ಉತ್ತರಪ್ರಭ ಸುದ್ದಿ
ಆಲಮಟ್ಟಿ: ಮನುಷ್ಯನಿಗೆ ಉಸಿರು ಎಷ್ಟು ಮುಖ್ಯವೋ ಜೀವನ ಚೈತ್ರದ ನೆಮ್ಮದಿಗೆ ಸಸ್ಯ ಪ್ರೇಮ ಕೂಡಾ ಅಷ್ಟೇ ಮುಖ್ಯ. ಗಿಡಮರಗಳು ಸದಾ ಊಜಿ೯ತದಲ್ಲಿದ್ದರೆ ಮಾತ್ರ ಶುದ್ಧ ಪರಿಸರದಿಂದ ನಮ್ಮ ಆರೋಗ್ಯ ಹಿತ ಕಾಪಾಡಿಕೊಳ್ಳಲು ಸಾಧ್ಯ ಎಂದು ಗದುಗಿನ ಜಗದ್ಗುರು ಶ್ರೀ ತೋಂಟದಾರ್ಯ ವಿದ್ಯಾಪೀಠದ ಹಾಗು ಆಲಮಟ್ಟಿ ಎಸ್.ವಿ.ವಿ.ಸಂಘದ ಕಾರ್ಯದರ್ಶಿ ಶಿವಾನಂದ ಪಟ್ಟಣಶೆಟ್ಟರ ಅಭಿಪ್ರಾಯಿಸಿದರು. ಇಲ್ಲಿನ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆ, ಎಂ.ಎಚ್.ಎಂ.ಪ.ಪೂ.ಮತ್ತು ಪದವಿ ಕಾಲೇಜು ಕ್ಯಾಂಪಸ್ ಆವರಣದಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ನಡೆಯುತ್ತಿರುವ ಸಹಸ್ರಾರು ಸಸಿಗಳ ನೆಡುವ ವೃಕ್ಷ ಅಭಿಯಾನದಲ್ಲಿ ಸಸಿನೆಟ್ಟು ನೀರುಣಿಸಿ ಮಾತನಾಡಿದ ಅವರು, ಉಸಿರಿನಷ್ಟೇ ಸಸ್ಯ ಪ್ರೀತಿ ಪ್ರತಿಯೊಬ್ಬರಲ್ಲೂ ಮೂಡಬೇಕೆಂದರು. ಭವಿಷ್ಯದಲ್ಲಿಂದು ಶುದ್ಧ ಗಾಳಿ,ಪರಿಸರಕ್ಕೆ ಎಲ್ಲಕ್ಕಿಂತ ಹೆಚ್ಚು ಮಹತ್ವ ನೀಡಬೇಕಾಗಿದೆ. ಇವು ಸರಿಯಿದ್ದರೆ ಮಾತ್ರ ಎಲ್ಲವೂ ಸರಿ. ಇಲ್ಲದಿದ್ದರೆ ಅನೇಕ ಸಮಸ್ಯೆಗಳು, ಆತಂಕ,ತಲ್ಲಣ ನಮ್ಮನ್ನು ಕಾಡದೇ,ಭಾದಿಸದೇ ಇರದು. ಎಲ್ಲದರಲ್ಲೂ ಸೃಷ್ಟಿಯ ಏರುಪೇರು ಕಾಣಬೇಕಾದೀತೆಂದು ಎಚ್ಚರಿಸಿದರು.




