ಮುಂಡರಗಿ: ಸೇತುವೆ ಕುಸಿತ ಸಂಚಾರ ವ್ಯತ್ಯಯ!

mundaragi korlahalli bridge

Mundaragi: Bridge Crash Traffic Diversion

ಮುಂಡರಗಿ: ತಾಲೂಕಿನ ಕೊರ್ಲಹಳ್ಳಿ ಬಳಿಯ ಸೇತುವೆ ಇಂದು ಬೆಳಗಿನ ಜಾವ ಕುಸಿತಗೊಂಡಿದ್ದು ಬೆಳಕಿಗೆ ಬಂದಿದೆ. ಅದೃಷ್ಟವಶಾತ್​ ಈ ಸಮಯದಲ್ಲಿ ಹೆಚ್ಚಿನ ಸಂಚಾರ ಇಲ್ಲದ ಹಿನ್ನೆಲೆಯಲ್ಲಿ ದುರ್ಘಟನೆ ಸಂಭವಿಸಿಲ್ಲ. ಆದರೆ ಘಟನೆಯಿಂದ ಬೆಳಿಗ್ಗೆ ಕಾರೊಂದು ಜಖಂಗೊಂಡಿದೆ ಎನ್ನಲಾಗಿದೆ.

ಕೆಲ ದಿನಗಳಿಂದ ಬಳ್ಳಾರಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದೆ. ಮಳೆಯಿಂದಾಗಿ ತುಂಗಭದ್ರಾ ನದಿಯ ನೀರಿನ ಮಟ್ಟವೂ ಹೆಚ್ಚಾಗಿದೆ. ನೀರಿನ ಮಟ್ಟ ಹೆಚ್ಚುತ್ತಿರುವ ಬೆನ್ನಲ್ಲೆ ಸೇತುವೆ ಕುಸಿತ ಜನರಲ್ಲಿ ಆತಂಕ ಸೇಷ್ಟಿಸಿದೆ. ಘಟನೆಯಿಂದಾಗಿ ಈ ಮಾರ್ಗದ ಸಂಚಾರದಲ್ಲಿ ವ್ಯತ್ಯಯವಾಗಿದೆ.

ಇದು ಹಡಗಲಿ ಮತ್ತು ಗದಗ ಮಾರ್ಗ ಸಂಪರ್ಕಸುವ ಸೇತುವೆಯಾಗಿದೆ. 2002ರಲ್ಲಿ ಸೇತುವೆ ನಿರ್ಮಿಸಲಾಗಿತ್ತು. ಸೇತುವೆ ನಿರ್ಮಿಸಿ 18 ವರ್ಷಗಳಾಗಿವೆಯಷ್ಟೇ. ಆರ್.ಡಿ.ಸಿ.ಎಲ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ದುರಸ್ಥಿ ಕಾರ್ಯ ಆರಂಭಿಸಿದ್ದಾರೆ.

Exit mobile version