ಆಲಮಟ್ಟಿ: 75 ನೇ ಸ್ವಾತಂತ್ರ‍್ಯದ ಅಮೃತ ಮಹೋತ್ಸವದಂಗವಾಗಿ ಸದೃಢ, ಸಶಕ್ತ ಭಾರತಕ್ಕಾಗಿ ಅಗಷ್ಟ 5 ರಂದು ಆಲಮಟ್ಟಿಯಿಂದ ತಾಳಿಕೋಟಿವರೆಗೆ ಹಮ್ಮಿಕೊಂಡಿರುವ ಯುವಜನ ಸಂಕಲ್ಪ ನಡಿಗೆ ಯಾತ್ರೆ ಯಶಸ್ವಿಗೊಳಿಸಬೇಕು ಎಂದು ಯಾತ್ರಾ ಸಂಚಾಲಕ ರಾಂಪೂರ ಸರಕಾರಿ ಪ್ರಥಮ ರ‍್ಜೆ ಕಾಲೇಜಿನ ಪ್ರಾಂಶುಪಾಲ ಪ್ರೋ.ಎಂ.ಸಿ.ಗೌಡರ ಮನವಿ ಮಾಡಿದರು. ಇಲ್ಲಿನ ಎಂ.ಎಚ್.ಎಂ.ಪ.ಪೂ.ಕಾಲೇಜಿನಲ್ಲಿ ನಡೆದ ಯಾತ್ರೆಯ ಪರ‍್ವಭಾವಿ ಸಿದ್ಧತಾ ಸಭೆಯಲ್ಲಿ ಸಂಕಲ್ಪ ನಡಿಗೆಯ ರೂಪರೇಷೆಗಳ ಮಾಹಿತಿ ನೀಡಿದರು. ಶಾಸಕ ಎ.ಎಸ್.ಪಾಟೀಲ, ನಿಡಗುಂದಿ, ಮುದ್ದೇಬಿಹಾಳ, ತಾಳಿಕೋಟಿ ತಾಲೂಕಾಡಳಿತ ರ‍್ಗ ಸಂಘಟಿತದ ಈ ಸಂಕಲ್ಪ ಯಾತ್ರೆಯ ನೇತೃತ್ವ ಶಾಸಕರ ಪುತ್ರ ಯುವ ಉದ್ಯಮಿ ಭರತಗೌಡ ಪಾಟೀಲ ವಹಿಸಿಕೊಂಡಿದ್ದಾರೆ. ಅಗಷ್ಟ 5 ರಿಂದ 8 ದಿನಗಳ ಕಾಲ ಯಾತ್ರೆ ನಡೆಯಲಿದೆ.
ಅಂದು ಇಲ್ಲಿನ ಕನಾ೯ಟಕ ಗಾಂಧಿ ಮಂಜಪ್ಪ ಹಡೇ೯ಕರ ಸ್ಮಾರಕ ಭವನದಲ್ಲಿ ಸಂಕಲ್ಪ ನಡಿಗೆ ಯಾತ್ರೆಗೆ ಚಾಲನೆ ನೀಡಲಾಗುತ್ತಿದೆ. ನಡಿಗೆ ಯಾತ್ರೆ75 ಕೀ.ಮೀ.ಕ್ರಮಿಸಿ ಕೊನೆಯಲ್ಲಿ ತಾಳಿಕೋಟಿಯಲ್ಲಿ ಸಮಾರೋಪಗೊಳ್ಳಲ್ಲಿದೆ. ಬಲಿಷ್ಠ, ಸಶಕ್ತ ಭಾರತ ನಿಮಾ೯ಣ ಮಾಡುವಲ್ಲಿ ಯುವಜನತೆಯ ಪಾತ್ರ,ಅವರಲ್ಲಿ ಹೊಸ ಆಶೋತ್ತರಗಳನ್ನು ಬಿತ್ತುವುದು, ಸ್ವಾತಂತ್ರ‍್ಯ ಹೋರಾಟಗಾರರ ಸ್ಮರಣೆ, ತ್ಯಾಗ, ಬಲಿದಾನದ ಮೆಲುಕು, ಸಹಿಷ್ಣುತೆ, ವಿವಿಧತೆಯಲ್ಲಿ ಏಕತೆಯ ತಿರುವುಗಳನ್ನು ಸಾದರಪಡಿಸುವ ನಿಟ್ಟಿನಲ್ಲಿ ಈ ಯಾತ್ರೆ ಕೈಗೊಳ್ಳಲಾಗಿದೆ. ಸ್ವಾತಂತ್ರ‍್ಯಕ್ಕಾಗಿ ಹೋರಾಡಿ ಮಡಿದ ಮಹನೀಯರಿಗೆ ಕೋಟಿ ನಮನ ಸಲ್ಲಿಸಲಾಗುತ್ತದೆ.ಇದು ಬರಿ ಉತ್ಸವಕ್ಕಾಗಿ ಯಾತ್ರೆ ನಡೆಸುತ್ತಿಲ್ಲ. ಇದೊಂದು ಸ್ವಾತಂತ್ರ‍್ಯ ಶಕ್ತಿಯ ಅಭೂತಪರ‍್ವ ಅಮೃತ ಸವಿಯುವ ಸವಿ ಕ್ಷಣ. ಸೇನಾನಿಗಳ ಸ್ಪರ‍್ತಿಯ ಅಮೃತ,ಹೊಸ ಆಲೋಚನೆಗಳ ಮತ್ತು ನವ ನರ‍್ಣಯಗಳ ಸ್ವಾವಲಂಬನೆಯ ಅಮೃತ ಘಳಿಗೆಯಾಗಿದೆ. ಸಂಕಲ್ಪ ಯಾತ್ರೆಯ ಸದುದ್ದೇಶ ಆಶಯವಾಗಿದೆ ಎಂದವರು ತಿಳಿಸಿದರು.
