ಶನಿವಾರ 2,798 ಕೇಸ್ಗಳೊಂದಿಗೆ ಸೋಂಕಿತ ರಾಜ್ಯಗಳ ಪಟ್ಟಿಯಲ್ಲಿ 5ನೆ ಸ್ಥಾನಕ್ಕೇರಿದ್ದ ರಾಜ್ಯ, ಇಂದು 2,627 ಪಾಸಿಟಿವ್ಗಳನ್ನು ಕಂಡಿದೆ. ನಿನ್ನೆ 70 ಸಾವು ಸಂಭವಿಸಿದ್ದರೆ ಇಂದು 71 ಸಾವು ಸಂಭವಿಸಿವೆ.
ಬೆಂಗಳೂರು: ರಾಜ್ಯದಲ್ಲಿಂದು 2627 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 38843 ಕ್ಕೆ ಏರಿಕೆಯಾದಂತಾಗಿದೆ. ಇದರಲ್ಲಿ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 693. ಈ ಮೂಲಕ ಒಟ್ಟು ಈವರೆಗೆ ಬಿಡುಗಡೆ ಹೊಂದಿದವರ ಸಂಖ್ಯೆ 15409 ಕೇಸ್ ಗಳು. ರಾಜ್ಯದಲ್ಲಿ 22746 ಸಕ್ರೀಯ ಪ್ರಕರಣಗಳಿವೆ.
ಇಂದು ಕೊರೊನಾ ಸೋಂಕಿನಿಂದ 71 ಜನರು ಮೃತಪಟ್ಟಿದ್ದು, ಮೃತರ ಸಂಖ್ಯೆ 684 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಹೆಲ್ಥ್ ಬುಲೆಟಿನ್ ತಿಳಿಸಿದೆ.
ದೇಶದಲ್ಲೇ ಅತಿ ವೇಗವಾಗಿ ಸೋಂಕು ಹರಡಲ್ಪಡುತ್ತಿರುವ ರಾಜ್ಯ ಎಂದು ನಿನ್ನೆಯಷ್ಟೇ ಗುರುತಿಸಲ್ಪಟ್ಟಿದ್ದ ರಾಜ್ಯದಲ್ಲಿ ಇಂದು 2,627 ಪಾಸಿಟಿವ್ ಕೇಸ್ ಗಳು ಪತ್ತೆಯಾಗುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 38,843ಕ್ಕೆ ತಲುಪಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣಗಳು
ಬೆಂಗಳೂರು ನಗರ- 1525
ದಕ್ಷಿಣ ಕನ್ನಡ-196
ಧಾರವಾಡ- 129
ಯಾದಗಿರಿ-120
ಕಲಬುರಗಿ-79
ಬಳ್ಳಾರಿ-63
ಬೀದರ್-62
ರಾಯಚೂರು-48
ಉಡುಪಿ-43
ಮೈಸೂರು-42
ಶಿವಮೊಗ್ಗ-42
ಚಿಕ್ಕಬಳ್ಳಾಪೂರ-39
ಹಾಸನ-31
ಕೊಪ್ಪಳ-27
ತುಮಕೂರು-26
ಕೋಲಾರ-24
ದಾವಣಗೆರೆ-20
ಬೆಂಗಳೂರು ಗ್ರಾಮಾಮಂರ-19
ಕೊಡಗು-15
ಗದಗ-14
ಚಾಮರಾಜನಗರ-13
ಉತ್ತರ ಕನ್ನಡ-12
ಹಾವೇರಿ-12
ಚಿಕ್ಕಮಗಳೂರು-10
ಬಾಗಲಕೋಟೆ-07
ಮಂಡ್ಯ-04
ರಾಮನಗರ-03
ಬೆಳಗಾವಿ-02