ಬೆಂಗಳೂರು : ಚಂದನವನದ ಕ್ಯೂಟ್ ಕಪಲ್ ದೂದ್ ಪೇಡಾ ದಿಗಂತ್ ಮತ್ತು ನಟಿ ಐಂದ್ರಿತಾ ರೇ ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಸುಮಾರು ಮೂರು ತಿಂಗಳಿನಿಂದ ತಮ್ಮ ಕುಟುಂಬದವರ ಜೊತೆ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಈಗ ಟ್ರಿಪ್ ಹೊಡೆಯುತ್ತಿದ್ದಾರೆ.

ದಿಗಂತ್ ಮತ್ತು ನಟಿ ಐಂದ್ರಿತಾ ರೇ ಕರ್ನಾಟಕದ ಸುಂದರ ತಾಣಗಳಲ್ಲಿ ಒಂದಾಗಿರುವ ಕೂರ್ಗ್ ಗೆ ಕುಟುಂಬದವರ ಜೊತೆ ಪ್ರವಾಸಕ್ಕೆ ಹೋಗಿದ್ದಾರೆ. ತಾವು ಪ್ರವಾಸಕ್ಕೆ ಹೋಗಿರುವ ಫೋಟೋಗಳನ್ನು ನಟಿ ಐಂದ್ರಿತಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಪೋಷಕರು ಕೂಡ ಈ ಟ್ರಿಪ್ ನಲ್ಲಿ ಭಾಗಿಯಾಗಿದ್ದಾರೆ. ವಿಶೇಷ ಎಂದರೆ ಈ ಜೋಡಿ ತಮ್ಮಟ್ರಿಪ್ ಗೆ ಎರಡು ನಾಯಿಗಳನ್ನು ಕೂಡ ಕರೆದುಕೊಂಡು ಹೋಗಿದ್ದಾರೆ. ದಿಗಂತ್ ಹಾಗೂ ಐಂದ್ರಿತಾ ಪರಸ್ಪರ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Leave a Reply

Your email address will not be published. Required fields are marked *

You May Also Like

ಜೆಡಿಎಸ್ ಸ್ಥಾನ ಕಬಳಿಸಲು ಬಿಜೆಪಿ ಹೊಂಚು – ರೇವಣ್ಣ!

ಹಾಸನ : ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಎಸ್ಟಿ ಮೀಸಲಾತಿ ಅಂತಿಮಗೊಳಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ಶಾಸಕ ಎಚ್.ಡಿ. ರೇವಣ್ಣ ಆಕ್ರೋಶ ಹೊರ ಹಾಕಿದ್ದಾರೆ.

ಮಹದಾಯಿ ವಿಚಾರ: 4 ವಾರಗಳಲ್ಲಿ ಸಮಿತಿ ರಚಿಸಿ ವರದಿ ನೀಡಲು ಸುಪ್ರೀಂ ಆದೇಶ!

ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ, ಮಲಪ್ರಭಾ ನದಿಗೆ ನೀರು ತಿರುಗಿಸುತ್ತಿದೆ ಎಂದು ಗೋವಾ ರಾಜ್ಯ ನ್ಯಾಯಾಂಗ ನಿಂದನೆ ದೂರು ಸಲ್ಲಿಸಿತ್ತು. ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಗೋವಾ ಮನವಿ ಪರಿಶೀಲಿಸಿ ಇದಕ್ಕೆ ಸಂಬಂಧಿಸಿದಂತೆ ಈ ಬಗ್ಗೆ ಪರಿಶೀಲನೆ ನಡೆಸಲು ನಾಲ್ಕು ವಾರಗಳಲ್ಲಿ ತಜ್ಞರನ್ನೊಳಗೊಂಡ ಮೇಲುಸ್ತುವಾರಿ ಸಮಿತಿ ರಚಿಸಿ ವರದಿ ನೀಡಲು ಸುಪ್ರೀಂ ಕೋರ್ಟ್ ಆದೇಶಿಸಿದೆ.

ಹಾಲಮತ ಮಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಆಗ್ರಹ: ಕುರುಬ ಸಮಾಜವನ್ನು ಎಸ್ಟಿ ಮೀಸಲಾತಿಗೆ ಸೇರಿಸಲು ಒತ್ತಾಯ

ಕುರುಬರು ಮೂಲತ: ಬುಡಕಟ್ಟು ಜನಾಂಗದವರಾಗಿದ್ದು, ರಾಜ್ಯದಲ್ಲಿ ಈಗಾಗಲೇ ಜೇನು ಕುರುಬ, ಕಾಡು ಕುರುಬರು, ಗೊಂಡ, ರಾಜಗೊಂಡ, ಕುರುಬ, ಕುರುಮನ್ಸ್ ಜಾತಿಗಳು ಪರಿಶಿಷ್ಟ ಪಂಗಡದಲ್ಲಿವೆ. ಆದರೆ ಸರ್ಕಾರ ರಾಜ್ಯದಲ್ಲಿರುವ ಎಲ್ಲ ಕುರುಬರಿಗೂ ಎಸ್.ಟಿ.ಮೀಸಲಾತಿ ವಿಸ್ತರಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದು ಎಸ್.ಟಿ ಮೀಸಲಾತಿ ಹೋರಾಟ ಸಮೀತಿ ರಾಜ್ಯ ಹಿರಿಯ ಉಪಾಧ್ಯಕ್ಷ ಹಾಗೂ ಹಾಲಮತ ಮಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ತಿಳಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋದಿ ಧೋರಣೆ ಅನುಸರಿಸುತ್ತಿವೆ: ಸುಂಕದ

ಉತ್ತರಪ್ರಭ ಸುದ್ದಿ ಮುಳಗುಂದ: ಅನ್ಯಾಯಕ್ಕೊಳಗಾದ ರೈತರಿಗೆ ಆತ್ಮಸ್ಥೈರ್ಯ ತುಂಬಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ರೈತ…