75 ನೇ ಸ್ವಾತಂತ್ರ‍್ಯ ವಷಾ೯ಚರಣೆ ಈ ಶುಭ ಸಂರ‍್ಭದಲ್ಲಿ ಹಮ್ಮಿಕೊಂಡ ಸಂಕಲ್ಪ ನಡಿಗೆ ಯಾತ್ರೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಯುವ ಜನತೆ ಪಾಲ್ಗೊಳ್ಳಬೇಕು. ಉದಾತ ಭಾತೃತ್ವ,ಸೌಹರ‍್ದತೆಯ ಭರವಸೆಯ ಸಂಕಲ್ಪದೊಂದಿಗೆ ನಡೆಯಬೇಕು. ಜನತೆಗೆ ಆ ಮೂಲಕ ನವ ಪ್ರೇರಣೆ ಹುರಿದುಂಬಿಸಬೇಕು. ರ‍್ವರೆಲ್ಲರು ಕೈಜೋಡಿಸಿ ಸಹಕರಿಸಬೇಕು ಎಂದು ಅವರು ಕೇಳಿಕೊಂಡರು. ನಡಿಗೆಯಲ್ಲಿ ಭಾವವಹಿಸುವ ಯುವಕರು, 18 ವಷ೯ ಮೇಲ್ಪಟ್ಟ ವಿದ್ಯರ‍್ಥಿಗಳು ಕಡ್ಡಾಯ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬೇಕು. ನಡಿಗೆ ಯಾತ್ರೆಯಲ್ಲಿ ಒಂದು ಅಥವಾ ಎಂಟು ದಿನ ಭಾಗವಹಿಸಬಹುದು.ಆ ಬಗ್ಗೆ ನಿಖರ ಮಾಹಿತಿ ಒದಗಿಸಬೇಕು. ಊಟ,ಉಪಚಾರ,ವಸತಿ ಇತ್ಯಾದಿ ಸೌರ‍್ಯ ಕಲ್ಪಿಸಲು ಮುಂಚಿತವಾಗಿಯೇ ಹೆಸರು ನೋಂದಾಯಿಸಿಕೊಳ್ಳಬೇಕು. 8 ದಿನದ 75 ಕೀ.ಮೀ. ಸಂಕಲ್ಪ ನಡಿಗೆ ಯಾತ್ರೆ ಕುರಿತು ಹೆಚ್ಚಿನ ಮಾಹಿತಿಗಾಗಿ ಫೇಸ್ ಬುಕ್, ಇನ್ ಸ್ಟಾಗ್ರಾಂ ನೋಡಬಹುದು ಎಂದರು. ಯುವ ಸಂಕಲ್ಪ ನಡಿಗೆ ಯಾತ್ರೆಯ ರೂಪರೇಷೆಗಳನ್ನು ವಿವರಿಸಿದ ಅವರು, 5 ರಂದು ಆಲಮಟ್ಟಿಯಿಂದ ನಿಡಗುಂದಿ, ಯಲಗೂರ,ಬಳಬಟ್ಟಿ, ಕಾಳಗಿ ಗ್ರಾಪಂ ಮರ‍್ಗಸಾಗಿ ಹುಲ್ಲೂರದಲ್ಲಿ ವಾಸ್ತವ್ಯ ಮಾಡಲಾಗುತ್ತದೆ. 6 ರಂದು ಅಲ್ಲಿಂದ ಬಸರಕೋಡ,ಯರಝರಿ,ರೂಡಗಿ ಮರ‍್ಗ ಗೆದ್ದಲಮರಿ ಗೆ ತಲುಪಿ ವಾಸ್ತವ್ಯ, ಅದರಂತೆ 7 ರಂದು ಗೆದ್ದಲಮರಿಯಿಂದ ಸಾಗುವ ಯಾತ್ರೆ ಮುದ್ದೇಬಿಹಾಳ ನಗರ, ಹಡಲಗೇರಿ, ಬಿದರಕುಂದಿ ಸಂಚರಿಸಿ ಮುದ್ದೇಬಿಹಾಳದಲ್ಲಿ ವಾಸ್ತವ್ಯ ಹೂಡಲಿದೆ. 8 ರಂದು ಮುದ್ದೇಬಿಹಾಳ ದಿಂದ ಹೊರಟು ಢವಳಗಿ, ಕವಡಿಮಟ್ಟಿ, ಮಡಿಕೇಶ್ವರ, ಕುಂಟೋಜಿ, ಕೋಳೂರ,ತಂಗಡಗಿ ಮರ‍್ಗ ಹಿರೇಮುರಾಳದಲ್ಲಿ ವಾಸ್ತವ್ಯ ಮಾಡಲಿದೆ. 9 ರಂದು ಅಲ್ಲಿಂದ ಹೊರಟು ರಕ್ಕಸಗಿ, ಆಲೂರು,ನಾಗರಬೆಟ್ಟ ಮೂಲಕ ನಾಲತವಾಡಕ್ಕೆ ತಲುಪುವುದು. ಅಲ್ಲಿ ರಾತ್ರಿ ವಾಸ್ತವ್ಯ ಮಾಡಿ ಮರುದಿನ 10 ರಂದು ಬಿಜ್ಜೂರು, ನಾಗಬೇನಾಳ ಮರ‍್ಗ ಅಡವಿ ಸೋಮನಾಳ ಸೇರಲಿದೆ. 11 ರಂದು ಅಲ್ಲಿಂದ ಬೆಳಿಗ್ಗೆ ಹೊರಟು ಇಂಗಳಗೇರಿ,ಅಡವಿ ಸೋಮನಾಳ,ಮೂಕಿಹಾಳ,ಬಾವೂರು ಮರ‍್ಗ ಮಿಣಜಗಿ ಸೇರಲಿದೆ.

