ನವದೆಹಲಿ : ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 63,371 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, 895 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ.

ಸೋಂಕಿತರ ಸಂಖ್ಯೆ 73,70,469ಕ್ಕೆ ಏರಿಕೆ ಕಂಡಿದೆ. ಸೋಂಕಿತರ ಪೈಕಿ 8,04,528 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ ದೇಶದಲ್ಲಿ 64,53,780 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ನಿನ್ನೆ ಒಂದೇ ದಿನ ದೇಶದಲ್ಲಿ ಸೋಂಕಿಗೆ 895 ಜನ ಬಲಿಯಾಗಿದ್ದು, ಈ ಮೂಲಕ ಇಲ್ಲಯವರೆಗೆ ಒಟ್ಟು 1,12,161 ಜನರು ಸಾವನ್ನಪ್ಪಿದ್ದಂತಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇಡೀ ಜಗತ್ತಿಗೆ ಹೊಲಿಕೆ ಮಾಡಿದರೆ, ದೇಶದಲ್ಲಿಯೇ ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆಯಲ್ಲಿ ಇಳಿಕೆ ಕಾಣುತ್ತಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 10,28,622 ಜನರನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿತ್ತು. ಈ ಮೂಲಕ ಇದೂವರೆಗೂ 9,22,54,927 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.

Leave a Reply

Your email address will not be published. Required fields are marked *

You May Also Like

ಡ್ರೈವಿಂಗ್ ಲಯಸನ್ಸ್ ಪಡೆಯಲು ಬದಲಾಗಲಿವೆ ನಿಯಮಗಳು

ಡ್ರೈವಿಂಗ್ ಟೆಸ್ಟ್ ಗೆ ಒಂದು ತಿಂಗಳ ಮೊದಲು ತೋರಿಸಲಾಗುವ ಈ ವೀಡಿಯೊ ಟ್ಯುಟೋರಿಯಲ್‌ನಲ್ಲಿ ಸುರಕ್ಷಿತ ಡ್ರೈವಿಂಗ್ ಮಾಹಿತಿಯನ್ನು ನಿಮಗೆ ತಿಳಿಸಲಾಗುತ್ತದೆ.

ರಾಜ್ಯದಲ್ಲಿ ಇನ್ನೂ ಎಷ್ಟು ತಿಂಗಳು ಇರಲಿದೆ ಅಪಾಯ!

ಬೆಂಗಳೂರು: ರಾಜ್ಯಕ್ಕೆ ಇನ್ನೂ ಮೂರು ತಿಂಗಳು ಮಹಾ ಆಪತ್ತು ಕಾದಿದೆ ಎಂಬ ಸ್ಫೋಟಕ ಸತ್ಯವೊಂದು ತಜ್ಞರಿಂದ…

ಕೊರೊನಾ ಕಾಟ: ರಾಜಸ್ಥಾನ ಗಡಿ ಬಂದ್!!

ಜೈಪುರ: ಮಹಾಮಾರಿಯ ಅಟ್ಟಹಾಸ ದೇಶದ ಹಲವು ರಾಜ್ಯಗಳಲ್ಲಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನದ ಗಡಿ ಬಂದ್…

ನುಗ್ಗೆಕಾಯಿ ಕದಿಯುವ ವೇಳೆ ಸಿಕ್ಕಿಬಿದ್ದ ಪೊಲೀಸರು

ಖದೀಮರನ್ನು ಹಿಡಿದು ಶಿಕ್ಷೆಗೆ ಗುರಿಯಾಗಿಸಿ ಸರಿ ದಾರಿಗೆ ತರಬೇಕಾದ ಕರ್ತವ್ಯ ಪೊಲೀಸರದ್ದು. ಆದರೆ, ಕೆಲ ಪೊಲೀಸರೇ ಕಳ್ಳತನಕ್ಕೆ ಇಳಿದಾಗ ಅದಕ್ಕಿಂತ ನಾಚಿಕಿಗೇಡಿನ ಸಂಗತಿ ಬೇರೊಂದಿಲ್ಲ.