ಉತ್ತರಪ್ರಭ
ಗದಗ:
ಕೆಲ ದಿನಗಳಿಂದ ದೇಶಾದ್ಯಂತ ಇಸ್ಲಾಮಿಕ್ ಜಿಹಾದಿ ಮತಾಂಧತೆ ಹೆಚ್ಚುತ್ತಿದೆ. ಹಿಂದೂಗಳ ಮೇಲೆ ವ್ಯವಸ್ಥಿತವಾಗಿ ದಾಳಿ ಮಾಡಲಾಗುತ್ತಿದೆ. ಭಗವಾನ್ ಶ್ರೀರಾಮನ ಕುರಿತು ಹಬ್ಬವಾದ ಪ್ರತಿಪದ ಮತ್ತು ಶ್ರೀರಾಮ ನವಮಿಯಂದು ದೇಶಾದ್ಯಂತ ಮೆರವಣಿಗೆಗಳ ಮೇಲೆ ಕಲ್ಲು ತೂರಾಟ ಮತ್ತು ದಾಳಿಗಳನ್ನು ನಡೆಸಲಾಗಿದ್ದು. ಇದರಿಂದಾಗಿ ಹಲವೆಡ ಕರ್ಪ್ಯೂ ವಿಧಿಸಲಾಗಿತ್ತು, ದೇಶಾದ್ಯಂತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ. ಹಿಂದೂ ಸಮಾಜವು ತಾಳ್ಮೆ ಕಾಯ್ದುಕೊಂಡಿದ್ದು. ಇದರಿಂದಾಗಿ ಯಾವುದೇ ದೊಡ್ಡ ಅಹಿತಕರ ಘಟನೆಗಳು ಸಂಭವಿಸಿರಲಿಲ್ಲ, ನಂತರ ಕೆಲವೆಡೆ ಶ್ರೀ ಹನುಮ ಜಯಂತಿಯ ಮೆರವಣಿಗೆ ಮೇಲೆ ಕಲ್ಲು ತೂರಾಟವೂ ನಡೆದಿತ್ತು, ಹಿಂದೂ ಸಮಾಜವು ತಮ್ಮ ದೇಶದಲ್ಲಿ ತಮ್ಮ ದೇವತೆಗಳ ಮೆರವಣಿಗೆ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಕರ್ನಾಟಕದಲ್ಲಿ ಹಿಜಾಬ್ ವಿವಾದದ ಸಂದರ್ಭದಲ್ಲೂ ಭಜರಂಗದಳದ ಕಾರ್ಯಕರ್ತ ಹರ್ಷ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಆ ಸಮಯದಲ್ಲಿ ಹಿಂದೂಗಳ ಮೇಲೆ ಹಲವೆಡೆ ದಾಳಿಗಳು ನಡೆದವು. ಇತ್ತೀಚಿಗಷ್ಟೇ ಕಳೆದ ಎರಡು ಶುಕ್ರವಾರದಂದು ಸಹೋದರಿ, ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಹೇಳಿಕೆಯಿಂದ ಮಸೀದಿಗಳಿಂದ ಹೊರ ಬಂದು ಹಿಂದೂ ಸಮಾಜದ ಮೇಲೆ ದಾಳಿ ಮಾಡಿ ಹಿಂದೂಗಳ ಮನೆ, ಅಂಗಡಿ, ವಾಹನಗಳ ಮೇಲೆ ಬೆಂಕಿ ಹಚ್ಚಿ ಸರ್ಕಾರಿ ಆಸ್ತಿ ಮತ್ತು ದೇವಸ್ಥಾನಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಮಾಡಿದ್ದು ಪೊಲೀಸ್ ಪಡೆಗಳ ಮೇಲೂ ದಾಳಿ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿ, ಹಲವರಿಗೆ ಜೀವ ಬೆದರಿಕೆ ಹಾಕಲಾಗುತ್ತಿದೆ. ಈ ಜಿಹಾದಿಗಳು ಕಾನೂನನ್ನು ಕೈಗೆತ್ತಿಕೊಂಡು ಅಶಾಂತಿ ಗಲಭೆ ಮಾಡುತ್ತಿದ್ದಾರೆ.