12 ರಂದು ಮಿಣಜಗಿ, ಕೊಣ್ಣೂರು, ಹಿರೂರ ಮೂಲಕ ಅಂತಿಮ ತಾಳಿಕೋಟಿಯಲ್ಲಿ ಬೃಹತ್ ಕರ‍್ಯಕ್ರಮದೊಂದಿಗೆ ಯಾತ್ರೆ ಮುಕ್ತಾಯಗೊಳ್ಳಲ್ಲಿದೆ ಎಂದು ಯಾತ್ರೆ ಸಾಗುವ ಮರ‍್ಗಗಳ ಮಾಹಿತಿ ಪ್ರೋ.ಎಂ.ಸಿ.ಗೌಡರ ನೀಡಿದರು. ಈ ಸಂರ‍್ಭದಲ್ಲಿ ಮುದ್ದೇಬಿಹಾಳ ಸರಕಾರಿ ಪಿಯು ಕಾಲೇಜಿನ ಪ್ರಾಚರ‍್ಯ ಸದಾಶಿವ ಅಂಗಡಿ, ಪ್ರೋ.ಡಿ.ಬಿ.ವಡವಡಗಿ ಸೇರಿದಂತೆ ಸ್ಥಳೀಯ ಕಾಲೇಜಿನ ಪ್ರಾಂಶುಪಾಲ, ಮುಖ್ಯ ಶಿಕ್ಷಕರು, ಸಿಬ್ಬಂದಿಗಳು ಇತರರು ಇದ್ದರು.

