ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿ ಇನ್ನೂ ಎಷ್ಟು ತಿಂಗಳು ಇರಲಿದೆ ಅಪಾಯ!

ಬೆಂಗಳೂರು: ರಾಜ್ಯಕ್ಕೆ ಇನ್ನೂ ಮೂರು ತಿಂಗಳು ಮಹಾ ಆಪತ್ತು ಕಾದಿದೆ ಎಂಬ ಸ್ಫೋಟಕ ಸತ್ಯವೊಂದು ತಜ್ಞರಿಂದ…

ಶಿರಹಟ್ಟಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ

2020-21 ರಿಂದ ಮುಂದಿನ ಐದು ವರ್ಷಗಳ ಅವಧಿಗೆ ಶಿರಹಟ್ಟಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಮಾಡಲಾಯಿತು.

ದೇಶದ ಪ್ರಗತಿಗೆ ವಿಪಕ್ಷಗಳು ಅಡ್ಡಗಾಲು ಹಾಕುತ್ತಿವೆ – ಮೋದಿ!

ಭಗಲ್ ಪುರ : ರಾಷ್ಟ್ರದ ಹಿತಾಸಕ್ತಿ ಮನದಲ್ಲಿಟ್ಟು ಎನ್ ಡಿಎ ಕೆಲಸ ಮಾಡುತ್ತಿದ್ದರೆ ವಿಪಕ್ಷಗಳು ವಿರೋಧಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ನಾನು ಎಸ್ಕಾರ್ಟ್ ನಲ್ಲಿ ಓಡಾಡುವುದು ಕೆಲವರಿಗೆ ಬೇಸರ ತಂದಿರಬಹುದು: ಸಚಿವ ಡಾ. ನಾರಾಯಣಗೌಡ

ನಾನು ತಳಮಟ್ಟದಿಂದ ಬಂದವನು. ಯಾರ ಬಗ್ಗೆಯೂ ಲಘುವಾಗಿ ಮಾತಾಡಲ್ಲ. ನಾಗಮಂಗಲ ಶಾಸಕ ಸುರೇಶ್ ಗೌಡ ಅವರ ಬಗ್ಗೆ ನಾನು ಸಿಡಿ ವಿಚಾರ ಏನು ಹೇಳಿಲ್ಲ. ಅವರು ಏಕೆ ಹಾಗೆ ಮಾತಾಡಿದ್ರೊ ನನಗೆ ಗೊತ್ತಿಲ್ಲ.