ಯುಎಇಯಿಂದ 30 ಕೆಜಿ ಚಿನ್ನ ಸಾಗಿಸಿದ ಆರೋಪ ಎದುರಿಸುತ್ತಿರುವ ಸ್ವಪ್ನ ಟೀಮ್ ಇದೇ ಮಾದರಿಯಲ್ಲಿ ಒಟ್ಟು 180 ಕೆಜಿ ಚಿನ್ನ ಸಾಗಿಸಿದೆ ಎನ್ನಲಾಗಿದೆ.

ತಿರುವನಂತಪುರ: ಯುಎಇಯಿಂದ ಕೇರಳಕ್ಕೆ 30 ಕೆಜಿ ಚಿನ್ನವನ್ನು ರಾಯಭಾರ ಕಚೇರಿಯ ಛಾಯೆಯಲ್ಲಿ ಸಾಗಿಸಿರುವ ಸ್ವಪ್ನ ಸುರೇಶ್ ಮತ್ತು ಸರಿತ್ ಅವರನ್ನು ತಿರುವನಂತಪುರದ ವಿವಿಧ ಸ್ಥಳಗಳಿಗೆ ಶನಿವಾರ ಕರೆದೊಯ್ದು ಸಾಕ್ಷ್ಯ ಸಂಗ್ರಹಿಸಿದ ಎನ್ಐಎ ಅಧಿಕಾರಿಗಳು ಭಾನುವಾರವೂ ಈ ಪ್ರಕ್ರಿಯೆಯನ್ನು ಮುಂದುವರೆಸಿದ್ದಾರೆ.

ಇನ್ನಿಬ್ಬರು ಆರೋಪಿಗಳಾದ ಸಂದೀಪ್ ನಾಯರ್ ಮತ್ತು ರಮೀಜ್ ಸಾಕಷ್ಟು ಮಾಹಿತಿ ನೀಡಿದ್ದು, 30 ಕೆಜಿ ಚಿನ್ನ ಸಾಗಿಸಿದ ಮಾದರಿಯಲ್ಲೇ 12-13 ಸಲ ಸಾಗಾಣಿಕೆ ನಡೆಸಿದ್ದು 180 ಕೆಜಿಗೂ ಅಧಿಕ ಚಿನ್ನ ಸಾಗಿಸಿದ್ದಾರೆ ಎಂದು ಎನ್ಐಎ ತನಿಖಾಧಿಕಾರಿ ಎನ್ಡಿಟಿವಿಗೆ ತಿಳಿಸಿದ್ದಾರೆ.

ತಿರುವನಂತಪುರದ ಯುಎಇ ರಾಯಭಾರ ಕಚೇರಿಯ ಅಧಿಕಾರಿ ಈಗ ವಾಪಾಸ್ ಹೋಗಿದ್ದು, ಅವರ ವಿಚಾರಣೆಯ ನಂತರ ಮಹತ್ವದ ಮಾಹಿತಿ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಅಧಿಕಾರಿಯ ಹೆಸರಿಗೇ ಚಿನ್ನದ ಬ್ಯಾಗ್ ಬರುತ್ತಿದ್ದವು ಎಂದೂ ಅವರು ತಿಳಿಸಿದ್ದಾರೆ.

ಈ ನಡುವೆ ಕೊನ್ಸುಲ್ ಜನರಲ್ ಕಚೇರಿಗೆ ಸಂಬಂಧಿಸಿದ ಕೇರಳ ಪೊಲೀಸ್ ಅಧಿಕಾರಿಯೊಬ್ಬರಿಗೆ ಜೀವ ಬೆದರಿಕೆ ಕರೆ ಬಂದಿದ್ದವು. ಈಗ ಅವರ ಮೊಣಕೈಗಳಿಗೆ ಗಾಯವಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಹೇಳಿಕೆ ಪಡೆಯಲಾಗಿದೆ.

ಈ ಚಿನ್ನ ಅಕ್ರಮ ಸಾಗಾಟದ ಪ್ರಕರಣದಲ್ಲಿ ಕೇರಳ ಸಿಎಂ ಕಚೇರಿಯ ಅಧಿಕಾರಿಯನ್ನು ಈಗಾಗಲೇ ವಜಾ ಮಾಡಲಾಗಿದೆ.

Leave a Reply

Your email address will not be published. Required fields are marked *

You May Also Like

ಪ್ರಧಾನಿ ಕಚೇರಿಯ ಆದೇಶಕ್ಕೂ ಇಲ್ಲಿ ಸಿಗುತ್ತಿಲ್ಲ ಗೌರವ!

ಚಿತ್ರದುರ್ಗ : ರಾಜ್ಯ ಸೇರಿದಂತೆ ದೇಶದಲ್ಲಿನ ಇನ್ನೂ ಹಲವು ಗ್ರಾಮಗಳು ಅಭಿವೃದ್ಧಿಯಿಂದ ಹಿಂದೆ ಉಳಿದಿವೆ. ಕೆಲವು ಗ್ರಾಮಗಳಲ್ಲಿನ ಪರಿಸ್ಥಿತಿಗಳಂತೂ ಹೇಳತೀರದಾಗಿದೆ.

ಗುರುಪೂರ್ಣಿಮೆ ನಿಮಿತ್ತ ಸನಾತನ ಸಂಸ್ಥೆಯ ವಿಶೇಷ ಲೇಖನ !

  ಗುರುಗಳ ವೈಶಿಷ್ಟ್ಯಗಳು  ಶಿಷ್ಯನಿಗೆ ಭಗವಂತನ ಅಸ್ತಿತ್ವದ ಮನವರಿಕೆ ಮಾಡಿಕೊಟ್ಟು ಈಶ್ವರಪ್ರಾಪ್ತಿ ಮಾಡಿಸಿಕೊಡುವುದು: ಹೇಗೆ ಅಮಾವಾಸ್ಯೆಯಂದು…

ಅರಣ್ಯ ಇಲಾಖೆಯ ದೌರ್ಜನ್ಯ : ರೈತ ಮಹಿಳೆ ಬಲಿ

ಆಕ್ರೋಶಗೊಂಡ ಗ್ರಾಮಸ್ಥರು: ಅರಣ್ಯಾಧಿಕಾರಿಗಳ ದಿಗ್ಬಂಧನ ಉತ್ತರಪ್ರಭಮುಂಡರಗಿ: ತಾಲೂಕಿನ ಕೆಲೂರ ಗ್ರಾಮದ ಬಗರಹುಕುಂ ಸಾಗುವಳಿ ಮಾಡುವ ರೈತರನ್ನು…