ಬಹುಪಾಲು ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳು ಪ್ರತಾಪ್ ಎಂಬ ಹುಡುಗನ ಸುಳ್ಳಿಗೆ ಯಾಮಾರಿಬಿಟ್ಟಿದ್ದವು.

ಬೆಂಗಳೂರು: ಸ್ವಯಂಘೋಷಿತ 600 ಡ್ರೋನ್ ಸರದಾರ ಎನ್.ಎಂ.ಪ್ರತಾಪನ ಸುಳ್ಳುಗಳು ಒಂದೊಂದಾಗಿ ಹೊರಬರುತ್ತಿವೆ. ಬಿಟಿವಿಯಲ್ಲಿ ಸುದೀರ್ಘ ಸಂದರ್ಶನದಲ್ಲಿ ಈ ಹುಡುಗ ಮೊಬೈಲ್ ನಲ್ಲಿ ತೋರಿಸಿದ ಫೋಟೊಗಳ ಅಸಲಿಯತ್ತು ಬಯಲಾಗಿದೆ.

ಆ ಫೋಟೊದಲ್ಲಿರುವ ಡ್ರೋನ್ ಅನ್ನು ತಯಾರಿಸಿದ ಕಂಪನಿಯವರೇ ಹೇಳಿಕೆ ಪ್ರಕಟಿಸುವ ಮೂಲಕ ಪ್ರತಾಪನ ಕಾಗೆ ಹಾರಿಸುವ ಆಟವನ್ನು ಬಯಲು ಮಾಡಿದ್ದಾರೆ.

600 ಡ್ರೋನ್ ತಯಾರಿಸಿದ್ದು, ಅವುಗಳ ಫೋಟೊ ತೆಗೆದಿಲ್ಲ, ಅವನ್ನು ಕೆಲವು ಸಂಸ್ಥೆಗಳಿಗೆ ಉಚಿತವಾಗಿ ನೀಡಿದ್ದೇನೆ ಎಂದು ಪದೇ ಪದೇ ಹೇಳುವ ಸುಳ್ಳನ್ನೇ ಕಿರಿಕ್ ಕೀರ್ತಿಗೂ ಹೇಳಿದ. ಜರ್ಮನಿಯ ಡ್ರೋನ್ ಪ್ರದರ್ಶನದಲ್ಲಿ ತಾನೂ ಭಾಗಿಯಾಗಿ ತನ್ನ ಡ್ರೋನ್ ಪ್ರದರ್ಶಿಸಿದ್ದೆ, ಅದರ ಫೋಟೊ ಎಂದು ಮೊಬೈಲ್ ಚಿತ್ರ ತೋರಿಸಿದ.

ಆದರೆ ಅಸಲಿಗೆ ಇಂವಾ ಬೇರೆ ಕಂಪನಿಗಳ ಡ್ರೋನ್ ಮುಂದೆ ನಿಂತು ಫೋಟೊ ತೆಗೆಸಿಕೊಂಡು ತನ್ನವೇ ಎನ್ನುತ್ತ ಯಾಮಾರಿಸುತ್ತ ಬಂದಿದ್ದಾನೆ. ಈಗ ಅಲ್ಟ್ ನ್ಯೂಸ್ ನಡೆಸಿದ ಫ್ಯಾಕ್ಟ್-ಚೆಕ್ ನಲ್ಲಿ ಇದು ಪುಟ್ಟಾಪೂರಾ ಬಯಲಾಗಿದೆ.

