ಬೆಂಗಳೂರು: ಕಿಚ್ಚ ಸುದೀಪ್ ಸಾಮಾಜಿಕ ಕಳಕಳಿಯ ಮಾನವೀಯತೆಯ ಹರಿಕಾರರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಭಿಮಾನಿಗಳ ಮನೆ ಗೆಲ್ಲುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಆಟೋ ಚಾಲಕನ ಸಹೋದರಿಯ ಮದುವೆ ಖರ್ಚು ಮಾಡಿ ಎಲ್ಲರ ಮನ ಗೆದ್ದಿದ್ದರು. ಸದ್ಯ ಸರ್ಕಾರಿ ಶಾಲೆಯನ್ನು ದತ್ತು ಪಡೆದಿದ್ದಾರೆ.

ನಟ ಸುದೀಪ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಾಲ್ಕು ಶಾಲೆಗಳನ್ನು ದತ್ತು ಪಡೆಯಲಾಗಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮೂರು ಹಾಗೂ ಹಿರಿಯೂರು ತಾಲೂಕಿನ ಒಂದು ಸರ್ಕಾರಿ ಶಾಲೆಯನ್ನು ದತ್ತು ಪಡೆಯಲಾಗಿದೆ.

ಪಿ. ಒಬವನಹಳ್ಳಿ, ಚಳ್ಳಕೆರೆ ಶಾಲೆ, ಪರುಶರಾಂಪುರ ಶಾಲೆ ಮತ್ತು ಚಿತ್ರದುರ್ಗದ ಶಾಲೆಯನ್ನು ದತ್ತು ಪಡೆದು ಶಾಲೆಯ ಸಂಪೂರ್ಣ ಅಭಿವೃದ್ಧಿ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಶಾಲೆಗಳಿಗೆ ಬೇಕಾದ ಅಗತ್ಯ ಸೌಕರ್ಯಗಳನ್ನು ನೀಡುವುದಕ್ಕೆ ಟ್ರಸ್ಟ್ ಮುಂದಾಗಿದೆ.

ಕಟ್ಟಡ ದುರಸ್ತಿ, ಶೌಚಾಲಯ ವ್ಯವಸ್ಥೆ, ಪೀಠೋಪಕರಣ, ಶಾಲೆಗಳಿಗೆ ಕಂಪ್ಯೂಟರ್ ನೀಡುವುದು ಸೇರಿದಂತೆ ಅನೇಕ ಯೋಜನೆಗಳನ್ನು ಟ್ರಸ್ಟ್ ಹಮ್ಮಿಕೊಂಡಿದೆ. ಅಲ್ಲದೇ ಗುಣಮಟ್ಟದ ಶಿಕ್ಷಣ ಸೇರಿದ್ದಂತೆ ಮಕ್ಕಳನ್ನು ಸರ್ಕಾರಿ ಶಾಲೆಯತ್ತ ಕರೆತರುವ ಪ್ರಯತ್ನವನ್ನು ಈ ಮೂಲಕ ಮಾಡಲಾಗುತ್ತಿದೆ. ಸುದೀಪ್ ಅವರ ಸಾಮಾಜಿಕ ಕಾರ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ

Leave a Reply

Your email address will not be published. Required fields are marked *

You May Also Like

ನನ್ನ ಮನೆಯನ್ನು ದೇವರೇ ಕಾಪಾಡಬೇಕೆಂದು ನಟ ರವಿಶಂಕರ್ ಹೇಳಿದ್ಯಾಕೆ..?

ಬೆಂಗಳೂರು : ನನ್ನ ಮಕ್ಕಳಿರುವ ಮನೆಯನ್ನು ದೇವರೇ ಕಾಪಾಡಬೇಕು ಎಂದು ನಟ ರವಿಶಂಕರ್ ಟ್ವೀಟ್ ಮಾಡಿದ್ದಾರೆ.…

ಸಾಯುವ ಸಮಯವನ್ನು ನಟ ಸುಶಾಂತ್ ಮೊದಲೇ ನಿರ್ಧರಿಸಿದ್ದರೆ?

ಬೆಂಗಳೂರು: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆಯ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಹಲವರ…

ಗೋಲ್ಡನ್ ಸ್ಟಾರ್ ಗೆ ಅಡ್ವಾನ್ಸ್ ವಿಶ್ ಮಾಡಿದ ಕಿಚ್ಚ

ಬೆಂಗಳೂರು : ಕಿಚ್ಚ ಸುದೀಪ್ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಅಡ್ವಾನ್ಸ್ ವಿಶ್ ಮಾಡಿದ್ದಾರೆ. ಗೋಲ್ಡನ್…

ನಟಿ ರಾಧಿಕಾ ಕುಮಾರಸ್ವಾಮಿ ಎಲ್ಲೂ ಓಡಿ ಹೋಗಿಲ್ವಂತೆ!

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರಾಧಿಕಾ ಕುಮಾರಸ್ವಾಮಿ ಖಾತೆಗೆ ಯುವರಾಜ್ ಖಾತೆಯಿಂದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ…