ಉತ್ತರಪ್ರಭ ಸುದ್ದಿ

ಮುಳಗುಂದ: ಅನ್ಯಾಯಕ್ಕೊಳಗಾದ ರೈತರಿಗೆ ಆತ್ಮಸ್ಥೈರ್ಯ ತುಂಬಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ರೈತ ಸಂಘ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡ ವಿಜಯಕುಮಾರ ಸುಂಕದ ಹೇಳಿದರು.

ಮುಳಗುಂದ ಸಮೀಪದ ಕುರ್ತಕೋಟಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಡೆದ ಗ್ರಾಮ ಘಟಕದ ವಾರ್ಷಿಕೋತ್ಸವ ಕಾರ್ಯಕ್ರಮವನ್ನ ಉದ್ಘಾಟಿಸಿದರು.

ಸಮೀಪದ ಕುರ್ತಕೋಟಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಶುಕ್ರವಾರ ನಡೆದ ರೈತ ಸಂಘ ಗ್ರಾಮ ಘಟಕದ 5ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದೆ, ಮಾರುಕಟ್ಟೆಯಲ್ಲಿ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ರೈತ ವಿರೋಧಿ ಕಾನೂನುಗಳನ್ನ ಸರ್ಕಾರಗಳು ರದ್ದು ಮಾಡಬೇಕು. ಪ್ರತಿಯೊಂದು ಗ್ರಾಮದ ಮನೆ ಮನೆಯಲ್ಲೂ ರೈತರು ಜಾಗೃತರಾಗಿ, ಅನ್ಯಾಯದ ವಿರುದ್ದ ಸಂಘಟಿತ ಹೋರಾಟಕ್ಕೆ ಮುಂದಾಗಬೇಕು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ರೈತ ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಈಚಘಟ್ಟಿ ಸಿದ್ದವೀರಪ್ಪ ಮಾತನಾಡಿ, ರೈತ ಬೆವರುಹರಿಸಿ ದುಡಿದರು ಯೋಗ್ಯ ಬೆಲೆ ಸಿಗುತ್ತಿಲ್ಲ ಆದರೂ ಆತ ನಿಸ್ವಾರ್ಥಿ. ಒಗ್ಗಟ್ಟಿನಲ್ಲಿ ಬಲವಿದೆ ಸಮಾಜದಲ್ಲಿ ಬೇಕು ಬೇಡಗಳ ಈಡೆರಿಕೆಗೆ ಸಂಘಟಿತ ಹೋರಾಟ ಅಗತ್ಯವಿದೆ. ನಾವು ಬೆಳೆದ ಬೆಳೆಗೆ ನಾವೇ ಬೆಲೆ ನಿಗಧಿ ಮಾಡುವ ಕಾನೂನು ಜಾರಿಯಾಗಬೇಕು. ರೈತರ ಹಿತರಕ್ಷಣೆ ಕಾಪಾಡುವ ಧ್ವನಿಯಾಗಿ ರೈತ ಸಂಘ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು. ಎಂದು ಕರೆ ನೀಡಿದರು.

ಗ್ರಾಮ ಘಟಕದ ಅಧ್ಯಕ್ಷ ಬಸವರಾಜ ಬಾಳಿಕಾಯಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಬಸವರಾಜ ಸಾಬಳೆ,ಜನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ, ತಾಲೂಕ ಘಟಕದ ಅಧ್ಯಕ್ಷ ಮಂಜುನಾಥ ಗೋಡೆ,ಮುಖಂಡರಾದ ಅಪ್ಪಣ್ಣ ಭಂಗಿ,ಹನಮಂತಪ್ಪ ಈಳಗೇರ,ಬಸಪ್ಪ ಕರಿಗಾರ,ಬಿ.ಆರ್.ರಾಠೋಡ,ಅಂದಪ್ಪ ಚಿಂಚಲಿ,ಅಕ್ಕಮಹಾದೇವಿ ಹೊಸಮನಿ,ಮೋದಿನಸಾಬ ಬುಕಿಟಗಾರ,ಪ್ರಭಪ್ಪ ದುಗಾಣಿ ಹಾಗೂ ವಿವಿಧ ಗ್ರಾಮಗಳ ರೈತ ಸಂಘದ ಪದಾಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *

You May Also Like

ಆಲಮಟ್ಟಿ ಡ್ಯಾಂ : c ಕ್ಯುಸೆಕ್ ನೀರು ಹೊರಕ್ಕೆ ಗುಲಾಬಚಂದ ಜಾಧವ

ಆಲಮಟ್ಟಿ: ಜಲಾಶಯಕ್ಕೆ ಒಳಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ಹೊರ ಹರಿವು ಆರಂಭಗೊಂಡಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟ ,ರಾಜ್ಯದ…

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 606ಕ್ಕೆ ಏರಿಕೆ

ಇಂದು ಮತ್ತೆ ರಾಜ್ಯದಲ್ಲಿ ಐದು ಹೊಸ ಕೊರೋನಾ ಪಾಸಿಟಿವ್ ಕೇಸುಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಸಂಖ್ಯೆ 606ಕ್ಕೆ ಏರಿಕೆ ಆಗಿದೆ.

ಭೀಮಾ ತೀರದಲ್ಲಿ ಮತ್ತೆ ಹರಿದ ನೆತ್ತರು!

ವಿಜಯಪುರ : ಭೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ಅಲ್ಲಿ ಮತ್ತೆ ನೆತ್ತರು ಹರಿದಿದೆ.

ಜಿಪಂ, ತಾಪಂ ಸೇರಿ ರಾಜ್ಯದಲ್ಲಿ ಎಲ್ಲ ಚುನಾವಣೆ ಮುಂದೂಡಿಕೆ

ಈಗಾಗಲೇ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದ್ದು ರಾಜ್ಯ ಸರ್ಕಾರ ಸೋಮವಾರ ನಡೆದ ಸಂಪುಟ ಸಭೆಯಲ್ಲಿ 14 ದಿನಗಳ ಕಾಲ ಜನತಾ ಕರ್ಪ್ಯೂಗೆ ನಿರ್ಧರಿಸಿದೆ.