ಚಡ್ಡಿ ಗಿಡ್ ಆತಂತ, ತಾನ್ ಕೊಟ್ ಅಳತಿಗೆ ಚಡ್ಡಿ ಹೊಲದ ಕೊಡಲಿಲ್ಲಾ ಅಂತ, ಟೇಲರ್ ವಿರುದ್ಧ ಚಡ್ಡಿ ಹೊಲಿಸಿಕೊಂಡಾವ ಕಂಪ್ಲೆಂಟ್ ಕೊಟ್ಟಾನಂತ. ಅಂದ್ಹಂಗ ಈ ಚಡ್ಡಿ ಜಗಳ ಈಗ ಕೋರ್ಟ್ ಅಂಗಳಕ್ಕೂ ಬಂದೈತಿ ನೋಡ್ರಿ.

ಭೋಪಾಲ್: ಚಡ್ಯಾರಾ ಆಗಲಿ, ಪ್ಯಾಂಟರಾ ಆಗಲಿ, ಒಳ ಅಂಗ್ಯಾರ ಆಗಲಿ, ಮೇಲಂಗ್ಯಾರ ಆಗಲಿ, ಏನಾರ ಆಗಲಿ ನಾವು ಹ್ಯಾಂಗ್ ಅಳತಿ ಕೊಟ್ಟಿರತಿವಿ ಹಂಗ ಹೊಲದ್ ಕೊಡೊ ಕೆಲ್ಸಾ ಟೈಲರ್ದು. ಆದ್ರ ನಾನು ‘ಚಂದನ್ ಬಟ್ಟಿ ಕೊಟ್ಟೀನಿ. ಆದ್ರ ಟೇಲರ್ ಗಿಡ್ ಗಿಡ್ ಅಂಡರ್ ವೇರ್ ಹೊಲದಾನ. ಅರೆಸ್ಟು ಮಾಡಿ ಒಗಿರಿ ಅವನ್ನ ಅಂತ ಭೋಪಾಲಿನ್ಯಾಗ ಒಬ್ಬಾಂವ ಪೊಲೀಸರ ಠಾಣಾ ಕಟ್ಟಿ ಹತ್ಯಾನ.

ಈ ಪೊಲೀಸ್ರು ಚಡ್ಡಿ ಸಲುವಾಗಿ ಯಾಕ್ ಜಗಳಾಡ್ತಿರಿ ಬರ್ರಿಲ್ಲಿ ಅಂತ ಕರದು ಜಗಳ ಬಗಿ ಹರಿಸಿ ಕಳಿಸಿ ಬಿಟ್ಟಿದ್ರ ನಡಿತ್ತಿತ್ತೇನೋ? ಒಂದ್ ವ್ಯಾಳೆ ಪೊಲೀಸ್ರಿಗೂ ಈ ಚಡ್ಡಿ ಜಗಳ ತಲಿ ಚಿಟ್ ಹಿಡಿಸಿತ್ತೋ ಏನೋ? ಏನಾರಾ ಆಗ್ಲಿಪಾ ಚಡ್ಡಿ ಗಿಡ್ ಹೊಲದಾನೋ ಉದ್ ಹೊಲದಾನೋ ಈ ಜಗಳಾ ಕೋರ್ಟ್ ನ್ಯಾಗ ಬಗೀ ಹರಿಸ್ಕೋ ಹೋಗ್ರಿ ಅಂತ ಸಾಗ ಹಾಕ್ಯಾರ.