ಆ ಒಂದು ಫೋಟೊ ಸುತ್ತ…

ಬಿಟಿವಿ ಸಂದರ್ಶನದ ಮೊಬೈಲ್ ಫೋಟೊ ತೋರಿಸುವ ಸ್ಕ್ರೀನ್ ಶಾಟ್ ಅನ್ನು ಉಲ್ಲೇಖಿಸಿರುವ ಜಮರ್ನಿಯ ಬಿಲ್ಜ್ ಐ (BillzEye) ಕಂಪನಿಯ ಮಾಲೀಕ ಬಿಲ್ ಗುಟ್ ಬೇರ್, ತಮ್ಮ ಕಂಪನಿಯ ವೆಬ್ ಸೈಟಿನಲ್ಲಿ ಕೂಡಲೇ ಒಂದು ಪ್ರಕಟಣೆ ನೀಡಿ, ಪ್ರತಾಪ್ ಪಕ್ಕ ಇರುವ ಡ್ರೋನ್ ನಮ್ಮ ಕಂಪನಿಯ ಉತ್ಪನ್ನವಾಗಿದ್ದು, ಅದರ ವಿನ್ಯಾಸ, ಅಭಿವೃದ್ಧಿ, ಉತ್ಪಾದನೆ ಮತ್ತು ವಿತರಣೆಯನ್ನು ತನ್ನ ನೇತೃತ್ವದಲ್ಲಿ ಬಿಲ್ಜ್ ಐ ಕಂಪನಿ ಮಾಡುತ್ತಿದೆ.

ಪ್ರತಾಪನಿಗೂ ಅದಕ್ಕೂ ಎಳ್ಳಷ್ಟೂ ಸಂಬಂಧವಿಲ್ಲ. ಆತ ನಮ್ಮ ಕಂಪನಿಯ ನೌಕರನೂ ಅಲ್ಲ, ಶೇರ್ ಹೋಲ್ಡರ್ ಕೂಡ ಅಲ್ಲ ಎಂದು ಹೇಳಿದ್ದಾರೆ. 2018ರ ಜೂನಿನಲ್ಲಿ ನಡೆದ  CEBIT ಡ್ರೋನ್ ಪ್ರದರ್ಶನದಲ್ಲಿ ಆತ ಪ್ರದರ್ಶನದ ವೀಕ್ಷಕನಾಗಿ ಭಾಗವಹಿಸಿದ್ದ. ಡ್ರೋನ್ ಬಗ್ಗೆ ಕೆಲವು ಪ್ರಶ್ನೆ ಕೇಳಿದ್ದ. ನಾನು ಸಂತೋಷದಿಂದಲೇ ಉತ್ತರಿಸಿದ್ದೆ. BETH-01 ಮಾಡೆಲ್ ಡ್ರೋನ್ ಪಕ್ಕ ನಿಂತು ಫೋಟೊ ತೆಗೆದುಕೊಳ್ಳಲು ಕೇಳಿದಾಗ ಹೂಂ ಎಂದಿದ್ದೆ. ಅದೇ ಫೋಟೊವನ್ನು ಬಿಟಿವಿಯಲ್ಲಿ ತೋರಿಸಿದ್ದಾನೆ ಅಷ್ಟೇ ಎಂದೂ ಬಿಲ್ ಗುಟ್ ಬೇರ್ ವಿವರಿಸಿದ್ದಾರೆ.

