ನವದೆಹಲಿ: ‘2021ರವರೆಗೂ ದೇಶದಲ್ಲಿ ಕೋವಿಡ್ ಲಸಿಕೆ ತಯಾರಿಸುವುದು ಅಸಾಧ್ಯ’ ಎಂದು ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ಸಂಸತ್ತಿನ ವಿಜ್ಞಾನ ಮತ್ತು ತಂತ್ರಜ್ಞಾನ ಸ್ಥಾಯಿ ಸಮಿತಿಯ ಎದುರು ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸಂಶೋಧಕರು ಈ ಅಭಿಪ್ರಾಯ ತಿಳಿಸಿದರು.

ಇದೇ ಅಗಸ್ಟ್ 15ರೊಳಗೆ ಕೋರೊನಾ ಲಸಿಕೆ ಸಿದ್ಧ ಎಂದು ಐಸಿಎಂಆರ್ ಘೋಷಿಸಿದಾಗ ವ್ಯಾಪಕ ಟೀಕೆ ಕೇಳಿ ಬಂದಿದ್ದವು. ಲಸಿಕೆ ಸಂಶೋಧನೆಯಲ್ಲಿ ಹುಡುಗಾಟದ ಮಾತು ಬೇಡ ಎಂದು ಹಲವಾರು ಸಂಶೋಧಕರು ಎಚ್ಚರಿಸಿದ್ದರು. ಅಗಸ್ಟ್ 15ರ ಪ್ರಧಾನಿಯವರ ಭಾಷಣಕ್ಕೆ ಮಹತ್ವ ತಂದು ಕೊಡಲು ಈ ಮೂರ್ಖತನದ ನಿರ್ಧಾರ ಮಾಡಲಾಗಿದೆ ಎಂದೂ ಟೀಕೆಗಳು ಕೇಳಿ ಬಂದಿದ್ದವು.

ನಂತರ ಸ್ಪಷ್ಟನೆ ನೀಡಿದ್ದ ಐಸಿಎಂಆರ್, ಕೆಂಪುಪಟ್ಟಿಯ ನಿಧಾನಗತಿಯನ್ನು (ಅಧಿಕಾರಿಗಳ ವಿಳಂಬ ಶೈಲಿ) ತೊಡೆದು ಹಾಕಲು ಹಾಗೆ ದಿನಾಂಕ ಘೋಷಿಸಲಾಗಿತ್ತು ಎಂದಿತ್ತು.

ಐಸಿಎಂಆರ್ ನ ಎಡವಟ್ಟಿನಿಂದಾಗಿ ಸ್ಥಾಯಿ ಸಮಿತಿ ಇಂದು ಈ ಸಭೆ ಕರೆದು ಅಧಿಕಾರಿಗಳು ಮತ್ತು ಸಂಶೋಧಕರ ಅಭಿಪ್ರಾಯ ಸಂಗ್ರಹಿಸಿತು.

ಜೈವಿಕ, ತಂತ್ರಜ್ಞಾನ, ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನೆ, ಸಿಎಸ್ಐಆರ್ ಇಲಾಖೆಗಳ ಅಧಿಕಾರಿಗಳು ಮತ್ತು ವಿಜ್ಞಾನಿಗಳ ಜೊತೆಗೆ ಸರ್ಕಾರಕ್ಕೆ ವೈಜ್ಞಾನಿಕ ಸಲಹೆಗಾರರಾಗಿರುವ ಕೆ. ವಿಜಯರಾಘವನ್ ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

You May Also Like

ದೇಶದಲ್ಲಿ 73 ಲಕ್ಷದ ಗಡಿ ದಾಟಿದ ಮಹಾಮಾರಿ!

ನವದೆಹಲಿ : ದೇಶದಲ್ಲಿ ಮಹಾಮಾರಿಯ ಅಟ್ಟಹಾಸ ಮುಂದುವರೆದಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 63,371 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, 895 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ.

ನಟಿಗೆ ಚಾಕುವಿನಿಂದ ಇರಿದ ಫೇಸ್ ಬುಕ್ ಗೆಳೆಯ!

ಮುಂಬಯಿ : ನಟಿ ಮಾಳವಿ ಮಲ್ಹೋತ್ರಾ ಅವರ ಮೇಲೆ ಚಾಕುವಿನಿಂದ ದಾಳಿ ಮಾಡಿರುವ ಘಟನೆ ನಡೆದಿದೆ.

ರೂಪಾಂತರ ಕೊರೋನಾ ಹಿನ್ನೆಲೆ : ಭಾರತಕ್ಕೆ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ

ಕೋವಿಡ್-19 ನ ರೂಪಾಂತರಗಳು ಪ್ರಸಾರವಾದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಅಂತಾರಾಷ್ಟ್ರೀಯ ಆಗಮನಕ್ಕಾಗಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಸೋಮವಾರದಿಂದ ಮಾರ್ಗಸೂಚಿ ಜಾರಿಗೆ ಬರಲಿದೆ.

ಕಟ್ಟಿ ಹಾಕಿದ್ದ ಕೇರಳಕ್ಕೆ ಸವಾಲು ಹಾಕಿದ ಮಹಾಮಾರಿ!

ಕೊಚ್ಚಿ : ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸೋಂಕು ಪತ್ತೆಯಾಗಿದ್ದ ಕೇರಳದಲ್ಲಿ ಕೆಲವು ದಿನಗಳಿಂದ ಮಹಾಮಾರಿ ಕಟ್ಟಿ ಹಾಕಲಾಗಿತ್ತು. ಆದರೆ, ಒಂದೇ ದಿನ ದಾಖಲೆಯ ಸೋಂಕಿತರು ಪತ್ತೆಯಾಗಿದ್ದಾರೆ.