ಮುಂಬಯಿ: ಮಾದಕ ನಟಿ ಬಿಪಾಶಾ ಬಸು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗಿನಿಂದಲೂ ಬಹುತೇಕ ಚಿತ್ರಗಳಲ್ಲಿ ಹಾಟ್ ಆಂಡ್ ಬೋಲ್ಡ್ ಪಾತ್ರಗಳಲ್ಲಿಯೇ ನಟಿಸಿ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ.

ಆದರೆ, ಈ ನಟಿ ಎಷ್ಟೇ ಮಾದಕವಾಗಿದ್ದರೂ ನೇರ ಹಾಗೂ ನಿಷ್ಠುರ. ಅವರಿಗೆ ಚಿತ್ರಗಳಲ್ಲಿ ಅವಕಾಶ ಮಾತ್ರ ಕಡಿಮೆಯಾಗಿಲ್ಲ. ಸದ್ಯ ಅವರ ಜೀವನದಲ್ಲಿ ನಡೆದ ಕಹಿ ಘಟನೆಯೊಂದನ್ನು ಮೆಲುಕು ಹಾಕಿದ್ದಾರೆ.

ಬಿಪಾಶಾ ಅವರ ಬಳಿ ಖ್ಯಾತ ನಿರ್ಮಾಪಕರೊಬ್ಬರು ಫ್ಲರ್ಟ್ ಮಾಡಿದ್ದ ವಿಚಾರವನ್ನು ಈಗ ಹಂಚಿಕೊಂಡಿದ್ದಾರೆ. ಬಿಪಾಶಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಕೆಲವೇ ದಿನಗಳಲ್ಲಿ ನಿರ್ಮಾಪಕರೊಬ್ಬರು ಇವರ ಬೆನ್ನು ಬಿದ್ದಿದ್ದರಂತೆ. ಆದರೆ, ಅವರಿಗೆ ತಕ್ಕ ಪಾಠವನ್ನು ಕೂಡ ಬಿಪಾಶಾ ನೀಡಿದ್ದರು ಎಂಬುವುದನ್ನು ತಿಳಿಸಿದ್ದಾರೆ.

ಈ ನಿರ್ಮಾಪಕನನ್ನು ಭೇಟಿ ಮಾಡಿದ್ದ ಬಿಪಾಶಾ, ಸಿನಿಮಾವೊಂದಕ್ಕೆ ಸಹಿ ಮಾಡಿ ಹಣ ಪಡೆದು ಮನೆಗೆ ತೆರಳಿದ್ದರಂತೆ. ಮನೆಗೆ ತಲುಪುತ್ತಲೇ ಮೊಬೈಲ್‌ಗೆ ಸಂದೇಶ ಕಳುಹಿಸಿದ ಆ ನಿರ್ಮಾಪಕ, ನಿನ್ನ ನಗುವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದರಂತೆ.

ಇದಕ್ಕೆ ಗಾಬರಿಯಾಗಿದ್ದ ಬಿಪಾಶಾ ಅವರು ಇದನ್ನು ತಮ್ಮ ಆಪ್ತ ಕಾರ್ಯದರ್ಶಿಯ ಬಳಿ ಹೇಳಿಕೊಂಡಿದ್ದರಂತೆ. ಆದರೆ, ನಿರ್ಮಾಪಕ ಮಾತ್ರ ಮತ್ತೆ ಮತ್ತೆ ಸಂದೇಶ ಕಳುಹಿಸಲು ಪ್ರಾರಂಭಿಸಿದ್ದಾನೆ. ಆಗ ಬಿಪಾಶಾ ಇನ್ನಷ್ಟು ಗಾಬರಿಯಾದರಂತೆ.

