ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಆಕ್ಸಿಜನ್ ನ ಅಭಾವಿದೆ. ಆಕ್ಸಿಜನ್ ಕುರಿತಂತೆ ಗಂಭೀರವಾದ, ದೃಢವಾದ ತಕ್ಷಣದ ಹೆಜ್ಜೆಗಳನ್ನಿಡದೇ ಹೋದರೆ ಜನ ಆಸ್ಪತ್ರೆಗಳಲ್ಲಿ ಬಾರೀ ಸಂಖ್ಯೆಯಲ್ಲಿ ಸಾವೀಗೀಡಾಗಬೇಕಾದ ಪ್ರಸಂಗ ಬಂದೀತು ಎಂದು ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಎಚ್.ಕೆ.ಪಾಟೀಲ್ ಸರ್ಕಾರವನ್ನು ಎಚ್ಚರಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಈಗಾಗಲೇ 10-12 ಜನ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ದಾರೆ. ಜಾಗೃತರಾಗಿ ತಕ್ಷಣ ಕ್ರಮ ಕೈಗೊಳ್ಳಲು ಪ್ರಾರ್ಥಿಸುವೆ.

ಕೊರೋನಾ ಮಹಾಮಾರಿ ದಿನೇ ದಿನೇ ಹೆಚ್ಚು ವ್ಯಾಪಕವಾಗ್ತಾ ಇದೆ. ತನ್ನ ಲಕ್ಷಣ ಪರಿಣಾಮಗಳನ್ನು ಬದಲಾಯಿಸುತ್ತಿದೆ. ಒಂದು ಸರಿಯಾದ ಅಂದಾಜಿನಂತೆ ನಮ್ಮ ರಾಜ್ಯದಲ್ಲಿ ಸಾವಿನ ಪ್ರಮಾಣ ಜೂನ್/ಜುಲೈ ಹಾಗೂ ಆಗಸ್ಟ್ 15 ರವರೆಗಿನ ದಿನಗಳನ್ನು ಗಮನಿಸಿದಾಗ ಜೂನ್‌ಗಿಂತ 2-3 ಪಟ್ಟು ಜಾಸ್ತಿ ಆಗಿದೆ.

ಸರಕಾರಿ ಅಂಕಿ-ಅಂಶಗಳ ಪ್ರಕಾರ ಸಾವಿನ ಪ್ರಮಾಣ ಶೇ.1.5% ಇದ್ದದ್ದು ಶೇ.3% ಕ್ಕೆ ಏರಿಕೆಯಾಗಿರುವುದು ಭಯಾನಕ ಅಂಶ. ಕಳೆದ ಕೆಲ ದಿನಗಳಿಂದ ಈ ರೋಗದಿಂದ ಬಳಲುವವರಿಗೆ ಪ್ರಾಣವಾಯುವಿನ ಅವಶ್ಯಕತೆ ಬಾರೀ ಪ್ರಮಾಣದಲ್ಲಿ ಜಾಸ್ತಿಯಾಗ್ತಾಯಿದೆ.

ತೋರಣಗಲ್‌ನಲ್ಲಿರುವ ಜಿಂದಾಲ್ ಕಂಪನಿಯ ದೊಡ್ಡ ಘಟಕ ಮತ್ತು ಮರಿಯಮ್ಮನಹಳ್ಳಿಯ ಜಿಂದಾಲ್ ಕಂಪನಿಯ ಆಕ್ಸಿಜನ್ ಘಟಕಗಳನ್ನು ರಾಜ್ಯದಲ್ಲಿ ತನ್ನ ಪೂರ್ಣ ಸಾಮರ್ಥ್ಯವನ್ನು ಈ ತುರ್ತು ಪರಿಸ್ಥಿತಿಯಲ್ಲಿ ಜನರಿಗೆ ದೊರಕಿಸುವಂತೆ ಮಾಡಿ ಇಂಥಸ್ಥಿತಿಯಲ್ಲಿ ಏನು ಕ್ರಮ ತೆಗೆದುಕೊಳ್ಳಬೇಕು, ವೈಜ್ಞಾನಿಕ ಕ್ರಮ ಏನು, ಕಾನೂನಾತ್ಮಕ ಕ್ರಮ ಏನು ಎನ್ನುವ ಕುರಿತು ಇನ್ ಫ್ರಾಸ್ಟ್ರಕ್ಚರ್ ನಲ್ಲಿ ಬದಲಾವಣೆ ಅಗತ್ಯವಿದೆ. ಹೆಚ್ಚಿನ ವ್ಯವಸ್ಥೆಯನ್ನು ತಕ್ಷಣ ತೀವ್ರವಾಗಿ ಮಾಡಬೇಕು.

