ಯಾವುದೇ ಬ್ಯಾಂಕ್ ತನ್ನ ಜಾಗವನ್ನು ಇತರೆ ಉದ್ದೇಶಗಳಿಗಾಗಿ ಲೀಸ್ ಅಥವಾ ಬಾಡಿಗೆಗೆ ಕೊಡುವಂತಿಲ್ಲ.

ಮುಂಬೈ: ಖಾಸಗಿ ಬ್ಯಾಂಕಿನ ಮುಖ್ಯಸ್ಥರೊಬ್ಬರು ತಮ್ಮ ಪತ್ನಿಯ ಎನ್.ಜಿ.ಒ.ಗೆ ತಮ್ಮ ಬ್ಯಾಂಕಿನ ಪಕ್ಕದ ಜಾಗವನ್ನು ಬಳಸಿಕೊಳ್ಳಲು ನೀಡಿದ್ದ ವಿಷಯ ಈಗ ಬೆಳಕಿಗೆ ಬಂದಿದೆ. ತಿಂಗಳಿಗೆ ನಾಮಕಾವಸ್ಥೆ ಒಂದೇ ಒಂದು ರೂಪಾಯಿ ಬಾಡಿಗೆಯಷ್ಟೇ ಎಂದು ಎನ್.ಡಿ.ಟಿ.ವಿ ವರದಿ ಮಾಡಿದೆ.

ಯೆಸ್ ಬ್ಯಾಂಕ್ ಸೇರಿದಂತೆ ಕೆಲವು ಬ್ಯಾಂಕ್ ಗಳು ದಿವಾಳಿ ಹೊಂದಿದ್ದರ ಹಿಂದೆ ಬ್ಯಾಂಕ್ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರ ಸ್ವಾರ್ಥವಿತ್ತು ಎನ್ನುವುದನ್ನು ನೋಡಿದ್ದೇವೆ.

ಈಗ ಐಡಿಎಫ್ಸಿ ಬ್ಯಾಂಕ್ ಅಧ್ಯಕ್ಷ ರಾಜೀವ್ ಲಾಲ್ ದಕ್ಷಿಣ ಮುಂಬೈನ ಬ್ಯಾಂಕಿನ ಕೇಂದ್ರ ಕಚೇರಿಯ ಪಕ್ಕದ ಬೆಲೆಬಾಳುವ ಜಾಗವನ್ನು 2015-19ರ ಅವಧಿಗೆ ಅವರ ಪತ್ನಿಯ ಎನ್.ಜಿ.ಒ ಏಷ್ಯಾ ಸೊಸೈಟಿ ಇಂಡಿಯಾ ಸೆಂಟರ್ (ಎ.ಎಸ್ಐ.ಸಿ)ಗೆ ಕೇವಲ ಒಂದು ರೂ. ಮಾಸಿಕ ಬಾಡಿಗೆಗೆ ನೀಡಿದ್ದರು.

ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಸೆಕ್ಷನ್ 6 ಮತ್ತು 9ರ ಪ್ರಕಾರ ಇದು ಅಪರಾಧ. 2015-18ರ ಅವಧಿಯಲ್ಲಿ ಲಾಲ್ ಬ್ಯಾಂಕಿನ ಎಂಡಿಯಾಗಿದ್ದರು. 2016-17 ಮತ್ತು 2017-18ರ ವಾರ್ಷಿಕ ವರದಿಯಲ್ಲಿ ಈ ವಿಷಯವನ್ನು ಅವರು ಮರೆಮಾಚಿದ್ದರು. 2018ರಲ್ಲಿ ಅವರು ಬ್ಯಾಂಕಿನ ಚೇರ್ಮನ್ ಆದ ಬಳಿಕ ಐಡಿಎಫ್ಸಿ ಫಸ್ಟ್ ಬ್ಯಾಂಕ್ ಎಂದು ಹೆಸರು ಬದಲಾಯಿಸಲಾಗಿದೆ.