ಬಿಪಾಶಾ ತಮ್ಮ ಗೆಳೆಯರೊಬ್ಬರಿಗೆ ನಿರ್ಮಾಪಕ ಮಾಡಿದ್ದರ ಬಗ್ಗೆ ಬೈದು ಸಂದೇಶ ಕಳುಹಿಸುತ್ತಿರುವಾಗ, ಅದೇ ಸಂದೇಶ ತಪ್ಪಿ ಆ ನಿರ್ಮಾಪಕರಿಗೂ ಹೋಗಿತ್ತಂತೆ. ಆ ನಂತರ ಆ ನಿರ್ಮಾಪಕ ಬಿಪಾಶಾಗೆ ಸಂದೇಶ ಕಳುಹಿಸುವುದನ್ನು ಬಿಟ್ಟುಬಿಟ್ಟರಂತೆ. ಈ ಕಹಿ ಘಟನೆಯನ್ನು ನಟಿ ಈಗ ಬಿಪಾಶಾ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಅಟ್ಲಾಂಟಾ ಫಿಲಂ ಫೆಸ್ಟಿವಲ್ ಗೆ ಬರಗೂರರ ಅಮೃತಮತಿ ಆಯ್ಕೆ

ಇಂಚರ ಪುಟ್ಟಣ್ಣ ಪ್ರೊಡಕ್ಷನ್ಸ್‌ನ ಪುಟ್ಟಣ್ಣ ನಿರ್ಮಿಸಿ, ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ ‘ಅಮೃತಮತಿ’ ಕನ್ನಡ ಚಿತ್ರ ಅಟ್ಲಾಂಟಾ ಫಿಲಂ ಫೆಸ್ಟಿವಲ್ ಗೆ ಆಯ್ಕೆಯಾಗಿದೆ.

ರಾಗ ಪೊಲ್ಕ್ ಪ್ಯೂಜನ್ ಬ್ಯಾಂಡ್ ವತಿಯಿಂದ ಸಂಗೀತ ತರಗತಿಗಳು

ರಾಗ ಪೊಲ್ಕ್ ಪ್ಯೂಜನ್ ಬ್ಯಾಂಡ್ ವತಿಯಿಂದ ಗದಗನಲ್ಲಿ ಪ್ರಪ್ರಥಮ ಬಾರಿಗೆ ಆರು ವಿವಿಧ ಸಂಗೀತ ವಾದ್ಯಗಳನ್ನು ಕಲಿಯುವ ಆಶಕ್ತಿಯುಳ್ಳ ಸಂಗೀತ ಪ್ರೀಯರಿಗೆ ಅದರಲ್ಲಿ ವಿಶೇಷವಾಗಿ ಕೊಳಲು, ಡಿಜಂಬೆ, ತಬಲಾ, ಗೀಟಾರ್, ಕಾಜನ, ಕೀ ಬೋರ್ಡ, ಧೋಲ್ ತಾಶಾ ಸಂಗೀತ ತರಗತಿಗಳು ಇದೇ ತಿಂಗಳು ಜೂನ್

ತ್ರಿಭಾಷಾ ಸೂತ್ರದ ಕಿಡಿಗೆ ಪವರ್ ಉತ್ತರವಿದು!

ತ್ರಿಭಾಷಾ ಸೂತ್ರ ವಿರೋಧಿಸಿ ದ್ವಿಭಾಷಾ ಸೂತ್ರಕ್ಕೆ ಬೆಂಬಲಿಸುವಂತೆ ಕಳೆದ ಕೆಲವು ದಿನಗಳಿಂದ ಟ್ವಿಟರ್ ಅಭಿಯನಾ ನಡೆಯುತ್ತಿದೆ. ಈ ಅಭಿಯಾನಕ್ಕೆ ತಾರೆಯರು ಕೂಡ ಸ್ಪಂದಿಸಿದ್ದಾರೆ. ಇದಕ್ಕೆ ಸಾಥ್ ನೀಡಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಡಾ. ರಾಜ್ ಕುಮಾರ್ ಅವರ ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ.

ಚಿತ್ರಮಂದಿರಗಳಿಗೆ ನಿರ್ಬಂಧ ಬೇಡ : ಪುನೀತ್ ಮನವಿ

ಚಲನಚಿತ್ರ ಮಂದಿರಗಳಲ್ಲಿ ಶೇ.100ರಷ್ಟು ಸೀಟು ಭರ್ತಿಗೆ ಅವಕಾಶ ಮಾಡಿಕೊಡಬೇಕು ಎಂದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.