ಗದಗ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿದ್ದು ಜನತೆಯಲ್ಲಿ ಆತಂಕ ಹೆಚ್ಚಿಸಿದೆ. ಈ ಕಾರಣದಿಂದ ಹೊಟ್ಟೆ ನೋವಿನಿಂದ ನರಳುತ್ತಿದ್ದ ವ್ಯಕ್ತಿ ನೆರವಿಗೆ ಯಾರೊಬ್ಬರು ಮುಂದಾಗದ ಘಟನೆ ಗದಗ ನಗರದ ಬೆಟಗೇರಿಯಲ್ಲಿ ನಡೆದಿದೆ.

ವ್ಯಕ್ತಿಯ ಸ್ಥಿತಿ ಕಂಡು ಕೊನೆಗೂ ಯುವಕನೋರ್ವ ಹೊಟ್ಟೆ ನೋವಿನಿಂದ ನರಳಾಡುತ್ತಿದ್ದ ವ್ಯಕ್ತಿಯ ಸಹಾಯಕ್ಕೆ ಮುಂದಾಗಿ ಮಾನವೀಯತೆ ಮೆರೆದಿದ್ದಾನೆ. ಬಹುತೇಕರು ಕೊರೊನಾ ಆತಂಕದಿಂದ ದೂರದಿಂದ ನೋಡುತ್ತಿದ್ದರು. ಇಲ್ಲಿನ ಕುರಹಟ್ಟಿ ಪೇಟೆಯ ನಿವಾಸಿಯೊಬ್ಬರು ಗಂಟಲ ನೋವು, ಹೊಟ್ಟೆ ಉರಿ ಎಂದು ನರಳುತ್ತಾ ರಸ್ತೆ ಮದ್ಯೆದಲ್ಲಿ ಉರಾಳಾಡುತ್ತಿದ್ದರು.

ಈ ವ್ಯಕ್ತಿಗೆ ಕೊರೊನಾ ಇರಬಹುದು ಎಂಬ ಸಂಶಯದಿಂದ ಯಾರೂ ಆತನ ನೆರವಿಗೆ ಧಾವಿಸಲಿಲ್ಲ. ಈ ನರಳಾಟ ನೋಡದೇ ಯುವಕನೊಬ್ಬ ನರಳಾಡುತ್ತಿದ್ದ ವ್ಯಕ್ತಿಯನ್ನು ಆರೈಕೆ ಮಾಡಿದ್ದು ಮಾನವೀಯತೆಗೆ ಸಾಕ್ಷಿಯಾಗಿದೆ.

Leave a Reply

Your email address will not be published. Required fields are marked *

You May Also Like

ರೈತ ವಿರೋಧಿ ಕಾಯ್ದೆ ಹಾಗೂ ಬೆಲೆ ಏರಿಕೆ ಖಂಡಿಸಿ ರ್ಯಾಲಿ ಪ್ರತಿಭಟನೆ.

ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರರ್ಕಾರ, ಸುಳ್ಳು ಆಶ್ವಾಸನೆ ನೀಡುವದರ ಮೂಲಕ ಅಧಿಕಾರವನ್ನು ಪಡೆದುಕೊಂಡ ಮೇಲೆ ಚುನಾವಣೆಯ ಸಂಧರ್ಭದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ.

ವಾರದ ಮಲ್ಲಪ್ಪನವರ ಸಮಾಜಿಕ ಸೇವೆ ಅಪಾರ : ಅಂದಾನೆಪ್ಪ ವಿಭೂತಿ

ವಾರದ ಮಲ್ಲಪ್ಪ ಅವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಔದ್ಯೋಗಿಕವಾಗಿ ಮಾಡಿದ ಸೇವೆ ಅಪಾರವಾದದ್ದು. ಎಂದು ವಿಭೂತಿ ಪತ್ರಿಕೆ ಸಂಪಾದಕ ಅಂದಾನೆಪ್ಪ ವಿಭೂತಿ ಹೇಳಿದರು.

10 ರಂದು ಗ್ರಾಮೀಣ ಕ್ರೀಡಾಕೂಟಕ್ಕೆ ಚಾಲನೆ

ಉತ್ತರಪ್ರಭ ಸುದ್ದಿಆಲಮಟ್ಟಿ: ಆಲಮಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಎಲ್ಲ ವಯೋಮಾನದ ಗ್ರಾಮೀಣ ಕ್ರೀಡಾಸಕ್ತರಿಗಾಗಿ ದಿ,10 ರಂದು…