ಬೆಂಗಳೂರು: ಮಹಾಮಾರಿ ಕರೊನಾ ವೈರಸ್ನಿಂದ ಉಂಟಾದ ಕಠಿಣ ಪರಿಸ್ಥಿತಿನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಯಶ್ವಿಯಾದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಮೆಚ್ಚುಗೆ ವ್ಯಕ್ತಪಡಿಸಿದರು.
ಏಳು ದಿನಗಳ ವಿಧಾನಮಂಡಲ ಅಧಿವೇಶದ ಮೊದಲ ದಿನದಂದು ಜಂಟಿ ಸದನ ಉದ್ದೇಶಿಸಿ ಮಾತನಾಡಿದ ಅವರು ಕೋವಿಡ್ ವಾರಿಯರ್ಸ್ ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಕೋವಿಡ್ನಿಂದ ಮೃತಪಟ್ಟವರಿಗೆ ಸರ್ಕಾರ ೩೦ ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಕೋವಿಡ್ ರೋಗಿಗಳಿಗೆ ಸರ್ಕಾರದಿಂದ ೨೪೮ ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಸುಮಾರು ೧.೩೬ ಲಕ್ಷ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ ಎಂದು ಸರ್ಕಾರವನ್ನು ಕಾರ್ಯವನ್ನು ರಾಜ್ಯಪಾಲ ವಜುಭಾಯಿ ವಾಲಾ ಕೊಂಡಾಡಿದರು. ಬೇಳೆಕಾಳುಗಳ ಉತ್ಪಾದನೆಯಲ್ಲಿ ಪ್ರಥಮ ಹಾಗೂ ಹಾಲು ಉತ್ಪಾದನೆಯಲ್ಲಿ ಎರಡನೇ ಸ್ಥಾನ ಪಡೆದಿದ್ದೇವೆ. ದೇಶದ ಮಾಹಿತಿ ತಂತ್ರಜ್ಞಾನಕ್ಕೆ ಶೇಕಡಾ ೪೦ರಷ್ಟು ಕೊಡುಗೆಯನ್ನು ನಾವು ನೀಡಿದ್ದೇವೆ. ಕರೊನಾ ಸಂಕಷ್ಟದಲ್ಲೂ ವಾಣಿಜ್ಯ ತೆರಿಗೆ ೩೦,೪೬೭ ಕೋಟಿ ರೂ. ಹಾಗು ಅಬಕಾರಿ ಇಲಾಖೆ ೧೬೭೮೮ ಕೋಟಿ ರೂ. ರಾಜಸ್ವ ಸಂಗ್ರಹವಾಗಿದೆ. ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿಯಲ್ಲಿ ಆಹಾರ ಭದ್ರತೆಯನ್ನು ಸರ್ಕಾರ ಖಾತರಿಪಡಿಸಿದೆ. ಕರೊನಾ ಲಾಕ್ಡೌನ್ ಸಮಯದಲ್ಲಿ ೯೦ ಲಕ್ಷ ಪ್ಯಾಕ್ ಮಾಡಿದ ಪೌಷ್ಟಿಕ ಆಹಾರ ಪೊಟ್ಟಣಗಳನ್ನು ಒದಗಿಸಿದೆ ಎಂದು ಮೂಲಕ ಸರ್ಕಾರ ಕಾರ್ಯಕ್ಕೆ ಫುಲ್ ಮಾರ್ಕ್ಸ್ ನೀಡಿದರು. ರೈಲುಗಳ ಮೂಲಕ ಕಾರ್ಮಿಕರನ್ನು