ನವದೆಹಲಿ: ‘2021ರವರೆಗೂ ದೇಶದಲ್ಲಿ ಕೋವಿಡ್ ಲಸಿಕೆ ತಯಾರಿಸುವುದು ಅಸಾಧ್ಯ’ ಎಂದು ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ಸಂಸತ್ತಿನ ವಿಜ್ಞಾನ ಮತ್ತು ತಂತ್ರಜ್ಞಾನ ಸ್ಥಾಯಿ ಸಮಿತಿಯ ಎದುರು ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸಂಶೋಧಕರು ಈ ಅಭಿಪ್ರಾಯ ತಿಳಿಸಿದರು.

ಇದೇ ಅಗಸ್ಟ್ 15ರೊಳಗೆ ಕೋರೊನಾ ಲಸಿಕೆ ಸಿದ್ಧ ಎಂದು ಐಸಿಎಂಆರ್ ಘೋಷಿಸಿದಾಗ ವ್ಯಾಪಕ ಟೀಕೆ ಕೇಳಿ ಬಂದಿದ್ದವು. ಲಸಿಕೆ ಸಂಶೋಧನೆಯಲ್ಲಿ ಹುಡುಗಾಟದ ಮಾತು ಬೇಡ ಎಂದು ಹಲವಾರು ಸಂಶೋಧಕರು ಎಚ್ಚರಿಸಿದ್ದರು. ಅಗಸ್ಟ್ 15ರ ಪ್ರಧಾನಿಯವರ ಭಾಷಣಕ್ಕೆ ಮಹತ್ವ ತಂದು ಕೊಡಲು ಈ ಮೂರ್ಖತನದ ನಿರ್ಧಾರ ಮಾಡಲಾಗಿದೆ ಎಂದೂ ಟೀಕೆಗಳು ಕೇಳಿ ಬಂದಿದ್ದವು.

ನಂತರ ಸ್ಪಷ್ಟನೆ ನೀಡಿದ್ದ ಐಸಿಎಂಆರ್, ಕೆಂಪುಪಟ್ಟಿಯ ನಿಧಾನಗತಿಯನ್ನು (ಅಧಿಕಾರಿಗಳ ವಿಳಂಬ ಶೈಲಿ) ತೊಡೆದು ಹಾಕಲು ಹಾಗೆ ದಿನಾಂಕ ಘೋಷಿಸಲಾಗಿತ್ತು ಎಂದಿತ್ತು.

ಐಸಿಎಂಆರ್ ನ ಎಡವಟ್ಟಿನಿಂದಾಗಿ ಸ್ಥಾಯಿ ಸಮಿತಿ ಇಂದು ಈ ಸಭೆ ಕರೆದು ಅಧಿಕಾರಿಗಳು ಮತ್ತು ಸಂಶೋಧಕರ ಅಭಿಪ್ರಾಯ ಸಂಗ್ರಹಿಸಿತು.

ಜೈವಿಕ, ತಂತ್ರಜ್ಞಾನ, ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನೆ, ಸಿಎಸ್ಐಆರ್ ಇಲಾಖೆಗಳ ಅಧಿಕಾರಿಗಳು ಮತ್ತು ವಿಜ್ಞಾನಿಗಳ ಜೊತೆಗೆ ಸರ್ಕಾರಕ್ಕೆ ವೈಜ್ಞಾನಿಕ ಸಲಹೆಗಾರರಾಗಿರುವ ಕೆ. ವಿಜಯರಾಘವನ್ ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

You May Also Like

ಆಗಸ್ಟ್ 15ಕ್ಕೆ ದೇಶಕ್ಕೆ ಕೊರೋನಾ ಮೆಡಿಸಿನ್ ಸಿಗುತ್ತಾ?

ಕೊರೋನಾ ಲಸಿಕೆ ಉತ್ಪಾದನೆ ಹೇಗೆ? ದೆಹಲಿ: ಜುಲೈ 3 ಶುಕ್ರವಾರದಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್…

ರೂಪಾಂತರ ಕೊರೋನಾ ಹಿನ್ನೆಲೆ : ಭಾರತಕ್ಕೆ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ

ಕೋವಿಡ್-19 ನ ರೂಪಾಂತರಗಳು ಪ್ರಸಾರವಾದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಅಂತಾರಾಷ್ಟ್ರೀಯ ಆಗಮನಕ್ಕಾಗಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಸೋಮವಾರದಿಂದ ಮಾರ್ಗಸೂಚಿ ಜಾರಿಗೆ ಬರಲಿದೆ.

ತಮಿಳುನಾಡಿನಲ್ಲಿ ಕೊರೋನಾ ತಾಂಡವ: ಒಂದೇ ದಿನಕ್ಕೆ 161 ಪಾಸಿಟಿವ್

ತಮಿಳುನಾಡಿನಲ್ಲಿ ಮಹಾಮಾರಿ ಕೊರೊನಾ ವೈರಸ್ ತಾಂಡವಾಡುತ್ತಿದೆ. ಇಂದು ಒಂದೇ ದಿನ ಚೆನ್ನೈನಲ್ಲಿ 138 ಜನ ಸೇರಿದಂತೆ ತಮಿಳುನಾಡಿನಾದ್ಯಂತ ಒಟ್ಟು 161 ಪ್ರಕರಣಗಳು ಪತ್ತೆಯಾಗಿವೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,323ಕ್ಕೆ ಏರಿಕೆ ಕಂಡಿದೆ.

ತಾಯಿಯನ್ನು ಜೀವಂತವಾಗಿಯೇ ಹೂತಿದ್ದ ಪಾಪಿ ಮಗ!

ಪಾಪಿ ಮಗನೊಬ್ಬ ತನ್ನ 79 ವರ್ಷದ ತನ್ನ ತಾಯಿಯನ್ನು ಜೀವಂತವಾಗಿಯೇ ಸಮಾಧಿ ಮಾಡಿರುವ ಘಟನೆ ನಡೆದಿದೆ.