ಮುಂಬಯಿ: ಮಾದಕ ನಟಿ ಬಿಪಾಶಾ ಬಸು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗಿನಿಂದಲೂ ಬಹುತೇಕ ಚಿತ್ರಗಳಲ್ಲಿ ಹಾಟ್ ಆಂಡ್ ಬೋಲ್ಡ್ ಪಾತ್ರಗಳಲ್ಲಿಯೇ ನಟಿಸಿ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ.

ಆದರೆ, ಈ ನಟಿ ಎಷ್ಟೇ ಮಾದಕವಾಗಿದ್ದರೂ ನೇರ ಹಾಗೂ ನಿಷ್ಠುರ. ಅವರಿಗೆ ಚಿತ್ರಗಳಲ್ಲಿ ಅವಕಾಶ ಮಾತ್ರ ಕಡಿಮೆಯಾಗಿಲ್ಲ. ಸದ್ಯ ಅವರ ಜೀವನದಲ್ಲಿ ನಡೆದ ಕಹಿ ಘಟನೆಯೊಂದನ್ನು ಮೆಲುಕು ಹಾಕಿದ್ದಾರೆ.

ಬಿಪಾಶಾ ಅವರ ಬಳಿ ಖ್ಯಾತ ನಿರ್ಮಾಪಕರೊಬ್ಬರು ಫ್ಲರ್ಟ್ ಮಾಡಿದ್ದ ವಿಚಾರವನ್ನು ಈಗ ಹಂಚಿಕೊಂಡಿದ್ದಾರೆ. ಬಿಪಾಶಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಕೆಲವೇ ದಿನಗಳಲ್ಲಿ ನಿರ್ಮಾಪಕರೊಬ್ಬರು ಇವರ ಬೆನ್ನು ಬಿದ್ದಿದ್ದರಂತೆ. ಆದರೆ, ಅವರಿಗೆ ತಕ್ಕ ಪಾಠವನ್ನು ಕೂಡ ಬಿಪಾಶಾ ನೀಡಿದ್ದರು ಎಂಬುವುದನ್ನು ತಿಳಿಸಿದ್ದಾರೆ.

ಈ ನಿರ್ಮಾಪಕನನ್ನು ಭೇಟಿ ಮಾಡಿದ್ದ ಬಿಪಾಶಾ, ಸಿನಿಮಾವೊಂದಕ್ಕೆ ಸಹಿ ಮಾಡಿ ಹಣ ಪಡೆದು ಮನೆಗೆ ತೆರಳಿದ್ದರಂತೆ. ಮನೆಗೆ ತಲುಪುತ್ತಲೇ ಮೊಬೈಲ್‌ಗೆ ಸಂದೇಶ ಕಳುಹಿಸಿದ ಆ ನಿರ್ಮಾಪಕ, ನಿನ್ನ ನಗುವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದರಂತೆ.

ಇದಕ್ಕೆ ಗಾಬರಿಯಾಗಿದ್ದ ಬಿಪಾಶಾ ಅವರು ಇದನ್ನು ತಮ್ಮ ಆಪ್ತ ಕಾರ್ಯದರ್ಶಿಯ ಬಳಿ ಹೇಳಿಕೊಂಡಿದ್ದರಂತೆ. ಆದರೆ, ನಿರ್ಮಾಪಕ ಮಾತ್ರ ಮತ್ತೆ ಮತ್ತೆ ಸಂದೇಶ ಕಳುಹಿಸಲು ಪ್ರಾರಂಭಿಸಿದ್ದಾನೆ. ಆಗ ಬಿಪಾಶಾ ಇನ್ನಷ್ಟು ಗಾಬರಿಯಾದರಂತೆ.

ಬಿಪಾಶಾ ತಮ್ಮ ಗೆಳೆಯರೊಬ್ಬರಿಗೆ ನಿರ್ಮಾಪಕ ಮಾಡಿದ್ದರ ಬಗ್ಗೆ ಬೈದು ಸಂದೇಶ ಕಳುಹಿಸುತ್ತಿರುವಾಗ, ಅದೇ ಸಂದೇಶ ತಪ್ಪಿ ಆ ನಿರ್ಮಾಪಕರಿಗೂ ಹೋಗಿತ್ತಂತೆ. ಆ ನಂತರ ಆ ನಿರ್ಮಾಪಕ ಬಿಪಾಶಾಗೆ ಸಂದೇಶ ಕಳುಹಿಸುವುದನ್ನು ಬಿಟ್ಟುಬಿಟ್ಟರಂತೆ. ಈ ಕಹಿ ಘಟನೆಯನ್ನು ನಟಿ ಈಗ ಬಿಪಾಶಾ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಮದುವೆಗೆ ಸಿದ್ಧತೆ ನಡೆಸಿದ ಕಾಜಲ್ ಅಗರ್ವಾಲ್! ಭಾವಿ ಪತಿಯೊಂದಿಗಿನ ಫೋಟೋ ಶೇರ್!

ಹೈದರಾಬಾದ್ : ನಟಿ ಕಾಜಲ್ ಅಗರ್ವಾಲ್ ಅವರು ಸದ್ಯದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ತಮ್ಮ ಕಾಜಲ್ ಅವರು ಇಲ್ಲಿಯವರೆಗೂ ತಮ್ಮ ಭಾವಿ ಪತಿಯನ್ನು ಪರಿಚಯಿಸಿರಲಿಲ್ಲ. ನಟಿ ಇದೀಗ ಅವರ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ರಶ್ಮಿಕಾ ಜಾಗಕ್ಕೆ ಬಂದು ನಿಂತ ಸಾಯಿ ಪಲ್ಲವಿ!

ಹೈದರಾಬಾದ್ : ದಕ್ಷಿಣ ಭಾರತ ಸೆನ್ಸೇಶನ್ ಕ್ವೀನ್ ಸಾಯಿ ಪಲ್ಲವಿ ಸದ್ಯ ತೆಲುಗು, ತಮಿಳು ಚಿತ್ರರಂಗದಲ್ಲಿ…

ನಾಪತ್ತೆಯಾಗಿದ್ದ ನಟಿ ರಮ್ಯ ಮತ್ತೆ ಪ್ರತ್ಯಕ್ಷ

ಚಂದನವನದ ಪದ್ಮಾವತಿ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ಕ್ವೀನ್ ದರ್ಶನಕ್ಕಾಗಿ ಎಷ್ಟೋ ಅಭಿಮಾನಿಗಳು ಕಾಯುತ್ತಿದ್ದರು.

ನಿರೂಪಕಿ ಅನುಶ್ರೀ ವಿರುದ್ಧ ಸಿಸಿಬಿ ಫುಲ್ ಗರಂ

ಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದ ನಿರೂಪಕಿ ಅನುಶ್ರೀ ವಿರುದ್ಧ ಸಿಸಿಬಿ ಅಧಿಕಾರಿಗಳು ಗರಂ ಆಗಿದ್ದಾರೆ.