ಕೃಷ್ಣಕುಮಾರ್ ದುಬೆ ಅನ್ನಾಂವ ಟೈಲರ್ ಅಣ್ಣನ ಕಡೆ ಚಡ್ಡಿ ಹೊಲಿಸಿಕೊಂಡು ಅನ್ಯಾಯಕ್ಕ ಒಳಗಾದಾಂವ ನೋಡ್ರಿ.  ‘ಬಾಳಾ ಅಂದ್ರ ಬಾಳಾ ಗಿಡ್ ಹೊಲಿದಾನ್ರಿ ಅಂವಾ ನಾನರ ಸೆಕ್ಯುರಿಟಿ ಗಾರ್ಡ್ ಅದಿನಿ, 9 ಸಾವಿರ ರೂ. ಪಗಾರ ಬರುತ್ತಿತ್ತು. ಲಾಕ್ ಡೌನ್ ಆದ್ ಕೂಡ್ಲೆ ಇದ್ ಸಣ್ ಕೆಲ್ಸಾನೂ ಹೋತು. ಊರಿಗೆ ಹೋಗುವ ಮೊದ್ಲ ಒಂದೆರಡು ಪಟ್ಟಾಪಟ್ಟಿ ಚಡ್ಡಿ ಹೊಲಿಸಿಕೊಂಡು ಹೋಗೋಣ ಅಂತ, 2 ಮೀಟರ್ ಅರಬಿ ತಂದು, ‘ಎಷ್ಟ್ ಅಕ್ಕಾವು ಅಷ್ಟ್ ಚಡ್ಡಿ ಹೊಲಿ’ ಎಂದು ಟೇಲರ್ಗೆ ಕೊಟ್ರ, 190 ರೂಕ್ಕಾ ತುಗೊಂಡ್ ಚಡ್ಡಿ ಹೊಲ್ದ್ ಕೊಟ್ಟಾನ್ರಿ. ಆದರೆ ಅವು ತೀರಾ ಅಂದ್ರ ತೀರಾ ಗಿಡ್ ಆಗ್ಯಾವ್ರಿ ಅನ್ನೋದು ದುಬೆ ವಾದ.

ಈ ಬಗ್ಗೆ ಹೇಳಿಕೆ ನೀಡಿರುವ ಹಬೀಬ್ ಗಂಜ್ ಪೊಲೀಸ್ ಸ್ಟೇಷನ್ ಇನ್ಸ್ಪೆಕ್ಟರ್ ರಾಕೇಶ್ ಶ್ರೀವಾತ್ಸವ್, ಯಾಕೋ ಈ ಚಡ್ಡಿ ಕೇಸು ಕಾಂಪ್ಲಿಕೆಟೆಡ್ ಅನಿಸ್ತು. ಅದಕ್ಕ ಕೋರ್ಟಿಗೆ ಹೋಗೋಪ’ ಅಂತಾ ಹೇಳಿದೆವು ಅಂತ ತಿಳಿಸ್ಯಾರ.

ಇದಕ್ಕ ಟೈಲರ್, ಅಂವಾ ಕೊಟ್ ಬಟ್ಟಿನಾ ಕಡಿಮಿತ್ತು, ನಾನಾರ ಏನ್ ಮಾಡ್ಲಿ ಅಂತ ಹೇಳ್ಯಾನ. ಈ ಚಡ್ಡಿ ಗಿಡ್ಡ-ಉದ್ದ ಅಂತ ದುಬೆ ಮತ್ತ ಟೈಲರ್ ನಡುವ ಮಾತಿಗೆ ಮಾತು ಬೆಳೆದೈತಿ. ತಲಿ ಕೆಟ್ಟ ದುಬೆ ಸೀದಾ ಪೊಲೀಸ್ ಠಾಣಾಕ್ ಹೋಗಿ ಕಂಪ್ಲೇಂಟ್ ಕೊಟ್ಟಾನ.

ಈ ಚಡ್ಡಿ ರಗಳೆಗೆ ಸುಸ್ತಾದ ಟೇಲರ್, ‘ಯಪ್ಪಾ, ನಿನ್ ರೊಕ್ಕ ನಿಂಗ್ ವಾಪಸ್ ಕೊಡ್ತೀನಿ. ಕೋರ್ಟು-ಗೀರ್ಟು ಬ್ಯಾಡಪೋ ಶಿವನೇ’ ಅಂದಾನಂತ. ಆದ್ರ ದುಬೆ ಏನ್ ಮಾಡ್ತಾನ ಅನ್ನೋದ ಭಾಳ್ ಕುತೂಹಲದ್ ವಿಷಯ ನೋಡ್ರಿ.