ಎಚ್.ಕೆ.ಪಾಟೀಲ್, ಶಾಸಕ

ಸರಕಾರಿ ದವಾಖಾನೆಗಳಲ್ಲಿ ಲಿಕ್ವಿಡ್ ಆಕ್ಸಿಜನ್ ವ್ಯವಸ್ಥೆ ಮಾಡಿಕೊಂಡಿಲ್ಲ. ಈಗ ತರಾತುರಿ ನಡೆದಿದೆ. ಆಕ್ಸಿಜನ್ ಸಿಲಿಂಡರ್‌ಗಳ ಪೂರೈಕೆ ಆಗ್ತಾಯಿಲ್ಲ. ಲಿಕ್ವಿಡ್ ಆಕ್ಸಿಜನ್ ಸಮರ್ಪಕವಾಗಿ ಪೂರೈಸುತ್ತಿಲ್ಲ. ಕಾರಣಗಳನ್ನು ತಿಳಿಯಬೇಕು, ಸಮಸ್ಯೆ ಬಗೆಹರಿಯಬೇಕು.

ತಮಿಳುನಾಡಿನಿಂದ ಬರುತ್ತಿದ್ದ ಲಿಕ್ವಿಡ್ ಆಕ್ಸಿಜನ್ ಹಾಗೂ ಗ್ಯಾಸ್ ಸಿಲಿಂಡರ್‌ಗಳು ಅವರ ರಾಜ್ಯದಲ್ಲಿ ನೀಡಿ ಹೆಚ್ಚಾದರೆ ಮಾತ್ರ ಕರ್ನಾಟಕಕ್ಕೆ ಎಂಬ ನಿಲುವು ತಮಿಳುನಾಡಿನ ಅಧಿಕಾರಿಗಳು ತೆಗೆದುಕೊಂಡಿದ್ದಾರೆ. ಇದರಿಂದ ಬಾರೀ ಪ್ರಮಾಣದ ಸಮಸ್ಯೆ ಸೃಷ್ಠಿಯಾಗಿದೆ. ಮಹಾರಾಷ್ಟ್ರದಿಂದ ಸದ್ಯ ಈಗ ಸಮಸ್ಯೆ ಇಲ್ಲ. ಬರುವ ದಿನಗಳಲ್ಲಿಯ ಪರಿಸ್ಥಿತಿ ಕುರಿತು ಮುಂದಾಲೋಚನೆ ಮಾಡಬೇಕು.

ತಕ್ಷನ ಜನಪರ ಕೆಲಸ ಮಾಡುವ ಪ್ರಾಮಾಣಿಕ ಅಧಿಕಾರಿ ನೇತೃತ್ವದಲ್ಲಿ ಒಂದು ಟಾಸ್ಕ್ಪೋರ್ಸ್ ರಚನೆ ಮಾಡಿ ಜವಾಬ್ದಾರಿ ನೀಡಿ ಕೆಲಸ ಪ್ರಾರಂಭಿಸಲಿ.

ಜೊತೆಗೆ ನನ್ನ ಅಂದಾಜಿನಂತೆ ಮೆಡಿಕಲ್ ಆಕ್ಸಿಜನ್ ಈಗಿನಂತೆ ಕೊರತೆ ಪರಿಸ್ಥಿತಿ ಮುಂದುವರೆದರೆ ಗಂಡಾಂತರ, ಅನಿವಾರ್ಯವಾಗಿ ಇಂಡಸ್ಟ್ರೀಯಲ್ ಆಕ್ಸಿಜನ್ ಕೊರೋನಾ ಪೀಡಿತರಿಗೆ ಬಳಸುವ ಅನಿವಾರ್ಯವಾದಂತೆ ಗೋಚರವಾಗುತ್ತಿದೆ.