ಬಿಟಿವಿ ಸಂದರ್ಶನದಲ್ಲಿ ಡ್ರೋನ್ ಪ್ರತಾಪ್ ತೋರಿಸಿದ ಫೋಟೋಗೆ ಜರ್ಮನಿ ಕಂಪನಿಯ ಪ್ರತಿಕ್ರಿಯೇ

ಇದೇ ಪ್ರದರ್ಶನದಲ್ಲಿ ತನಗೆ ಐನ್ ಸ್ಟೀನ್ ಹೆಸರಲ್ಲಿರುವ ಗೋಲ್ಡ್ ಮೆಡಲ್ ಕೊಟ್ಟರೆಂದೂ ಪ್ರತಾಪು ರೀಲು ಬಿಡುತ್ತ ಬಂದಿದ್ದಾನೆ. ಗೂಗಲ್ ಸರ್ಚ್ ಮಾಡಿದರೆ ಆ ಹೆಸರಿನ ಪ್ರಶಸ್ತಿಯೇ ಇಲ್ಲ ಎಂಬುದು ತಿಳಿಯುತ್ತದೆ. ದಿ ಬೆಟರ್ ಇಂಡಿಯಾ ಪೋರ್ಟಲ್ ಪ್ರತಾಪನ ಮಾತು ನಂಬಿ ಐನ್ ಸ್ಟೀನ್ ಅವಾರ್ಡು ಸಿಕ್ಕಿದೆ ಎಂದೆಲ್ಲ ಬರೆದಿತ್ತು. ನಂತರ ಕೆಲವೇ ದಿನಗಳಲ್ಲಿ ಆ ವರದಿ ತೆಗೆದು ಹಾಕಿದ ಕಂಪನಿ, ನಾವು ಜರ್ಮನಿಯ ಪ್ರದರ್ಶನದ ಆಯೋಜಕರೊಂದಿಗೆ ಮಾತನಾಡಿದಾಗ, ಅಂತಹ ಯಾವ ಪ್ರಶಸ್ತಿಯೂ ಇಲ್ಲ, ಪ್ರದರ್ಶನದಲ್ಲಿ ಪ್ರಶಸ್ತಿಯನ್ನೇ ಕೊಡುವುದಿಲ್ಲ, ಪ್ರತಾಪ್ ಎಂಬ ಹೆಸರನ್ನು ಕೇಳಿಲ್ಲ ಎಂದರು. ಹೀಗಾಗಿ ಆ ವರದಿಯನ್ನು ಡಿಲೀಟ್ ಮಾಡಿದ್ದೇವೆ ಎಂದು ದಿ ಬೆಟರ್ ಇಂಡಿಯಾ ತಿಳಿಸಿತ್ತು.

ಜಪಾನ್ ಕಂಪನಿಯೂ ಅಲ್ಲಗಳೆದಿದೆ!

ಪ್ರತಾಪ್ ಬಳಿ ಇರುವ ಎರಡರಲ್ಲಿ ಈಗ ಒಂದು ಫೋಟೊ ಹಿಂದಿನ ಸತ್ಯ ಈಗ ಬಯಲಾಯ್ತು. ಇನ್ನೊಂದರಲ್ಲಿ ನೀವು ಡ್ರೋನ್ ಕಂಪನಿಯ ಲೋಗೊ ನೋಡಬಹುದು. ಅದು ಜಪಾನಿನ ಎಸಿಎಸ್ಎಲ್ ಕಂಪನಿಯ ಲೋಗೊ. ರೆಡ್ ಇಟ್ ಬಳಕೆದಾರರೊಬ್ಬರು ಈ ವಿಷಯವನ್ನು ಆ ಕಂಪನಿಯ ಸಿಒಒ ಸತೋಷಿ ವಾಷಿಯಾ ಅವರ ಗಮನಕ್ಕೆ ತಂದಾಗ, ಅವರು ಉತ್ತರಿಸಿ, ಫೋಟೊದಲ್ಲಿರುವ ಡ್ರೋನ್ ಅನ್ನು ಸಂಪೂರ್ಣವಾಗಿ ನಮ್ಮ ಕಂಪನಿಯೇ ತಯಾರಿಸಿದೆ.

ಅದರಲ್ಲಿರುವ ವ್ಯಕ್ತಿ ಯಾರೆಂದು ಗೊತ್ತಿಲ್ಲ. ಪ್ರದರ್ಶನದಲ್ಲಿ ಪಕ್ಕ ನಿಂತು ಫೋಟೊ ತೆಗೆಸಿಕೊಂಡಿದ್ದಾನೆ ಅಷ್ಟೇ ಎಂದಿದ್ದಾರೆ. ಅಲ್ಲಿಗೆ ಪ್ರತಾಪ್ ಬತ್ತಳಿಕೆಯಲ್ಲಿದ್ದ ಎರಡು ಫೋಟೊ ಮತ್ತು ಒಂದು ಅವಾರ್ಡು ಸಂಪೂರ್ಣ ಫೇಕ್ ಎಂಬುದು ಪಕ್ಕಾ ಸಾಬೀತಾಗಿದೆ.

ಬಹುಪಾಲು ಮಾಧ್ಯಮಗಳು ಈ ಹುಡುಗ ಹೇಳಿದ್ದನ್ನೆ ನಂಬಿ ಬರೆದು ಅವನನ್ನು ಡ್ರೋನ್ ವಿಜ್ಞಾನಿಯನ್ನಾಗಿ ಮಾಡಿಬಿಟ್ಟವು. ಇದರಿಂದ ಪ್ರತಾಪನಿಗೆ ಸಾಕಷ್ಟು ಹಣವೂ ಹರಿದು ಬಂತು. ಅದೇ ಹಣದಲ್ಲಿ ಜರ್ಮನಿಯ ಡ್ರೋನ್ ಪ್ರದರ್ಶನಕ್ಕೆ ಹೋಗಿ ಫೋಟೊ ಹೊಡ್ಕೊಂಡು ಕಳ್ಳಾಟ ಆಡಿದ.

Leave a Reply

Your email address will not be published. Required fields are marked *

You May Also Like

ರಾಜ್ಯದ ಜನತೆಗೆ ಶುಭಾಶಯ ತಿಳಿಸಿದ ಪ್ರಧಾನಿ!

ನವದೆಹಲಿ : ಇಂದು ರಾಜ್ಯದೆಲ್ಲೆಡೆ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಜನತೆಗೆ ಶುಭಾಶಯ ಕೋರಿದ್ದಾರೆ.

ಹೊರರಾಜ್ಯಗಳಿಂದ ಬಂದವರ ಮನೆಗಳ ಸೀಲ್ಡೌನ್ ಗೆ ಚಿಂತನೆ.!

ಹೊರರಾಜ್ಯಗಳಿಂದ ಬಂದಿರುವ ವಲಸಿಗರ ಕಾರಣದಿಂದ ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಅಂತಹ ವಲಸಿಗರ ಮನೆಗಳನ್ನು ಮಾತ್ರ ಸೀಲ್ಡೌನ್ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ನಾನು ಪತ್ರಕರ್ತೆ ಎಂದು ಸಪ್ಲೈಯರ್ ಥಳಿಸಿದ ಮಹಿಳೆ.!

ಹಾವೇರಿ: ಕ್ಷುಲ್ಲಕ ಕಾರಣಕ್ಕೆ ಹೋಟೆಲ್ ಸಪ್ಲೈಯರ್ಗೆ ಅಪರಿಚಿತ ಮಹಿಳೆಯೊಬ್ಬರು ಕಪಾಳಕ್ಕೆ ಹೊಡೆದ ಘಟನೆ ಹಾವೇರಿ ಜಿಲ್ಲೆಯ…

ಶಾಸಕ ಡಾ: ವೀರಣ್ಣ ಚರಂತಿಮಠ ಇವರಿಂದ 10ಕೋಟಿ.17ಲಕ್ಷ ರೂ ಗಳ ಕಾಮಗಾರಿ ಚಾಲನೆ

ಬಾಗಲಕೋಟೆ: ಕ್ಷೇತ್ರದ ಶಾಸಕ ಡಾ:ವೀರಣ್ಣ ಚರಂತಿಮಠ ತಾಲ್ಲೂಕಿನ ಬೇವೂರು ಹಾಗೂ ಬೆನಕಟ್ಟಿ ಗ್ರಾಮಗಳಲ್ಲಿ ಸೋಮವಾರ 10 ಕೋಟಿ, 17 ಲಕ್ಷ ರೂ.ಗಳ ವೆಚ್ಚದ ರಸ್ತೆ ಅಭಿವೃದ್ಧಿ ಹಾಗೂ ಸಮುದಾಯ ಭವನಗಳ ನಿರ್ಮಾಣ ಕಾಮಗಾರಿ ಗಳಿಗೆ ಚಾಲನೆ ನೀಡಿದರು.