ಸುಂದರ ಸಮಾಜದ ಹಿತಾಸಕ್ತಿಗೆ ಆದ್ಯತೆ ಕೊಟ್ಟು ಸಸ್ಯ,ಗಿಡಮರಗಳನ್ನು ಬೆಳೆಸಿ ಪೋಷಿಸಬೇಕು. ಇದರಲ್ಲೇ ನಮ್ಮೆಲ್ಲರ ಹಿತಾನುಭ ಅಡಗಿದೆ. ಒಳ್ಳೆಯ ಪ್ರತಿಕೂಲ ಪರಸ್ಥಿತಿಯಲ್ಲಿ ಮುಂದಿನ ಯುವಜನಾಂಗ ಉಸರಿಸಿ ಬದುಕಬೇಕು. ಸಸ್ಯಗಳು ಮನ:ಶಾಂತಿಯ ವನದೇವತೆಗಳಾಗಿವೆ. ಯಾಂತ್ರಿಕ ಬದುಕಿನ ಲೈಫ್ ನಲ್ಲಿ ಬ್ಯೂಸಿ ಅಗಿರುವ ನಮಗೆಲ್ಲ ಅವು ಪರಿಶುದ್ಧ ಆಕ್ಸಿಜನ್ ನೀಡಿ ಎನಜಿ೯ ಕೊಡುತ್ತವೆ. ಆರೋಗ್ಯ, ಏಕಾಗ್ರತೆಗೆ ಅನುವು ಮಾಡಿಕೊಡುವ ಸಸ್ಯ ಸ್ಪರ್ಶ ಜೀವನಕ್ಕೆ ಉಲ್ಲಾಸ ತಣಿಸುತ್ತದೆ ಎಂದು ಅವರು ಅಭಿಪ್ರಾಯಿಸಿದರು. ವೃಕ್ಷಗಳ ಮಹತ್ವ ಅರಿಯಬೇಕು. ಅರಣ್ಯ ಸಂಪತ್ತು ರಕ್ಷಿಸಬೇಕು. ಸಸ್ಯಗಳ ವರ್ಧನೆಗೆ ಮುಂದಾಗಬೇಕು. ನಿಸರ್ಗ ಜೀವರಸಗಳಿಗೆ ಅತ್ಯಮೂಲ್ಯ. ಎಲ್ಲ ಜೀವ ಸಂಕುಲಕ್ಕೆ ಬೇಕು. ಪಕ್ಷಿ,ಪ್ರಾಣಿಗಳ ಅಳಿವು ಉಳಿವು ಗಿಡಧಾಮುಗಳ ಆಸ್ತಿತ್ವದ ಮೇಲೆ ಅವಲಂಬಿತವಾಗಿವೆ. ಶುದ್ಧ ಹವೆಗೆ,ಪರಿಸರಕ್ಕೆ ಗಿಡಮರಗಳು ಆಮ್ಲಜನಕದ ಕಣಜಗಳಾಗಿವೆ. ಆದರೆ ಅವ್ಯಾಹತವಾಗಿ ಸಾಗಿರುವ ಅರಣ್ಯ ನಾಶದಿಂದ ಮುಂದೊಂದು ದಿನ ಮಾನವ ಕುಲಕ್ಕೆ ವಿಪತ್ತು ಘಟಿಸುವಲ್ಲಿ ಸಂದೇಹವಿಲ್ಲ. ನೈಸರ್ಗಿಕ ಸೌಂದರ್ಯಕ್ಕೆ ತಂಪು ವಾತಾವರಣ ಕಲ್ಪಿಸಿ ಮೆರಗು ನೀಡುವ ಸಸ್ಯಗಳು,ಪಕ್ಷಿ ,ಪ್ರಾಣಿಗಳು ದಿನೆದಿನೆ ಕಣ್ಮರೆ ಅಗುತ್ತಿರುವುದು, ಜೀವ ವೈವಿಧ್ಯ ಕ್ಷೀಣಿಸುತ್ತಿರುವುದು ವಿಷಾಧನೀಯ ಎಂದರು.
