ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಹಲವು ಜಿಲ್ಲೆ ಮತ್ತು ನಗರಗಳಲ್ಲಿ ದಿಢೀರ್ ಲಾಕ್ ಡೌನ್ ಹೇರಿದ್ದರಿಂದ ಕೈಗಾರಿಕಾ ಉತ್ಪಾದನಾ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಿದೆ.

ಬೆಂಗಳೂರು: ಜುಲೈ 13ರ ರಾತ್ರಿ 8 ಗಂಟೆಗೆ ಕರ್ನಾಟಕ ಸರ್ಕಾರ, ಒಂದು ವಾರ ಕಾಲ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ಸಂಪೂರ್ಣ ಲಾಕ್ ಡೌನ್ ಎಂದು ಘೋಷಣೆ ಮಾಡಿತು.

ಟೊಯೋಟಾ-ಕಿರ್ಲೊಸ್ಕರ್ ಸೇರಿದಂತೆ ಹಲವಾರು ಆಟೊಮೊಬೈಲ್ ಕಂಪನಿಗಳು ಮತ್ತು ಸಾವಿರಾರು ಸಣ್ಣ ಕೈಗಾರಿಕೆಗಳು ತಮ್ಮ ನೌಕರರಿಗೆ ವಾರ ಕಾಲ ರಜೆ ಘೋಷಿಸಿದವು. ಆದರೆ ಜುಲೈ 14ರ ಸಂಜೆ ಸ್ಪಷ್ಟೀಕರಣ ನೀಡಿದ ಸರ್ಕಾರ, ಉತ್ಪಾದನಾ ಕ್ಷೇತ್ರಕ್ಕೆ ಈ ಲಾಕ್ ಡೌನ್ ಅನ್ವಯಿಸುವುದಿಲ್ಲ ಎಂದಿತು. ಆದರೆ ಅಷ್ಟೊತ್ತಿಗಾಗಲೇ ಕಂಪನಿಗಳ ನೌಕರರು ಅವರ ಊರು ತಲುಪಿಯಾಗಿತ್ತು.

ಬೆಂಗಳೂರಷ್ಟೇ ಅಲ್ಲ, ವಿವಿಧ ಜಿಲ್ಲೆಗಳಲ್ಲೂ ಇಂತಹ ಗಡಿಬಿಡಿಯ ಲಾಕ್ ಡೌನ್ ಕಾರಣದಿಂದ ಹಲವಾರು ಸಣ್ಣ ಉದ್ಯಮಗಳು ಬಂದ್ ಆಗಿ ನಷ್ಟದಲ್ಲಿವೆ. ನೌಕರರಿಗೆ ಕೆಲಸ ಇಲ್ಲ ಎಂದರೆ ಸಂಬಳವೂ ಸಿಗುವುದಿಲ್ಲ.

ಮಹಾರಾಷ್ಟ್ರ ಸರ್ಕಾರ ಉತ್ಪಾದನಾ ಕ್ಷೇತ್ರದ ಹಬ್ ಎಂದೇ ಕರೆಯಲ್ಪಡುವ ಪುಣೆಯನ್ನು ಲಾಕ್ ಡೌನ್ ಮಾಡಿದೆ. ಬಿಹಾರ್ ಸರ್ಕಾರ ಗ್ರಾಮಗಳನ್ನು ಹೊರತುಪಡಿಸಿ ಇಡೀ ಬಿಹಾರ್ ರಾಜ್ಯದಲ್ಲಿ ಜುಲೈ 31 ರವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಿದೆ. ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಒರಿಸ್ಸಾ ಮತ್ತು ಅಸ್ಸಾಂಗಳಲ್ಲಿ ಭಾಗಶ: ಲಾಕ್ ಡೌನ್ ಜಾರಿಯಲ್ಲಿದೆ. ಅವಸರಕ್ಕೆ ಬಿದ್ದು ಹೇರುವ ಲಾಕ್ ಡೌನ್ ಕಾರಣಕ್ಕೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ನಷ್ಟದಲ್ಲಿವೆ. ನೌಕರರು ಸಂಬಳ ರಹಿತ ರಜೆ ಮೇಲೆ ಮನೆಯಲ್ಲಿದ್ದು ಸಂಕಷ್ಟದಲ್ಲಿದ್ದಾರೆ.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿ ವಿವಿದೆಡೆ 66400 ರೂ, ಮೌಲ್ಯದ ಅಕ್ರಮ ಮದ್ಯ ವಶ: ಆರೋಪಿಗಳ ಬಂಧನ