ಅದನ್ನು ಬಳಕೆ ಮಾಡಲು ಕಾನೂನಿನ ತೊಡಕು ಇರಲು ಸಾಧ್ಯವಿದೆ. ಇಂಡಸ್ಟ್ರೀಯಲ್ ಆಕ್ಸಿಜನ್ ನ್ನೂ ಸಹ ಮೆಡಿಕಲ್ ಆಕ್ಸಿಜನ್ ದಷ್ಟೆ ಶುದ್ಧವಾಗಿಸಬಹುದು. ಇಲ್ಲಿ ನೈಜ ಸಮಸ್ಯೆ ಎಂದರೆ, ಸಿಲಿಂಡರ್‌ಗಳ ಕೊರತೆ . ಇಂಡಸ್ಟ್ರೀಯಲ್ ಆಕ್ಸಿಜನ್ ಸಿಲಿಂಡರ್ ಬಳಕೆಗೆ ಅವಕಾಶ ಸರಕಾರ ಮಾಡಿಕೊಡಬೇಕು. ಆ ವ್ಯವಸ್ಥೆ ಮಾರ್ಪಡಿಸಿದರೆ ಸಮಸ್ಯೆ ಬಗೆಹರಿದೀತು.

ಮತ್ತೊಂದು ಸಲಹೆ ಕೆಲ ಕಾರ್ಖಾನೆಗಳು ತಮ್ಮ ಕಾರ್ಖಾನೆಯ ನಳಕೆಗಾಗಿ ಮಾತ್ರ ಮೀಸಲಿಟ್ಟುಕೊಂಡಿವೆ. ಅದು ಕೇವಲ ಕಾರ್ಖಾನೆಯ ಬಳಕೆಗೆ ಮತ್ರ ಉಪಯೋಗಿಸಲಾಗುತ್ತಿವೆ. ಅವುಗಳನ್ನು ತಕ್ಷಣ ಕೊರೋನಾ ಪೀಡಿತರಿಗೆ ಆ ಉತ್ಪಾದನೆ ಸಂಪೂರ್ಣವಾಗಿ ನೀಡಲು ಆದೇಶಿಸಬೇಕು.

Leave a Reply

Your email address will not be published.

You May Also Like

ಪುನೀತ್‌ಗೆ ‘ಕರ್ನಾಟಕ ರತ್ನ’- ಶೀಘ್ರದಲ್ಲಿಯೇ ದಿನಾಂಕ ನಿಗದಿ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ನಟ ದಿವಂಗತ ಪುನೀತ್ ರಾಜ್‌ಕುಮಾರ್‌ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಕೊಡುವ ಸಂಬಂಧ ಆದಷ್ಟು…

ಅಂಬೇಡ್ಕರ್ ವಿಚಾರಧಾರೆಗಳು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ :ಮಾರುತಿ ಕಟ್ಟೀಮನಿ

ಕನ್ನಡ ಮತ್ತು ಸಂಸ್ಕತಿ ಇಲಾಖೆ, ಕೆ.ಎಲ್.ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಾಹಿತ್ಯ ಸಂಘ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಸಂವಿಧಾನ ಶಿಲ್ಪಿ ಭಾರತರತ್ನಡಾ.ಬಿ.ಆರ್.ಅಂಬೇಡ್ಕರ್‌ ಓದು ಕಾರ್ಯಕ್ರಮದ ಅಂಗವಾಗಿ ರಸಪ್ರಶ್ನೆ ಹಾಗು ಪ್ರಬಂಧ ಸ್ಪರ್ಧೆಆಯೋಜಿಸಲಾಗಿತ್ತು.

ರಾಜ್ಯದಲ್ಲಿಂದು 388 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು ಕೊರೊನಾ ಪಾಸಿಟಿವ್ 388 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 3796 ಕ್ಕೆ ಏರಿಕೆಯಾದಂತಾಗಿದೆ.

ವಿಜಯ ನಗರ ಶುಗರ್ಸ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಕೊಲೆ!

ತಲೆಯ ಮೇಲೆ ಕಲ್ಲು ಎತ್ತಿಹಾಕಿ ಸೆಕ್ಯೂರಿಟಿ ಗಾರ್ಡ್ ನನ್ನು ಕೊಲೆ ಮಾಡಿದ ಘಟನೆ ತಡರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.