ಇಲ್ಲಿನ ಅರಣ್ಯಇಲಾಖೆಯ ಅಧಿಕಾರಿಗಳ ಕಾಳಜಿಯಿಂದ ಸಂಸ್ಥೆಯ ಕ್ಯಾಂಪಸ್ ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿವಿಧ ಸಸ್ಯಜನ್ಯ ಹೇರಳವಾಗಿ ಮೈದೇಳಿವೆ. ಅದಕ್ಕೆಲ್ಲ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪಿ.ಗಲಗಲಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಕೆ.ಪೈ, ವಲಯ ಅರಣ್ಯಾಧಿಕಾರಿ ಮಹೇಶ ಪಾಟೀಲ ಅವರುಗಳು ನೀಡಿದ ಸಹಕಾರದಿಂದ ಇಲ್ಲಿ ಹಸಿರು ತಪೋವನ ಸೃಷ್ಟಿಯಾಗಿದೆ. ಶಾಲಾಭಿಮಾನಿ ಗುತ್ತಿಗೆದಾರ ಅಶೋಕ ಉಪ್ಪಾರ ಅವರು ಶ್ರಮವಹಿಸಿ ಶಿಸ್ತಿನಿಂದ ಗಿಡ ಹಚ್ಚುವಿಕೆಯ ಕಾರ್ಯದಲ್ಲಿ ನಿರತಾಗಿರುವುದು ತಮಗೆ ಅತೀವ ಸಂತಸ ತಂದಿದೆ ಎಂದರು. ಲಿಂ, ತೋಂಟದ ಡಾ ಸಿದ್ದಲಿಂಗ ಸ್ವಾಮೀಜಿಯವರು ಅಂದು ಶರಣ ಹಡೇ೯ಕರ ಮಂಜಪ್ಪನವರ ಸ್ಮಾರಕ ಬಳಿ ಗಿಡ ನೆಟ್ಟು ಹಸಿರು ತಪೋವನ ಕನಸು ಕಂಡಿದ್ದರು. ಇಂದು ಪೂಜ್ಯ ಸಿದ್ದಲಿಂಗ ಶ್ರೀಗಳವರ ಕನಸು ಸಾಕಾರಗೊಳ್ಳುತ್ತಲಿದೆ. ಈ ಕಾರ್ಯಕ್ಕೆ ಕೈಜೋಡಿಸಿ ಸಹಾಯ, ಸಹಕಾರ ನೀಡಿ ಶ್ರಮಿಸಿರುವ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಂಸ್ಥೆ ಪರವಾಗಿ,ಗದುಗಿನ ತೋಂಟದ ಡಾ.ಸಿದ್ದರಾಮ ಶ್ರೀಗಳವರ ಪರವಾಗಿ ಕಾರ್ಯದರ್ಶಿ ಶಿವಾನಂದ ಪಟ್ಟಣಶೆಟ್ಟಿ ಅವರು ಅಭಿನಂದಿಸಿದರು.
ಪ್ರಸ್ತುತ ಇಲ್ಲಿ ಸಾವಿರಕ್ಕೂ ಹೆಚ್ಚು ಬೇವು,ಅರಳಿ,ಅಲ, ಮಾವು,ಹುಣಸಿ,ಹಲಸು,ಚಿಕ್ಕು ಸೇರಿ ಹಣ್ಣಿನ ಸಸಿಗಳು, ಸೌಂದರ್ಯ ವರ್ಧಕ ಅಲಂಕಾರಿಕ ಸಸಿಗಳು ಇತ್ಯಾದಿ ನೆಟ್ಟು ಈ ಶಾಲಾ,ಕಾಲೇಜು ಅಂಗಳದಲ್ಲಿನ ಪರಿಸರವನ್ನು ಸಂಪೂರ್ಣ ಹಸಿರೀಕರಣಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಗುತ್ತಿಗೆದಾರ ಅಶೋಕ ಉಪ್ಪಾರ, ಮಾಲಗಿತ್ತಿ ಐಟಿಐ ಕಾಲೇಜಿನ ಓಎಸ್ಓ ಬಸವರಾಜ ಗೆದಗೇರಿ, ಗದುಗಿನ ಈರಣ್ಣ ಗುರುಪುತ್ರನವರ, ಪ್ರಾಚಾರ್ಯ ಪಿ.ಎ.ಹೇಮಗಿರಿಮಠ, ಎಚ್.ಎನ್.ಕೆಲೂರ,ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ, ಎಸ್.ಆಯ್.ಗಿಡ್ಡಪ್ಪಗೋಳ, ಎನ್.ಎಸ್.ಬಿರಾದಾರ, ಆರ್.ಎಂ.ರಾಠೋಡ, ಬಸಯ್ಯ ಶಿವಯೋಗಿಮಠ, ಶಾಂತು ತಡಸಿ, ನಾಗಪ್ಪ ಐಯಳಪ್ಪ ಇತರರಿದ್ದರು.