ಅವರವರ ಸ್ವಂತ ಊರುಗಳಿಗೆ ಕಳುಹಿಸುವ ಕೆಲಸ ಮಾಡಿದೆ. ಅಸಂಘಟಿತ ಕಾರ್ಮಿಕರಿಗೆ ೫,೩೭೨ ಕೋಟಿ ರೂ. ಮೌಲ್ಯದ ಹಣಕಾಸು ನೆರವು ನೀಡಿದೆ. ಸುಮಾರು ೬೩,೫೯,೦೦೦ ಫಲಾನುಭವಿಗಳಿಗೆ ನೆರವು ಸಿಕ್ಕಿದೆ. ೧೧,೭೭೦ ಚರ್ಮ ಕುಶಲ ಕರ್ಮಿಗಳಿಗೆ ತಲಾ ೫೦೦೦ ರೂಪಾಯಿಗಳಂತೆ ಸಹಾಯ ಧನ ನೀಡಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ನಿಧಿಯಲ್ಲಿ ೫೧ ಲಕ್ಷ ರೈತರಿಗೆ ೨೦೦೦ ರೂಪಾಯಿ ಹೆಚ್ಚುವರಿ ಮೊತ್ತದೊಂದಿಗೆ ೧೦೨೦ ಕೋಟಿ ರೂಪಾಯಿಗಳನ್ನು ಸರ್ಕಾರ ಮಂಜೂರು ಮಾಡಿದೆ ಎಂದರು.You May Also Like
ಸಸ್ಯ ಪ್ರೇಮ ನಿತ್ಯ ಮೂಡಲಿ-ಶಿವಾನಂದ ಪಟ್ಟಣಶೆಟ್ಟರ
ವರದಿ : ಗುಲಾಬಚಂದ ಜಾಧವಆಲಮಟ್ಟಿ: ಸಕಲ ಜೀವ ಸಂಕುಲಗಳಿಗೆ ಪ್ರಕೃತಿ ಮಾತೆಯೆ ಆಧಾರ.ಪ್ರಕೃತಿ ಸೃಷ್ಟಿಯಿಂದಲೇ ನಮಗೆಲ್ಲ…
- ಉತ್ತರಪ್ರಭ
- June 6, 2022
ಮಹಿಳೆಯರ ಬಟ್ಟೆ ಕದಿಯುತ್ತಿದ್ದ ಕಳ್ಳನಿಗೆ ಥಳಿತ..!
ಹುಬ್ಬಳ್ಳಿ: ಚಿನ್ನಾಭರಣ ಕದ್ದಿರೋ ಕಳ್ಳರನ್ನು ನೋಡಿದ್ದೇವೆ. ಮನೆ ದರೋಡೆ ಮಾಡಿರೋದನ್ನು ನೋಡಿದ್ದೇವೆ. ಆದ್ರೆ ಮಹಿಳೆಯರ ಬಟ್ಟೆ…
- ಉತ್ತರಪ್ರಭ
- June 23, 2020
2020ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ
ಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ ‘ವಿಭಾ ಸಾಹಿತ್ಯ ಪ್ರಶಸ್ತಿ-2020’ಕ್ಕಾಗಿ ಕನ್ನಡದ ಕವಿ/ಕವಿಯಿತ್ರಿಯರಿಂದ ಮೂವತ್ತಕ್ಕೂ ಹೆಚ್ಚು…
- ಉತ್ತರಪ್ರಭ
- June 20, 2020
ಲಾಕ್ ಡೌನ್ ಎಡವಟ್ಟು : ತವರಿಂದ ಬಂದ ಪತ್ನಿಗೆ ಪತಿಯಿಂದ ಲಾಕ್ಔಟ್!
ಬೆಂಗಳೂರು: ಸಂದರ್ಭದ ಬಂಧಿಯಾಗಿ ಆಕೆ 3 ತಿಂಗಳು ಕಾಲ ತವರಲ್ಲೇ ಉಳಿಯಬೇಕಾಯಿತು. ಗಂಡ-ಮಗ ಬೆಂಗಳೂರಿನಲ್ಲಿ, ಆಕೆ…
- ಉತ್ತರಪ್ರಭ
- July 7, 2020