ಹಿಂದೂ ದೇವರು ಮತ್ತು ದೇವತೆಗಳ ಬಗ್ಗೆ ಅನೇಕ ಧರ್ಮದ್ರೋಹಿಗಳಿಂದ ಅನಿಯಂತ್ರಿತ ವಿಕೃತವಾಗಿ ಪ್ರಚಾರವನ್ನು ಮಾಡಲಾಗುತ್ತಿದೆ. ಕೋಮು ದ್ವೇಷವನ್ನು ಹರಡುವ ಹೇಳಿಕೆಗಳನ್ನು ನೀಡಲಾಗುತ್ತಿದೆ, ಆದರೆ ದೇಶದ ಹಲವು ಜಾತ್ಯತೀತ ಪಕ್ಷಗಳು ಮೌನವಾಗಿದ್ದು ಪ್ರಜಾಪ್ರಭುತ್ವ ಅಪಾಯದಲ್ಲಿದೆ’ ಎಂದು ಬೊಬ್ಬೆ ಹೊಡೆಯುತ್ತಿದ್ದು ಹಲವು ರಾಜಕೀಯ ಪಕ್ಷಗಳು ಕಳೆದೆರಡು ಶುಕ್ರವಾರ ನಡೆದ ಪ್ರಜಾಪ್ರಭುತ್ವದ ಕೊಲೆಗೆ ಮೌನವಹಿಸಿವೆ, ಈ ದಾಳಿಗಳಿಂದ ಇಡೀ ದೇಶದ ಹಿಂದೂ ಸಮಾಜಕ್ಕೆ ನೋವಾಗಿದೆ ಮತ್ತು ಕೋಪವೂ ಆಗಿದೆ. ದೇಶದಾದ್ಯಂತ ಹಿಂದೂ ಸಮಾಜವು ಈ ಘಟನೆಗಳ ವಿರುದ್ಧ ಈ ಧರಣಿ ಮತ್ತು ಮನವಿ ಪತ್ರದ ಮೂಲಕ ತನ್ನ ಆಕ್ರೋಶವನ್ನು ವ್ಯಕ್ತಪಡಿಸುತ್ತದೆ.

ಬಜರಂಗದಳದ ವಿವಿಧ ಬೇಡಿಕೆಗಳು:

ಕೊನೆಯ ಎರಡು, ಶುಕ್ರವಾರದ ಪ್ರಾರ್ಥನೆಯ ನಂತರ, ಮಸೀದಿಗಳಿಂದ ಹೊರಬಂದ ಉದ್ರಿಕ್ತ ಗುಂಪುಗಳು ಮತ್ತು ಗಲಭೆಕೋರರನ್ನು ಗುರುತಿಸಬೇಕು ಮತ್ತು ಅವರ ವಿರುದ್ಧ ಕೋಕಾ ಕಾಯ್ದೆ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು.

ಜೂನ 17 ರಂದು, ಈ ಮಸೀದಿಗಳು ಮತ್ತು ಇತರ ಮಸೀದಿಗಳ ಮೇಲೂ ನಿಗಾ ಇಡಬೇಕು. ಮುಲ್ಲಾಗಳು ಮೌಲ್ವಿಗಳು ಅಥವಾ ಬೇರೆಯವರು ಜಿಹಾದಿ ಭಾಷಣ ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕು.

ಮಸೀದಿಗಳಿಂದ ಶುಕ್ರವಾರದ ನಮಾಜ್ ಮುಗಿಸಿ ಬರುವ ಯುವಕರನ್ನು ಪ್ರಚೋದಿಸುವ ಮುಲ್ಲಾಗಳು ಧರ್ಮಗುರುಗಳು ಇತರ ಮುಸ್ಲಿಂ ಮತ್ತು ಜಾತ್ಯತೀತ ನಾಯಕರನ್ನ ಗುರುತಿಸಿ ಅವರ ಮೇಲೆ ಕೇಸುಗಳನ್ನ ದಾಖಲಿಸುವ ಮೂಲಕ ಎಲ್ಲ ಜಿಲ್ಲೆಗಳಲ್ಲಿ ಕ್ರಮ ಕೈಗೊಳ್ಳಬೇಕು.

ದೇಶಾದ್ಯಂತ ಇಂತಹ ವಿಷಕಾರಿ ಭಾಷಣ ಮಾಡುವವರನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಬೆದರಿಕೆಗೆ ಒಳಗಾದವರಿಗೆ ಭವತ ಒದಗಿಸಬೇಕು ಮತ್ತು ಬೆದರಿಕೆ ಹಾಕಿದಂಥವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು.

ಎನ್.ಐ.ಎ. ತನಿಖಾ ಸಂಸ್ಥೆಯಿAದ ಗಂಟೆ ಆದ ರಾಜ್ಯಗಳಲ್ಲಿ ತನಿಖೆ ನಡೆಸಲು ಆದೇಶಿಸಬೇಕು.

ಇಮಿಕ್ ಜಿಹಾದಿ ಮತಾಂಧತೆಯನ್ನು ಹರಡುವ ಮೂಲಕ ದೇಶದಲ್ಲಿ ಹಿಂಸಾಚಾರವನ್ನು ಹರಡುತ್ತಿರುವ ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾ ಮತ್ತು ತಬ್ದಗೆ ಜಮಾತ್‌ನಂತಹ ಮೂಲಭೂತ ಸಂಘಟನೆಗಳ ಮೇಲೆ ತಕ್ಷಣ ಶಾಶ್ವತ ನಿಷೇಧವನ್ನು ಹೇರಬೇಕು.