Leave a Reply

Your email address will not be published. Required fields are marked *

You May Also Like

ಚಿಲಝರಿ ಗ್ರಾಮದಲ್ಲಿ ಸಾಮೂಹಿಕ ವಿವಾಹ

ಸಾಮೂಹಿಕ ವಿವಾಹಗಳು ಸಮಾಜದಲ್ಲಿ ಸೌಹಾರ್ದತೆ ಗಟ್ಟಿಗೊಳಿಸಿ ಮಾನವೀಯ ಮೌಲ್ಯಗಳು ವೃದ್ದಿಸುತ್ತವೆ ಈ ನಿಟ್ಟಿನಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಸಾಮೂಹಿಕ ವಿವಾಹಗಳಿಗೆ ಒತ್ತು ನೀಡಿ ಸ್ವಾಸ್ಥ್ಯೇಯ ಸಮಾಜ ನಿರ್ಮಾಣಕ್ಕೆ ಮುಂದಾಗಿ ಎಂದು ಅಕ್ಕನ ಬಳಗ ಅಧ್ಯಕ್ಷೆ ಸಂಯುಕ್ತಾ ಬಂಡಿ ಹೇಳಿದರು.

ತೋಳದ ದಾಳಿಗೆ 15 ಕುರಿಗಳು ಬಲಿ

ಶಿರಹಟ್ಟಿ: ತಾಲೂಕಿನ ಮಾಚೇನಹಳ್ಳಿ ಗ್ರಾಮದ ಹೊರವಲಯದಲ್ಲಿದ್ದ ಕುರಿ ಹಿಂಡಿಗೆ ಶನಿವಾರ ರಾತ್ರಿ ತೋಳವೊಂದು ದಾಳಿ ಮಾಡಿದ…

ಡಿಸಿ ಬಂಗಲೆಯಲ್ಲಿ ಶೂಟ್ ಮಾಡಿಕೊಂಡ ಪೊಲೀಸ್ ಪೇದೆ

ಜಿಲ್ಲಾಧಿಕಾರಿ ಬಂಗಲೆಯಲ್ಲಿಯೇ ಗುಂಡು ಹಾರಿಸಿಕೊಂಡು ಪೊಲೀಸ್ ಪೇದೆಯೊರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೆಕ್ಕೆಜೋಳ ರೈತರಿಗೆ ಪರಿಹಾರ: ಇದರಲ್ಲಿ ಸಂಶಯ ಬೇಡ

ಕೊಪ್ಪಳ: ಸರ್ಕಾರ ಇಟ್ಟ ಹೆಜ್ಜೆ ಹಿಂದೆ ಇಡುವುದಿಲ್ಲ. ರೈತರನ್ನು ಎಂದಿಗೂ ಕೈಬಿಡುವುದಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೈತರ…