ಈ ಅವಳಿ-ಜವಳಿ ನೋಡೊಕ್ಕಂತೂ ಡಿಟ್ಟೋ. ಅವರಿಬ್ಬರಿಗೂ ಸಿಕ್ಕ ಅಂಕಗಳು ಕೂಡ ಡಿಟ್ಟೋ. ಅವರ ಹೆಸರು ಮಾತ್ರ ಬೇರೆ ಬೇರೆಯಷ್ಟೆ!

ನೋಯ್ಡಾ: ನೋಡಲು ಒಂದೇ ತರಹ, ಝೆರಾಕ್ಸ್ ಕಾಪಿ ಅಂತಾರಲ್ಲ ಹಂಗೇ. ನಗು, ಕಣ್ಣೋಟ, ಮನಸು, ಮನಸಿನ ಸೊಗಸು, ಮನಸಿನ ಮುನಿಸು…ಎಲ್ಲವೂ ಒಂದೇ ಅಂದರೆ ಒಂದೇ. ಇವರಿಬ್ಬರ ಕನಸೂ ಒಂದೇ, ಇಂಜಿನಿಯರಿಂಗ್ ಓದುವುದು.

ಇವರು ಮಾನಸಿ ಮತ್ತು ಮಾನ್ಯಾ ಎಂಬ ಅವಳಿ-ಜವಳಿ. ಈಗ ಪ್ರಕಟವಾಗಿರುವ ಸಿಬಿಎಸ್ಸಿ ಪರೀಕ್ಷೆಯಲ್ಲಿ ಇಬ್ಬರೂ ಅಷ್ಟೇ ಪರ್ಸೆಂಟೇಜ್ ಮಾಡಿದ್ದಾರೆ. ಅದಿರ್ಲಿ, ಎಲ್ಲ ವಿಷಯದಲ್ಲೂ ಇಬ್ಬರಿಗೂ ಸೇಮ್ ಮಾರ್ಕ್ಸ್!

‘ನಮ್ಮಿಬ್ಬರ ಹೆಸರು ಬೇರೆ ಎನ್ನುವುದು ಬಿಟ್ಟರೆ, ನಾವಿಬ್ಬರೂ ಒಂದೇ’ ಎನ್ನುತ್ತಾಳೆ ಮಾನಸಿ. ‘ಎರಡು ವರ್ಷದ ಹಿಂದೆ ಅವಳಿ-ಜವಳಿಗೆ ಒಂದೇ ಅಂಕ ಬಂದಿದ್ದು ಓದಿದ್ದೆ. ಈಗ ನಮಗೇ ಅನುಭವವಾಗಿದೆ’ ಎನ್ನುತ್ತಾ:ಳೆ ಮಾನ್ಯಾ.

Leave a Reply

Your email address will not be published. Required fields are marked *

You May Also Like

ಪದವಿವೊಂದೇ ಸಾಲದು ಎಲ್ಲ ಜ್ಞಾನವೂ ಬೇಕು-ಡಾ.ಸಿ.ಎಂ.ಜೋಶಿ

ಉತ್ತರಪ್ರಭ ಸುದ್ದಿನಿಡಗುಂದಿ: ಅಧ್ಯಯನ ಕೇವಲ ಪದವಿ ಸಂಪಾದನೆಗೆ ಮಾತ್ರ ಸೀಮಿತವಾಗದೇ ಅದು ಸಮಗ್ರ ಜ್ಞಾನ ಪಡೆಯುವಂತಾಗಬೇಕು.…

ಬಂಜಾರ ಭಾಷೆ, ಸಂಸ್ಕೃತಿ ಉಳುವಿಗಾಗಿ ಸಮನ್ವಯ ಮಹಾಸಭೆ

ಉತ್ತರಪ್ರಭ ಸುದ್ದಿ ವಿಜಯಪುರ: ಜಿಲ್ಲೆಯ ಕೋಲ್ಹಾರ ತಾಲೂಕಿನ ಕೂಡಗಿ ತಾಂಡಾದ ಸದಾ ಸಮಾಜದ ಬಗ್ಗೆ ಚಿಂತಿಸುವ…

ಹಿರಿಯ ಸಾಹಿತಿ, ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ ಪಾಟೀಲ ನಿಧನ

ಬೆಂಗಳೂರ: ಹಿರಿಯ ಸಾಹಿತಿ, ನಾಟಕಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ)…