ಬೆಂಗಳೂರು: ಇಂದು ಪಿಯುಸಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುತ್ತಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ ಕುಮಾರ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು ಜುಲೈ 20ರ ಸುಮಾರಿಗೆ ಪ್ರಕಟವಾಗಲಿದೆ ಎಂದಿದ್ದಾರೆ.

‘ಅನೇಕ ವಿದ್ಯಾರ್ಥಿಗಳು ನನಗೆ ಫೋನ್ ಮಾಡಿ, ಇಂದು ಪಿಯುಸಿ ದ್ವಿತೀಯ ವರ್ಷದ ಫಲಿತಾಂಶ ಪ್ರಕಟವಾಗುತ್ತದೆಯೇ ಎಂದು ಕೇಳುತ್ತಿದ್ದಾರೆ.

ಇಲ್ಲ, ಇಂದು ಪ್ರಕಟವಾಗುವುದಿಲ್ಲ. ಮೊದಲೇ ತಿಳಿಸಿದಂತೆ ಜುಲೈ 20ರ ಸುಮಾರಿಗೆ ಪ್ರಕಟವಾಗುತ್ತದೆ’ ಎಂದು ಸಚಿವರು ಟ್ವೀಟ್ ಮಾಡಿ ಸ್ಪಷ್ಟೀಕರಣ ನೀಡಿದ್ದಾರೆ.

ಇಂದು ಗುರುವಾರ ಪಿಯುಸಿ ಫಲಿತಾಂಶ ಪ್ರಕಟ ಎಂದು ಸಾಮಾಜಿಕ ಜಾಲತಾಣದಲ್ಲಿ ಫೇಕ್ ಸುದ್ದಿಯೊಂದು ಬುಧವಾರ ಹರಿದಾಡಿತ್ತು. ಸಂಶಯಗೊಂಡ ನೂರಾರು ವಿದ್ಯಾರ್ಥಿಗಳು ಸಚಿವ ಸುರೇಶಕುಮಾರ್ ಅವರಿಗೆ ಫೋನ್ ಮಾಡಿ, ಮೆಸೆಜ್ ಮಾಡಿ ಈ ಸುದ್ದಿ ನಿಜವಾ ಎಂದು ಕೇಳಿದ್ದರು.

1 comment
Leave a Reply

Your email address will not be published. Required fields are marked *

You May Also Like

ಮತಗಟ್ಟೆ ವಿಭಜನೆಯಲ್ಲಿ ಜಿಲ್ಲಾಡಳಿತ ವಿಫಲ: ಸಾಗದ ಸರದಿ ಸಾಲು

ಉತ್ತರಪ್ರಭ ಸುದ್ದಿ ಮುಂಡರಗಿ: ತಾಲೂಕಿನ ಮುರುಡಿತಾಂಡಾ ಮತಗಟ್ಟೆ ಸಂಖ್ಯೆ 265, ರೋಣ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು ಇಲ್ಲಿ…

ದೇವಸ್ಥಾನ ಆರಂಭದ ಬಗ್ಗೆ ಮುಜರಾಯಿ ಸಚಿವರು ಹೇಳಿದ್ದೇನು..?

ಉಡುಪಿ: ನಾಳೆ ಮುಜರಾಯಿ ದೇವಸ್ಥಾನಗಳು ಓಪನ್ ಆಗಲ್ಲ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಸೋಮವಾರದಿಂದ ದೇವಸ್ಥಾನ ತೆರೆಯಲು ನಿರ್ಧರಿಸಲಾಗಿತ್ತು. ನಮ್ಮ ಬೇಡಿಕೆಗೆ ಕೇಂದ್ರದ ಸಹಮತದ ನಿರೀಕ್ಷೆ ಇತ್ತು.

ಗದಗ-ಬೆಟಗೇರಿ ರೈಲ್ವೆ ಹೋರಾಟ ಸಮಿತಿಯಿಂದ ಮನವಿ

ನಗರದ ರೈಲು ನಿಲ್ದಾಣಕ್ಕೆ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ್‌ಕುಮಾರ್ ಸಿಂಗ್ ಶುಕ್ರವಾರ ಭೇಟಿ ನೀಡಿ, ನಿಲ್ದಾಣದ ಆವರಣದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.

ಅನ್ನ ನೀರಿಲ್ಲದೆ ನಿತ್ರಾಣನಾದ ಆ ವೃದ್ಧ ಮನೆ ತಲುಪಿದ್ದು ಹೇಗೆ?

ಲಾಕ್ ಡೌನ್ ಹಿನ್ನೆಲೆ ಅದೆಷ್ಟೋ ಜನ ಒಂದಲ್ಲ ಒಂದು ಕಾರಣಕ್ಕೆ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದಲ್ಲಿ ವೃದ್ಧನೊಬ್ಬ ಗೋಳಾಟ ಇದಕ್ಕೊಂದು ಉದಾಹರಣೆ.