ಜಾವಾ ಯೆಝ್ಡಿ ಮೋಟಾರ್ ಸೈಕಲ್ ಎಂದಿನಂತೆ ಇರಲಿದೆ. ಜೊತೆಗೆ ಯೆಝ್ಡಿ ಇಲೆಕ್ಟ್ರಿಕಲ್ ಮೋಟಾರ್ ವೆಹಿಕಲ್ ಕೂಡ ಮಾರುಕಟ್ಟೆಗೆ ಬರಲಿದೆ.

ನವದೆಹಲಿ: ಡಡ್ ಡಡ್ ಡಡ್.. ಇಡೀ ರಸ್ತೆಗೆ ತಾನೇ ರಾಜಾ ಎಂಬಂತೆ ನುಗ್ಗುವ ದೈತ್ಯ ಯೆಝ್ಡಿ ಕಳೆದ 5 ವರ್ಷಗಳಲ್ಲಿ ಮತ್ತೆ ಜನಪ್ರಿಯತೆ ಪಡೆದುಕೊಂಡಿದೆ.

ಈಗಿನ ರೂಪದಲ್ಲೇ ಅದು ಲಭ್ಯವಿರಲಿದ್ದು, ಅದರ ಇಲೆಕ್ಟ್ರಿಕಲ್ ಅವತಾರವೂ ತಯಾರಾಗುತ್ತಿದೆ. ಆದರೆ, ವಿದ್ಯುತ್ ಮೋಟಾರ್ ವೆಹಿಕಲ್ ಅವತರಣಿಕೆಯಲ್ಲೂ ಅದರ ಫೇಮಸ್ ಡಡ್ ಡಡ್ ಸೌಂಡ ಉಳಿಸಿಕೊಳ್ಳಲು ಕಂಪನಿ ನಿರ್ಧರಿಸಿದೆ.

2018ರಲ್ಲಿ ಎಝ್ಡಿ ಉತ್ಪಾದಕ ಜಾವಾ ಕಂಪನಿಯನ್ನು ಮಹೀಂದ್ರಾ ಮೋಟಾರ್ಸ್ ಖರೀದಿಸಿತ್ತು.

60-80ರ ದಶಕದಲ್ಲಿ ಬ್ರ್ಯಾಂಡ್ ಬೈಕ್ ಎನಿಸಿದ್ದ ಯೆಝ್ಡಿ ಕಳೆದ 5 ವರ್ಷದಿಂದ ಮತ್ತೆ ಯುವಜನತೆಯನ್ನು ಆಕರ್ಷಿಸಿದೆ. ಐಡಿಯಲ್ ಜಾವಾ ಕಂಪನಿಯ ಸಂಸ್ಥಾಪಕ ಫಾರೋಖ್ ಇರಾನಿ ನೇತೃತ್ವದಲ್ಲಿ ಯೆಝ್ಡಿ ರೂಪುಗೊಂಡಿತ್ತು. ಅಂದಂತೆ ಜಾವಾ ಕಂಪನಿ ಮೈಸೂರಿನದ್ದು. 1960ರಲ್ಲಿ ಅದು ಯೆಝ್ಡಿ ಬೈಕ್ ಮೂಲಕ ಸಾಕಷ್ಟು ಜನಪ್ರಿಯತೆ ಮತ್ತು ಲಾಭ ಗಳಿಸಿತ್ತು. 1960ರ ದಶಕದಿಂದ 80ರ ದಶಕದ ಆರಂಭದವರೆಗೂ ಜೋರಾಗಿದ್ದ ಯೆಝ್ಡಿ ನಂತರ ಮರೆಯಾದಂತೆ ಭಾಸವಾಗಿತ್ತು. ಈ ಐದು ವರ್ಷಗಳಲ್ಲಿ ಅದು ಮತ್ತೆ ಸದ್ದು ಮಾಡುತ್ತಿದೆ.

Leave a Reply

Your email address will not be published. Required fields are marked *

You May Also Like

ಅಭಿಮಾನಿಗಳಲ್ಲಿ ಗೋಲ್ಡನ್ ಸ್ಟಾರ್ ಮನವಿ ಮಾಡಿದ್ದೇನು?

ಬೆಂಗಳೂರು : ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಜು. 2ರಂದು ಗೋಲ್ಡನ್…

ಕೋವಿಡ್: ಮನೆಮದ್ದು ಪರಿಣಾಮಕಾರಿಯಲ್ಲ: ಇಲ್ಲಿದೆ ವೈದ್ಯಕೀಯ ಸತ್ಯ

ಮತ್ತೆಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಕೋವಿಡ್ ತಡೆ ಮತ್ತು ನಿವಾರಣೆಗೆ ನಿಂಬೆರಸ, ಅರಿಶಿಣ, ಮೆಣಸು, ಬೆಲ್ಲ ಮತ್ತು ಶುಂಠಿ ಪರಿಹಾರ ಎಂಬ ಸಂದೇಶ ವಿವಿಧ ರೂಪದಲ್ಲಿ ಹರಿದಾಡುತ್ತಿದೆ.

ಪುಟಾಣಿಗಳ ಬಿಂದಾಸ್ ಸ್ಟೇಪ್ಸ್…ಬೊಂಬಾಟ್ ಪ್ರಫಾರ್ಮನ್ಸ್ ಗೆ ಜನ ಫಿದಾ…!

ವಿಶೇಷ ವರದಿ: ಗುಲಾಬಚಂದ ಆರ್. ಜಾಧವಆಲಮಟ್ಟಿ : ಪುಟ್ಟ ಪುಟ್ಟ ಪುಟಾಣಿ ಮಕ್ಕಳು ಫೂಲ್ ಜೋಶ್…