ಸೂಪರ್ ಸ್ಟಾರ್ ಚಿತ್ರ ತಂಡದ ಗಿಫ್ಟ್ ಏನು ಗೊತ್ತಾ?

Upendra Supper Star

ಸೂಪರ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಅಭಿನಯದ ಚಿತ್ರಕ್ಕೆ ನಟ ಯಶ್ ಸಾಥ್ ನೀಡಿದ್ದಾರೆ.

ಬೆಂಗಳೂರು: ಸೂಪರ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಅಭಿನಯದ ಚಿತ್ರಕ್ಕೆ ನಟ ಯಶ್ ಸಾಥ್ ನೀಡಿದ್ದಾರೆ.

ನಿರಂಜನ್ ಅಭಿನಯದ ಸೂಪರ್ ಸ್ಟಾರ್ ಚಿತ್ರದ ಟೀಸರ್ ಗೆ ರಾಕಿಂಗ್ ಸ್ಟಾರ್ ಧ್ವನಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚೆಗಷ್ಟೇ ಸೂಪರ್ ಸ್ಟಾರ್ ಚಿತ್ರದ ಶೀರ್ಷಿಕೆ ಬಿಡುಗಡೆಯಾಗಿತ್ತು. ಈ ಸಮಾರಂಭದಲ್ಲಿ ನಟ ಉಪೇಂದ್ರ ಹಾಗೂ ಪ್ರಿಯಾಂಕ್ ಉಪೇಂದ್ರ ಭಾಗಿಯಾಗಿದ್ದರು.

ಸದ್ಯ ಚಿತ್ರದ ಅಧಿಕೃತ ಟೀಸರ್ ಬಿಡುಗಡೆ ಮಾಡಲು ಚಿತ್ರ ತಂಡ ಸಿದ್ಧತೆ ಮಾಡಿಕೊಂಡಿದೆ. ಅಲ್ಲದೇ, ಇದೇ ತಿಂಗಳು 20ರಂದು ಟೀಸರ್ ಬಿಡುಗಡೆ ಮಾಡಲು ತಂಡ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ನಿರ್ದೇಶಕ ರಮೇಶ್ ವೆಂಕಟೇಶ್ ಬಾಬು ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಅಕ್ಟೋಬರ್ ವೇಳೆಗೆ ಈ ಚಿತ್ರದ ಚಿತ್ರೀಕರಣ ಆರಂಭವಾಗುವ ಸಾಧ್ಯತೆ ಇದೆ. ಆದರೆ, ನಾಯಕಿ ಹಾಗೂ ಇತರ ಪಾತ್ರಗಳ ಕುರಿತು ಮಾತ್ರ ಇನ್ನು ಅಂತಿಮ ನಿರ್ಧಾರವನ್ನು ಚಿತ್ರ ತಂಡ ತೆಗೆದುಕೊಂಡಿಲ್ಲ.

Exit mobile version