Leave a Reply

Your email address will not be published. Required fields are marked *

You May Also Like

ಕರೊನಾ ಅಲೆಯ ಮಧ್ಯೆ ರಾಜಕೀಯ ಅಲೆಯ ಅಬ್ಬರ

ದೊಡ್ಡವರಿಂದ ಹಿಡಿದು ಚಿಕ್ಕ ಮಕ್ಕಳ ವರೆಗೂ ಎಚ್ಚರಿಕೆ ಗಂಟೆಯನ್ನು ಬಾರಿಸಿರುವ ಕರೊನಾ ಎರಡನೆಯ ಅಲೆಯು ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬರುತ್ತಿದೆಯಾದರೂ ಫಂಗಸ್‌ನ (ಶಿಲೀಂಧ್ರ) ಕಾಟ ಮಾತ್ರ ಮುಂದುವರಿಯುತ್ತಲೇ ಇದೆ. ಸದ್ಯ ಲಭ್ಯವಿರುವ ಲಿಪೊಸೊಮಲ್ ಆಂಪೊಟೆರಿಸಿನ್ ಬಿ ಔಷಧವನ್ನು ಕಪ್ಪು ಶಿಲೀಂಧ್ರ ಸೋಂಕಿಗೆ ಒಳಗಾದವರಿಗೆ ನೀಡಲಾಗುತ್ತಿದೆ.

ಹೊಸ ವರ್ಷಾಚರಣೆ: ಕೊವಿಡ್ ಮಾರ್ಗಸೂಚಿಯನ್ನು ಹೊರಡಿಸಿದ ರಾಜ್ಯ ಸರ್ಕಾರ

ಉತ್ತರಪ್ರಭ ಸುದ್ದಿ ಬೆಳಗಾವಿ:  ದಿನದಿಂದ ದಿನಕ್ಕೆ ಕೊವಿಡ್ ಒಮಿಕ್ರಾನ್  ಹಾವಳಿ ಹೆಚ್ಚಾಗುತ್ತಿರುವ ಹಿನ್ನಲೆ, ಹೊಸ ವರ್ಷಾಚರಣೆಯಲ್ಲಿ…

ಆಹಾರದ ಅವಶ್ಯಕತೆ

ಪ್ರತಿ ಜೀವಿಯ ಜೀವನಾಧಾರವೇ ಅದರ ಹೊಟ್ಟೆಯ ಹಸಿವು, ಆಹಾರ ಇಲ್ಲದೇ ಹೋದರೆ ಪ್ರಾಣ ಪಕ್ಷಿಯೇ ಹಾರಿಹೋಗುವುದಂತು ಗ್ಯಾರಂಟಿ ಎನ್ನುವದಂತು ದಿಟ್ಟ ಎನ್ನುವ ವಿಚಾರಗಳನ್ನು ತಮ್ಮ ಮುಂದೆ ಹಂಚಿಕೊಳ್ಳುತ್ತ, ಇಂದಿನ ದಿನಮಾನಗಳಲ್ಲಿ ಮನುಷ್ಯರಿಗೆ ಆಹಾರ ಅವಶ್ಯಕತೆ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 1945 ರಲ್ಲಿ ವಿಶ್ವಸಂಸ್ಥೆಯ ಕೃಷಿ ವಿಭಾಗದ ಸ್ಥಾಪನೆಯ ಸವಿ ನೆನಪಿಗಾಗಿ ಅ.16 ರ ಈ ದಿನವನ್ನು ಹಸಿವಿನ ವಿರುದ್ಧ ಹೋರಾಟಕ್ಕಾಗಿ ಆರಂಭಿಸಲಾಯಿತು. 1981 ರ ನಂತರ ಈ ದಿನವನ್ನು ವ್ಯಾಪಕವಾಗಿ ವಿಶ್ವ ಆಹಾರ ದಿನವನ್ನಾಗಿ ವಿಶ್ವಾದ್ಯಾಂತ ಆಚರಣೆ ಮಾಡುವ ಮೂಲಕ ಜಾರಿಗೆ ತರಲಾಯಿತು. ಅಂದರೆ ಅ.16 ರಂದು ವಿಶ್ವಾದ್ಯಾಂತ ವಿಶ್ವ ಆಹಾರ ದಿನವನ್ನಾಗಿ ನಾವೆಲ್ಲರೂ ಸೇರಿ ಆಚರಣೆ ಮಾಡುತ್ತಿದ್ದೇವೆ. ಆದಕಾರಣ ಈ ದಿನದ ನಿಮಿತ್ತ ಭಕ್ಷ್ಯ ಭೋಜನವನ್ನು ಸವಿದು, ಆಹಾರ ಸಂಸ್ಕೃತಿಯನ್ನು ಸಂಭ್ರಮದಿಂದ ನೆನಪಿಸಿ, ತಿಂದು ತೇಗಲು ಈ ದಿನವನ್ನು ಆಚರಿಸಲು ಕರೆ ಕೊಡಲಾಗಿದೆ ಎಂದು ಭಾವಿಸಿದ್ದರೆ. ಅದು ನೂರಕ್ಕೆ ನೂರರಷ್ಟು ತಪ್ಪು. ಜಾಗತಿಕ ಮಟ್ಟದಲ್ಲಿ ಆಹಾರದ ಕೊರತೆ ಕುರಿತು ಜಾಗೃತಿ, ಅಭಿಯಾನ ಜೊತೆಗೆ ಹಸಿವಿನಿಂದ ಸಾಯುವವರ ನೋವಿನ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿಸುವ, ತಲುಪಿಸುವ ಏಕೈಕ ಉದ್ದೇಶದ ಜೊತೆಗೆ ಆಹಾರ ಸಮಸ್ಯೆ ಕುರಿತು ವ್ಯಾಪಕವಾಗಿ ಅರಿವು ಮೂಡಿಸುವ ನಿಟ್ಟಿನಲ್ಲಿ ಮತ್ತು ಪೌಷ್ಟಿಕ ಆಹಾರ ಮಹತ್ವದ ಬಗ್ಗೆ ಜನತೆಗೆ ಜನಜಾಗೃತಿ ಅಭಿಯಾನ, ಗೋಷ್ಠಿ, ವಿಚಾರ ಸಂಕೀರ್ಣ ಹಾಗೂ ಇನ್ನಿತರ ಕಾರ್ಯಕ್ರಮಗಳ ಮೂಲಕ ತಿಳಿ ಹೇಳಲು ಆಹಾರ ದಿನವನ್ನು ಆಚರಣೆ ಮಾಡಲಾಗುತ್ತಿದೆ.

ಗ್ಯಾಂಗ್ ರೇಪ್ ಪ್ರಕರಣದ ಉಳಿದ ಆರೋಪಿಗಳು ಕೇರಳದಲ್ಲಿದ್ದಾರೆಂಬ ಮಾಹಿತಿಯಿದೆ- ಬೊಮ್ಮಾಯಿ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾಂಗ್ ರೇಪ್ ವಿಡಿಯೋ ವೈರಲ್ ಆಗಿತ್ತು, ಕೇಂದ್ರ ಸಚಿವರು ಈ ಬಗ್ಗೆ ಟ್ವೀಟ್ ಮಾಡಿದ್ದರು, ನಮ್ಮ ಪೊಲೀಸರು ಅದನ್ನು ಪತ್ತೆ ಹಚ್ಚಿ ಗ್ಯಾಂಗ್ ನ್ನು ಹಿಡಿದಿದ್ದಾರೆ.