ಗದಗ: ಕೋವಿಡ್ 19 ಮಾರ್ಗಸೂಚಿಗಳನ್ನು ಹಾಗೂ ಕಾನೂನು ಉಲ್ಲಂಘನೆ ಮಾಡಿ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದ 15 ಜನ ಆರೋಪಿತರಿಗಳನ್ನು ಬಂಧಿಸಿ , ಅವರ ವಿರುದ್ಧ 15 ಪ್ರಕರಣಗಳನ್ನು ದಾಖಲಿಸಿ, ಬಂಧಿತರಿಂದ 66400 ರೂ. ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ

ಬಳ್ಳಾರಿಯಲ್ಲಿ ಸೋಂಕಿತರ ಅಂತ್ಯಕ್ರಿಯೆ ವೇಳೆ ಅಮಾನವೀಯ ವರ್ತನೆ: 6 ಸಿಬ್ಬಂದಿ ಸಸ್ಪೆಂಡ್

ಬೆಂಗಳೂರು: ಕೊರೊನಾ ಸೋಂಕಿತರ ಶವಸಂಸ್ಕಾರದ ವೇಳೆ ಅಮಾನವೀಯ ವರ್ತನೆ ತೋರಿದ ಆರೋಪದ ಹಿನ್ನೆಲೆ ಬಳ್ಳಾರಿಯ ಆರೋಗ್ಯ…

ಕೋವಿಡ್ ನಿಯಮ ಉಲ್ಲಂಘಿಸಿ ಬರ್ತ್ ಡೇ ಪಾರ್ಟಿ: ಶ್ರೀರಾಮುಲು ಆಪ್ತನಿಗೆ ಬಿಜೆಪಿ ಗೇಟ್ಪಾಸ್

ಕೋವಿಡ್ ನಿಯಮ ಉಲ್ಲಂಘಿಸಿ ಭರ್ಜರಿ ಪಾರ್ಟಿ ಆಚರಿಸಿಕೊಂಡಿದ್ದ ಶ್ರೀರಾಮುಲು ಆಪ್ತ ಎಚ್.ಎಸ್. ಶಿವನಗೌಡರನ್ನು ಜಿಲ್ಲಾ ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಿದೆ. ಪೊಲೀಸರು ಪಾರ್ಟಿ ಕುರಿತಂತೆ ಕೋರ್ಟಿನಲ್ಲಿ ಸ್ವಯಂ ದೂರು ದಾಖಲಿಸಿದ್ದು ಇಂದು ಸೋಮವಾರ ಶಿವನಗೌಡರು ಕೋರ್ಟಿಗೆ ಹಾಜರಾಗಬಹುದು ಎನ್ನಲಾಗಿದೆ.

ಪೋಲಿಸ್ ಸಬ್‌ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸ್ಥಳೀಯ ಮತ್ತು ಇನ್ನೂಳಿದ ವೃಂದಗಳ ಪೊಲೀಸ್ ಸಬ್‌ಇನ್ಸ್ಪೆಕ್ಟರ್ (ಸಿವಿಲ್) (ಪುರುಷ, ಮಹಿಳೆ ಮತ್ತು ಸೇವೆಯಲ್ಲಿರುವವರು) ಒಟ್ಟು 545 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.