ಯಾರೋ ಒಬ್ಬರು ಚೈನ್ ಸ್ಮೋಕರ್ ಒಬ್ಬನನ್ನು ಕೇಳಿದರಂತೆ…, ಏನ್ರೀ ಅಷ್ಟೊಂದು ಸಿಗರೇಟ್ ಸೇದತೀರಾ ಅಂತ?  ಅದಕ್ಕೆ ಆ ಚೈನ್ ಸ್ಮೋಕರ್ ಹೇಳಿದ್ದು.. ಬಡ್ಡಿ ಮಗಂದು ಈ ಸಿಗರೇಟ್ ಅನ್ನೋದು ಆರೋಗ್ಯಕ್ಕೆ ತುಂಬಾ ಕೆಟ್ಟದ್ದು… ಅದಕ್ಕೇ ನಮ್ಮ ಊರಲ್ಲಿರೋ ಸಿಗರೇಟ್ಗಳನ್ನು ಸುಟ್ಟು ಬೂದಿ ಮಾಡ್ತಾ ಇದೀನಿ.. ಮುಂದಿನ ಜನಾಂಗದವರಿಗೆ ಸಿಗರೇಟ್ ಸಿಗಬಾರದು ನೋಡಿ… ನನ್ನೊಬ್ಬನ ಆರೋಗ್ಯ ಹಾಳಾದರೆ ಹಾಳಾಗಲಿ ಅಂದನಂತೆ….

Jokes appart…. ಪ್ರತಿಯೊಬ್ಬ ಸ್ಮೋಕರ್ ಅಂದ್ಕೊಳ್ಳೋದು…. ನನಗೆ ಮಾತ್ರ  ಏನೂ ಆಗಲ್ಲ ( ಸ್ಮೋಕ್ ಮಾಡ್ತಾನೆ ನೂರು ವರ್ಷ ಬದುಕಿದವರನ್ನು ನೋಡಿದೀನಿ… ಯಾವುದೇ ಚಟಗಳಿಲ್ಲದವರು 40 ವರ್ಷಕ್ಕೆ ಗೊಟಕ್ ಅಂದಿದ್ದನ್ನು ನೋಡಿದೀನಿ ) … ನಾನು ಆರೋಗ್ಯವಾಗೇ ಇರ್ತೀನಿ ಅನ್ನೋ ಹುಚ್ಚು ನಂಬಿಕೆ ಬಹುತೇಕರಲ್ಲಿರುತ್ತೆ.

ಹೀಗೆ ಮುಂದುವರೆಯುತ್ತಂತೆ ಚಟಗಾರನ ವಾದ ಸರಣಿ. ಈ ಮನಸ್ಸೆಂಬ ಮಾಯೆಯೇ ಹಾಗೆ. ತನಗೆ ಬೇಕಾದದ್ದನ್ನು ಸಾವಿರ ಕಾರಣ ಕೊಟ್ಟು ಸಮರ್ಥಿಸಿಕೊಳ್ಳುತ್ತೆ. ಮತ್ತು ಬೇಡವಾದದ್ದನ್ನು ತಿರಸ್ಕರಿಸಲೂ ನೂರು ಕಾರಣ ಹುಡುಕುತ್ತೆ

ಪ್ಯಾಸಿವ್ ಸ್ಮೋಕಿಂಗ್ ಕೂಡ ಆರೋಗ್ಯಕ್ಕೆ ಹಾನಿಕಾರಕ ಎಂದು ಗೊತ್ತಿದ್ದೂ ಗುಂಪಿನಲ್ಲಿ ಸಿಗರೇಟ್ ಸೇದುವವರ ಮತ್ತು ಅವರನ್ನು ದೂರವಿಡದೆ ಪಕ್ಕಕ್ಕೆ ನಿಲ್ಲುವ ಜನರ ಮನಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.

ಕರೋನಾ ಮಹಾಮಾರಿಯ ಹರಡುವಿಕೆಯ ನಡುವೆಯೂ ತಾವು ಚಿರಂಜೀವಿಗಳೆಂಬಂತೆ ಬಿಂದಾಸ್ ಆಗಿ ಲಾಕ್ ಡೌನ್ ನಿಯಮಗಳನ್ನು ಮುರಿದು ರಸ್ತೆ ಗಳಲ್ಲಿ ತಿರುಗಾಡುವ, ಮಾಂಸ ದಂಗಡಿಗಳಿಗೆ ಮುಗಿ ಬೀಳುವ. ಸೋಷಿಯಲ್ ಡಿಸ್ಟನ್ಸಿ0ಗ್ ನಿಯಮಕ್ಕೆ ಕ್ಯಾರೇ ಅನ್ನದ ಜನಗಳನ್ನು ನೋಡಿದಾಗ, ಅದರಲ್ಲೂ ವಿದ್ಯಾವಂತರನ್ನು ನೋಡಿದಾಗ ಇವರ ಮನಸ್ಥಿತಿ ಅಧ್ಯಯನ ಯೋಗ್ಯ ಎನ್ನಿಸುತ್ತದೆ.

ವಿದ್ಯೆ ಮನುಷ್ಯನನ್ನು ಸುಶಿಕ್ಷಿತನನ್ನಾಗಿ ಮಾಡುತ್ತೆ ಎನ್ನುವ ಮಾತು ಪದೇ ಪದೇ ಸುಳ್ಳಾಗುತ್ತಿದೆ. ಕನಿಷ್ಠ ಕಾಮನ್ ಸೆನ್ಸ್ ಎನ್ನುವದು ಇಲ್ಲದಂತೆ ವರ್ತಿಸುವ ಇವರನ್ನು ಕಂಡರೆ ಕನಿಕರ ವಾಗುತ್ತೆ? ಇವರಿಗೆ ಬುದ್ದಿ ಬರಬೇಕಾದರೆ ಏನು ಮಾಡಬೇಕು? ನಾವು ಮಾಡಬೇಕಿಲ್ಲ. ಕರೋನಾ ಎಂಬ ಒಂದು ಕ್ಷುದ್ರ ಜೀವಿಯೇ ಇವರಿಗೆ ಬುದ್ದಿ ಕಲಿಸುವ ಕಾಲ ದೂರಿಲ್ಲ. ತಮ್ಮ ಮನೆಗೊಬ್ಬ ಸೋಂಕಿತ, ತಮ್ಮ ಮನೆಯಲ್ಲೊಂದು ಅನಾಹುತ ಆಗುವವರೆಗೆ ಇವರಿಗೆ ಬುದ್ದಿ ಬಾರದು.

ಆದರೆ ಚಿಂತೆ ಇರುವುದು ಇವರು ತಮ್ಮ ಜೀವವನ್ನೂ ಅಪಾಯಕ್ಕೊಡ್ಡಿ ಇತರರ ಜೀವವನ್ನೂ ಅಪಾಯಕ್ಕೊಡ್ಡುತ್ತಾರಲ್ಲ ಅದಕ್ಕೆ ಸಧ್ಯಕ್ಕೆ ಇವರನ್ನು ಸಮಾಜ_ವಿರೋಧಿಗಳೆನ್ನದೇ ವಿಧಿಯಿಲ್ಲ.

ಪೊಲೀಸರು ಇಂಥವರಿಗಾಗೇ #ಸಮಾಜ_ವಿರೋಧಿ ಎಂಬ ಅಳಿಸಲಾಗದ ಇಂಕಿನ ಸೀಲ್ ಮಾಡಿಸಿ ಇವರ ಹಣೆಗೇ ಒತ್ತಲಿ.. ಆಗಲಾದರೂ ಬುದ್ದಿ ಬಂದಿತು.

ಶಿವಯೋಗಿ ಪಾಟೀಲ್, ಉಪನ್ಯಾಸಕರು

Leave a Reply

Your email address will not be published.

You May Also Like

ಬೆಟ್ಟದ ಹೂವಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ

ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಇಂದು ಘೊಷಿಸಿದ್ದಾರೆ.ಇಂದು ಅರಮನೆ ಮೈದಾನದಲ್ಲಿ ನಡೆದ ಪುನೀತ್ ನಮನ ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿ ಅವರು ಈ ಘೊಷಣೆ ಮಾಡಿದ್ದಾರೆ

ಪುರಾಣ ಕವಿ ರಾಮಣ್ಣ ಬ್ಯಾಟಿ ಇನ್ನಿಲ್ಲ

ಗದಗ: ಕರ್ನಾಟಕ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಗದುಗಿನ ತೋಂಟದಾರ್ಯ ಲಿಂಗೈಕ್ಯ ಪರಮಪೂಜ್ಯ ಡಾಕ್ಟರ್ ತೋಂಟದ ಸಿದ್ದಲಿಂಗ…

ದೇಶದಲ್ಲಿ ಕೊರೊನಾ ಇನ್ನೂ ಗರಿಷ್ಠ ಮಟ್ಟಕ್ಕೆ ಹೋಗಲಿದೆಯೇ?

ನವದೆಹಲಿ : ದೇಶದಲ್ಲಿ ಸದ್ಯ ದಿನದಿಂದ ದಿನಕ್ಕೆ ಕೊರೊನಾ ಹಾವಳಿ ಹೆಚ್ಚಾಗುತ್ತಿದೆ. ಆದರೆ, ನವೆಂಬರ್ ವೇಳೆಗೆ…

ಬಿಎಂಟಿಸಿ ಪಾಸ್ ದರ ಇಳಿಕೆ: ಇನ್ಮುಂದೆ ಟಿಕೇಟ್ ಬದಲಾಗಿ ಪಾಸ್, ಯಾವುದಕ್ಕೆ ಎಷ್ಟು?

ಕೊನೆಗೂ ಪ್ರಯಾಣಿಕರ ಮನವಿಗೆ ಸ್ಪಂದಿಸಿದ ಬಿಎಂಟಿಸಿ ಪಾಸ್ ದರವನ್ನು ಇಳಿಕೆಗೆ ಮುಂದಾಗಿದೆ. ನಾಳೆಯಿಂದಲೇ ಹೊಸ ದರ ಅನ್ವಯವಾಗಲಿದೆ. ಹೀಗಾಗಿ ನಿತ್ಯ ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ ಬಸ್ ಗಳನ್ನೆ ನೆಚ್ಚಿಕೊಂಡಿದ್ದ ಲಕ್ಷಾಂತರ ಜನರಿಗೆ ಇಂದು ಬಿಎಂಟಿಸಿ ಸಿಹಿ ಸುದ್ದಿ ನಿಡಿದೆ.