ಸದ್ಯ ಜನಪ್ರಿಯವಾಗಿರುವ ಅಲಾದ್ದೀನ್ ಫ್ಯಾಂಟಸಿ ಟಿವಿ ಶೋನಲ್ಲಿ ಪಾತ್ರ ಮಾಡುತ್ತಿರುವ ಈ ಹುಡುಗಿ ಶೂಟಿಂಗ್ ಮತ್ತು ಸ್ಟಡಿ ನಡುವೆ ಬ್ಯಾಲೆನ್ಸ್ ಮಾಡುತ್ತ ಗೆಲ್ಲುತ್ತಿದ್ದಾಳೆ.
ಮುಂಬೈ: ಈಕೆ ಶೂಟಿಂಗ್ ಮುಗಿಸಿ ಪರೀಕ್ಷೆ ಬರೆದಳು, ಕೆಲವೊಮ್ಮೆ ಪೇಪರ್ ಬರೆದಾದ ಕೂಡಲೇ ಶೂಟಿಂಗ್ ಸ್ಪಾಟಿಗೆ ಓಡಿ ಅಭಿನಯಿಸಿದಳು. ಕಳೆದ 10 ವರ್ಷದಿಂದ ಹೀಗೆ ಶೂಟಿಂಗ್ ಮತ್ತು ಸ್ಟಡಿ ನಡುವೆ ಬ್ಯಾಲನ್ಸ್ ಮಾಡಿಕೊಂಡು ಗೆಲ್ಲುತ್ತಿರುವ ಈ ಹುಡುಗಿಯ ಹೆಸರು ಅವನೀತ್ ಕೌರ್. ಟಿವಿ ಪಾತ್ರ ಸುಲ್ತಾನಾ ಯಾಸ್ಮಿನ್ ಹೆಸರಿನಿಂದಲೇ ಹೆಚ್ಚು ಫೇಮಸ್ ಆಗಿರುವ ಯುವತಿ ಈಕೆ.

ಇತ್ತೀಚೆಗೆ ಪ್ರಕಟಗೊಂಡ ಸಿಬಿಎಸ್ಸಿ 12ನೆ ತರಗತಿ ಪರೀಕ್ಷೆಯಲ್ಲಿ ಶೇ. 74 ಸ್ಕೋರ್ ಮಾಡಿರುವ ಈಕೆ, ‘ಇಷ್ಟೊಂದು ಅಂಕ ನಿರೀಕ್ಷಿಸಿರಲಿಲ್ಲ’ ಎಂದಿದ್ದಾಳೆ. ಈಗ ‘ಅಲಾದ್ದೀನ್: ನಾಮ್ ತೋ ಸುನಾ ಹೋಗಾ’ ಎಂಬ ಟಿವಿ ಫ್ಯಾಂಟಸಿ ಸೀರಿಯಲ್ ನಲ್ಲಿ ಅಭಿನಯಿಸುತ್ತಿದ್ದಾಳೆ. ಕಳೆದ 10 ವರ್ಷದಿಂದ ೀಕೆ ಶಾಲೆ, ಸ್ಟಡಿ ಮತ್ತು ಶೂಟಿಂಗ್ ನಡುವೆ ಹೊಂದಾಣಿಕೆ ಮಾಡಿಕೊಂಡು ಎರಡೂ ಕಡೆ ಯಶಸ್ಸು ಕಾಣುತ್ತಿದ್ದಾಳೆ.
ಮೊದಲಿಗೆ ಈಕೆ ಬಾಲೆಯಾಗಿದ್ದಾಗ ‘ಡ್ಯಾನ್ಸ್ ಇಂಡಿಯಾ ಡ್ಯಾನ್ಸ್-ಲಿಟಲ್ ಮಾಸ್ಟರ್’ ಸ್ಪರ್ಧೆ ಗೆಲ್ಲುವ ಮೂಲಕ ಬಣ್ಣದ ಜಗತ್ತಿಗೆ ಧುಮುಕಿದಳು. ಆಗಿಂದಲೂ ಡ್ಯಾನ್ಸ್ ಮತ್ತು ಟಿವಿ ಶೋಗಳಲ್ಲಿ ಭಾಗವಹಿಸುತ್ತಲೇ ಶಿಕ್ಷಣದಲ್ಲೂ ಸೈ ಎನಿಸಿಕೊಂಡಿದ್ದಾಳೆ.