ಈ ಎಲ್ಲ ಬೇಡಿಕೆಗಳನ್ನು ಪರಿಗಣಿಸಿ ಶೀಘ್ರ ನಿರ್ಧಾರ ತೆಗೆದುಕೊಂಡು ಕಠಿಣ ಕ್ರಮ ಕೈಗೊಳ್ಳಲು ಭಾರತ ಸರ್ಕಾರಕ್ಕೆ ಆದೇಶ ನೀಡಬೇಕೆಂದು ಗದಗ ಜಿಲ್ಲಾ ವಿಶ್ವ ಹಿಂದು ಪರಿಷತ್ ಬಜರಂಗದಳದಿoದ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಾಂತ ಸಹ ಸಂಘಟನಾ ಮಂತ್ರಿ ಮನೋಹರ್ ಮಠದ, ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಹಬೀಬ್, ಉಪಾಧ್ಯಕ್ಷ ವೀರಣ್ಣ ಹೇಮಾದ್ರಿ, ಮಾರುತಿ ದಹಿಂಡೆ
ಗಣೇಶ್ ಲದವಾ, ಗುರು ನಲಗಂದಿನ್ನಿ, ವೀರಣ್ಣ ಅಂಗಡಿ, ರಾಘು ಕಬೀರ್, ಗಣೇಶ ಸುಲ್ತಾನಪುರ ಸೆರಿದಂತೆ ಮುಂತಾದವರು ಇದ್ದರು.

Leave a Reply

Your email address will not be published. Required fields are marked *

You May Also Like

ಕುಂಟೋಜಿ ಗ್ರಾಮದಲ್ಲಿ ಸಾಮೂಹಿಕ ವಿವಾಹ

ಸಾಮೂಹಿಕ ವಿವಾಹಗಳಿಂದ ಸಮಾನತೆ ಸಾರುವುದರ ಜೊತೆಗೆ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪೂರಕವಾಗಿವೆ. ನವಜೋಡಿಗಳು ಆದರ್ಶ ದಂಪತಿಗಳಾಗಿ ಚಿಕ್ಕ ಹಾಗೂ ಚೊಕ್ಕ ಸಂಸಾರ ನಡೆಸಿ, ಮುಂದೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣದ, ಸಂಸ್ಕಾರ ನೀಡುವ ಸಂಕಲ್ಪ ಮಾಡಬೇಕು ಎಂದು ಮೈಸೂರು ಸಂಸ್ಥಾನ ಮಠದ ವಿಜಯ ಮಹಾಂತ ಸ್ವಾಮೀಜಿ ಹೇಳಿದರು.

ಗ್ರಾಮ ಪಂಚಾಯತಿ ಚುನಾವಣೆ: ಅಭಿಪ್ರಾಯ ಸಲ್ಲಿಕೆಗೆ ಚುನಾವಣಾ ಆಯೋಗ ನಿರ್ದೇಶನ

ಪಂಚಾಯತಿ ಅವಧಿ ಮುಕ್ತಾಯಗೊಳ್ಳುವ ಮುಂಚಿತವಾಗಿ ಹೊಸದಾಗಿ ಪಂಚಾಯತಿಗಳನ್ನು ರಚಿಸಲು ಚುನಾವಣೆ ನಡೆಸಬೇಕಾಗಿರುತ್ತದೆ. ಕರ್ನಾಟಕ ಗ್ರಾಮ್ ಸ್ವರಾಜ್ ಅಧಿನಿಯಮದ ಪ್ರಕಾರ ರಾಜ್ಯ ಚುನಾವಣಾ ಆಯೋಗವು ಪಂಚಾಯತಿಯ ಅವಧಿಯು ಪೂರ್ಣಗೊಳ್ಳುವುದಕ್ಕೆ ಮೊದಲು ಚುನಾವಣಾ ಪ್ರಕ್ರಿಯೇಯನ್ನು ಪೂರ್ಣಗೊಳಿಸಬೇಕಾಗಿರುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರ ಸದ್ಯದ ಆಸ್ತಿ ಎಷ್ಟು ಗೊತ್ತಾ?

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷಕ್ಕಿಂತಲೂ ಈ ವರ್ಷ ಶ್ರೀಮಂತರಾಗಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿಯ ಮೌಲ್ಯ ಕಳೆದ ವರ್ಷಕ್ಕಿಂತಲೂ ಈ ವರ್ಷ ಹೆಚ್ಚಾಗಿದೆ. ಈ ವರ್ಷ ಅವರ ಆಸ್ತಿಯ ಮೌಲ್ಯ ರೂ. 36 ಲಕ್ಷ ಹೆಚ್ಚಳವಾಗಿದೆ.

ತೋಂಟದ ಶ್ರೀ, ಹಡೇ೯ಕರ, ಹಳಕಟ್ಟಿ ಜಗದ ಯುಗ ಪುರುಷರು- ಪಟ್ಟಣಶೆಟ್ಟರ

ವರದಿ: ಗುಲಾಬಚಂದ ಜಾಧವಆಲಮಟ್ಟಿ : ಶಾಂತ ಚಿತ್ತತೆ,ಬದ್ದತೆ ಖ್ಯಾತಿಯ ಕನ್ನಡದ ಕುಲದೇವರಾದ ಲಿಂ,ತೋಂಟದ ಸಿದ್ದಲಿಂಗ ಶ್ರೀಗಳು,ಕರುನಾಡಿನ…