ಬ್ಯಾಂಕುಗಳ ಮ್ಯಾನೇಜರುಗಳು, ಎಂಡಿಗಳು ಮತ್ತು ಚೇರ್ಮನ್ಗಳು ಆರ್.ಬಿ.ಐ ನಿಯಮಾವಳಿ ಉಲ್ಲಂಘಿಸಿ ಸ್ವಾರ್ಥ ಮೆರೆಯುವ ಕಾರಣದಿಂದ ಬಹುಪಾಲು ಖಾಸಗಿ ಬ್ಯಾಂಕುಗಳು ತಮ್ಮ ಸಾಮಾನ್ಯ ಗ್ರಾಹಕರನ್ನು ವಂಚಿಸುತ್ತಿವೆ. ಲಾಲ್ ಪ್ರಕರಣ ಒಂದು ತಾಜಾ ಉದಾಹರಣೆ ಅಷ್ಟೇ. ಆರ್.ಬಿ.ಐ. ಏನು ಕ್ರಮ ಕೈಗೊಳ್ಳುತ್ತದೆ ನೋಡಬೇಕು.

Leave a Reply

Your email address will not be published.

You May Also Like

ಪಕ್ಷದ ಸಿದ್ಧಾಂತ, ತತ್ವಗಳನ್ನು ಕಾರ್ಯಕರ್ತರು ಅರಿತುಕೊಳ್ಳಬೇಕು: ಸಂಕನೂರ್

ಭಿನ್ನತೆ ಹಾಗೂ ವೈಶಿಷ್ಟ್ಯತೆಯಿಂದ ಕೂಡಿರುವ ಪಕ್ಷ ಬಿಜೆಪಿಯಾಗಿದೆ. ಪಕ್ಷದ ಸಿದ್ಧಾಂತ, ತತ್ವಗಳನ್ನು ಕಾರ್ಯಕರ್ತರಿಗೆ ತಿಳಿಸಿ ಅವರಲ್ಲಿ ನಾಯಕತ್ವದ ಗುಣ ಬೆಳೆಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ್ ಹೇಳಿದರು.

ರಾಜ್ಯದಲ್ಲಿಂದು ಸೋಂಕಿನ ಸುಂಟರಗಾಳಿ: 3176 ಪಾಸಿಟಿವ್, ಯಾವ ಜಿಲ್ಲೆಯಲ್ಲಿ ಎಷ್ಟು?

ರಾಜ್ಯದಲ್ಲಿಂದು 3176 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 47253 ಕ್ಕೆ ಏರಿಕೆಯಾದಂತಾಗಿದೆ.

ಗದಗ ಜಿಲ್ಲೆ ರೈತರಿಗೆ ಉಪಯುಕ್ತ ಮಾಹಿತಿ: ಮೊಬೈಲ್ ನಲ್ಲೆ ಸಿಗಲಿದೆ ಮಳೆ, ಬೆಳೆ ವಿವರ

ಗದಗ: ಕೃಷಿ ಹಾಗೂ ಹವಾಮಾನ ಸಂಬಂಧಿತ ಆ್ಯಪ್‌ಗಳುಇತ್ತೀಚಿಗೆ ಹವಾಮಾನ ವೈಪರೀತ್ಯದಿಂದಾಗಿ ಕೃಷಿ ಉತ್ಪಾದನೆ ಕುಂಠಿತಗೊಂಡಿದೆ. ಬರ,…

ಸರಕಾರ ಮಂಜಪ್ಪ ಹಡೇ೯ಕರ ಉತ್ಸವ ಆಚರಿಸಲಿ- ಶಂಕರ ಜಲ್ಲಿ

ಆಲಮಟ್ಟಿ : ಅನ್ನದಾಸೋಹ, ಖಾದಿಧಾರಿ, ಪತ್ರಕರ್ತ, ಸಂಪಾದಕರಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ವಿಶೇಷ ಕೊಡುಗೆ ನೀಡಿದ ಅನರ್ಘ್ಯ…