ಬೆಂಗಳೂರು: ಇದೇ 30-06-2020ಕ್ಕೆ ಪದವಿಧರ ಹಾಗೂ ಶಿಕ್ಷಕರ ಕ್ಷೇತ್ರದ ನಾಲ್ಕು ಸ್ಥಾನಗಳಿಗೆ ಅವಧಿ ಪೂರ್ಣಗೊಳ್ಳಲಿದೆ. ಆದರೆ ಸದ್ಯ ಕೋವಿಡ್ 19 ಸೋಂಕು ನಿಯಂತ್ರಣದ ಉದ್ದೇಶದಿಂದ 2 ಪದವಿಧರ ಹಾಗೂ 2-ಶಿಕ್ಷಕರ ಮತಕ್ಷೇತ್ರಗಳಿಗೆ ನಡೆಯಬೇಕಿದ್ದ ಚುನಾವಣೆ ಕುರಿತು ಚುನಾವಣಾ ಆಯೋಗ ಮಹತ್ವದ ಆದೇಶ ನೀಡಿದೆ.

ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳಿಂದ ದಿನಾಂಕ 30-05-2020 ರಂದು ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗ ವರದಿಯನ್ನು ಪಡೆದುಕೊಂಡಿದೆ. ವರದಿ ಪರಿಶೀಲಿಸಿ ಭಾರತ ಸಂವಿಧಾನದ 324ನೇ ಪರಿಚ್ಛೇದದ 1951ರ ಜನಪ್ರತಿನಿಧಿ ಕಾಯ್ದೆ ಸೆಕ್ಷನ್ 16ರ ಅಡಿಯಲ್ಲಿ ಅವಧಿ ಪೂರ್ಣಗೊಳ್ಳುವ ವಿಧಾನ ಪರಿಷತ್ ಸ್ಥಾನಗಳಿಗೆ ನಡೆಸಬೇಕಿದ್ದ ಚುನಾವಣೆಯನ್ನು ಸದ್ಯಕ್ಕೆ ನಡೆಸದಿರುವ ಬಗ್ಗೆ ಚುನಾವಣಾ ಆಯೋಗ ಆದೇಶಿಸಿದೆ.

ಕೊರೊನಾ ಸೋಂಕು ನಿಯಂತ್ರಣದ ಪರಿಸ್ಥಿತಿಯನ್ನು ಅವಲೋಕಿಸಿ ಮುಂದೆ ಚುನಾವಣೆ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಚುನಾವಣಾ ಆಯೋಗ ಕಾರ್ಯದರ್ಶಿ ಸುಮನ್ ಕುಮಾರ್ ದಾಸ್ ಆದೇಶ ಹೊರಡಿಸಿದ್ದಾರೆ.  

Leave a Reply

Your email address will not be published. Required fields are marked *

You May Also Like

ಮಹಾಮಾರಿಗೆ ಬಾಗಲಕೋಟೆಯಲ್ಲಿ ಬಲಿ

ಬಾಗಲಕೋಟೆ: ಇಲ್ಲಿನ ನವನಗರದ 47ನೇ ಸೆಕ್ಟರ್ ನಿವಾಸಿ 50 ವರ್ಷದ ವ್ಯಕ್ತಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.…

ಲೋಕಹಿತಕ್ಕಾಗಿ ಮಿಡಿದ ಶರಣರ ಛಾಪು ಎಂದಿಗೂ ಅಳಿಯದು-ಶಾಸಕ ಶಿವಾನಂದ ಪಾಟೀಲ

ಚಿತ್ರವರದಿ: ಗುಲಾಬಚಂದ ಜಾಧವ ಆಲಮಟ್ಟಿ : ಲೋಕದ ಹಿತಕ್ಕಾಗಿ ಹಗಲಿರುಳು ಶ್ರಮಿಸಿರುವ ಕಾಯಕಯೋಗಿ ಕನಾ೯ಟಕ ಗಾಂಧಿ…

ಗದಗ ಜಿಲ್ಲೆಯಲ್ಲಿಂದು 7 ಕೊರೊನಾ ಪಾಸಿಟಿವ್!

ಗದಗ: ಜಿಲ್ಲೆಯಲ್ಲಿಂದು 7 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 210…

ಗದಗನಲ್ಲಿ ಕಂದಮ್ಮಳಿಗೆ ಕೊರೊನಾ ಕಾಟ : ಇಂದು 4 ಪಾಸಿಟಿವ್!

ಗದಗ: ಜಿಲ್ಲೆಯಲ್ಲಿಂದು 4 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 203…