ಬೆಂಗಳೂರು: ಕೊರೊನಾ ತನ್ನ ಆರ್ಭಟವನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದೆ. ಸದ್ಯ ಇದು ಪರಪ್ಪನ ಅಗ್ರಹಾರಕ್ಕೂ ಎಂಟ್ರಿ ಕೊಟ್ಟಿದೆ.

ಇಲ್ಲಿಯ ಸೆಂಟ್ರಲ್ ಜೈಲಿನಲಿದ್ದ 20 ಕೈದಿಗಳು ಮತ್ತು 6 ಜನ ಜೈಲು ಸಿಬ್ಬಂದಿಗೂ ಸೋಂಕು ತಗುಲಿದೆ. ಹೊಸದಾಗಿ ಬಂಧಿತರಾಗಿ ಜೈಲು ಸೇರಿರುವ ಕೈದಿಗಳಲ್ಲಿಯೂ ಸೋಂಕು ಕಾಣಿಸಿಕೊಂಡಿದೆ.

ಮೂರು ದಿನಗಳ ಹಿಂದೆ ಜೈಲಿನಲ್ಲಿದ್ದ ಸುಮಾರು 150 ಜನರ ಸ್ಯಾಂಪಲ್ ಪಡೆಯಲಾಗಿತ್ತು. ಈಗ ಇದರ ವರದಿ ಬಂದಿದ್ದು, 150 ಜನರ ಪೈಕಿ ಜೈಲು ಸಿಬ್ಬಂದಿಗೂ ಸೇರಿದಂತೆ 26 ಜನರಲ್ಲಿ ಸೋಂಕು ದೃಢಪಟ್ಟಿದೆ. ಹೊಸದಾಗಿ ಬಂದ 450 ಆರೋಪಿಗಳನ್ನು ಬೇರೆ ಕೈದಿಗಳ ಜೊತೆ ಸಂಪರ್ಕ ಇಲ್ಲದಂತೆ ಮಾಡಲಾಗಿತ್ತು. ಜೈಲಿಗೆ ಬಂದ ಪ್ರತಿ ಕೈದಿಯನ್ನು 21 ದಿನ ಕ್ವಾರಂಟೈನ್ ಮಾಡಲಾಗುತಿತ್ತು. ಕ್ವಾರಂಟೈನ್ ನಲ್ಲಿದ್ದ ಕೈದಿಗಳಿಗೆ ಈಗ ಕೋವಿಡ್ ದೃಢಪಟ್ಟಿದೆ. ನಾಳೆ ಮತ್ತಷ್ಟು ಜನರ ಸ್ಯಾಂಪಲ್ ಪಡೆಯಲಾಗುತ್ತದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You May Also Like

ಮೌಲ್ಯ ಮಾಪನವಿಲ್ಲದೆ ವಿಟಿಯು ಪರೀಕ್ಷೆ ತೇರ್ಗಡೆಗೆ ಅಭಿಯಾನ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ಅಡಿಯಲ್ಲಿ ಸುಮಾರು 2000ಕ್ಕೂ ಹೆಚ್ಚು ಕಾಲೇಜುಗಳು ಮಾನ್ಯತೆ ಪಡೆದಿವೆ. ಈ ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳು ಮೌಲ್ಯಮಾಪನವಿಲ್ಲದೆ ವಿಟಿಯು ಎಲ್ಲಾ ವಿದ್ಯಾಥಿಗಳನ್ನು ತೆರ್ಗಡೆ ಮಾಡಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಪ್ರಾರಂಭಿಸಿದ್ದಾರೆ.

ಅಗಸ್ತ್ಯ ತೀರ್ಥ ಬಾವಿಯಲ್ಲಿ ನೀರುಪಾಲಾದ ಯುವಕ

ದೀಪಾವಳಿ ಹಬ್ಬಕ್ಕೆಂದು ಸಂಬಂಧಿಕರ ಊರಿಗೆ ಬಂದಿದ್ದ ಯುವಕ ನೀರುಪಾಲಾದ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.

ಆಲಮಟ್ಟಿ: ಬಸವಭೂಮಿ ಯಾತ್ರಾಥಿ೯ಗಳಿಗೆ ಅದ್ದೂರಿ ಸ್ವಾಗತಾತೀಥ್ಯ

ಆಲಮಟ್ಟಿ : ಆಲಮಟ್ಟಿಗೆ ಆಗಮಿಸಿದ್ದ ಬಸವಭೂಮಿ ಯಾತ್ರೆಯ ಸಹಸ್ರಾರು ಬಸವಭಕ್ತ ಯಾತ್ರಾಥಿ೯ಗಳಿಗೆ ಅದ್ದೂರಿ ಸ್ವಾಗತದೊಂದಿಗೆ ಬರಮಾಡಿಕೊಂಡು…