ಕಾರವಾರ : ಮದುವೆಗೆ ಅಡ್ಡಿಯಾಗಲಿದೆ ಎಂಬ ಕಾರಣಕ್ಕೆ ಕೊರೊನಾ ಸೋಂಕು ಇರುವುದನ್ನು ಮುಚ್ಚಿಟ್ಟ ವ್ಯಕ್ತಿ ಸದ್ಯ ಇಹಲೋಕ ತ್ಯಜಿಸಿದ ಘಟನೆ ನಡೆದಿದೆ.

ಕೊರೊನಾ ಸೋಂಕು ಹರಡಿರುವುದನ್ನು ಮುಚ್ಚಿಟ್ಟ ಮದುಮಗ ಮದುವೆಯಾಗಿದ್ದ. ಆದರೆ, ಆತ ಮಮದುವೆಯಾಗಿದ್ದ ಮದುಮಗ ವಿವಾಹವಾದ ಐದೇ ದಿನಕ್ಕೆ ಸಾವನ್ನಪ್ಪಿದ್ದಾನೆ. ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ. ಇದರಿಂದಾಗಿ ನೆಂಟರು ಹಾಗೂ ಆತನ ಕುಟುಂಬಕ್ಕೂ ಕಂಟಕ ಶರುವಾಗಿದೆ.

ವೃದ್ಧರಿಬ್ಬರಿಂದ ಸದ್ಯ ಕುಟುಂಬದ 20 ಜನರಿಗೆ ಸೋಂಕು ತಗುಲಿದೆ. ಇದರಲ್ಲಿ ಒಂದು ವರ್ಷದ ಮಗುವು ಸೇರಿ 18 ವರ್ಷದ ಒಳಗಿನ 8 ಜನ ಅಪ್ರಾಪ್ತರಿಗೂ ಕಂಟಕ ಶುರುವಾಗಿದೆ. ಇದಲ್ಲದೇ ಈತನ ಮದುವೆಯಲ್ಲಿ ಭಾಗಿಯಾದ 70 ಜನ ಸಂಬಂಧಿಕರು ಕ್ವಾರಂಟೈನ್ ಆಗಿದ್ದಾರೆ.

ಕುಟುಂಬವು ಮದುವೆ ಕಾರಣದಿಂದ ಸೋಂಕಿರುವುದನ್ನು ಮುಚ್ಚಿಟ್ಟು ಹಲವು ಜನರಿಗೆ ಸೋಂಕು ತಗುಲುವಂತೆ ಮಾಡಿದೆ. ಇದಲ್ಲದೇ ಇವರ ಕುಟುಂಬದ ಇಬ್ಬರು ವೃದ್ಧರ ಸ್ಥಿತಿಯೂ ಗಂಭೀರವಾಗಿದೆ. ಈ ಎಲ್ಲಾ ಹಿನ್ನೆಲೆಯನ್ನನು ಅವಲೋಕಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ಅವರು ಯುವಕನ ಕುಟುಂಬಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ನಿಜಾಮುದ್ಧೀನ್ ಪ್ರಕರಣ – 34 ರಾಷ್ಟ್ರಗಳ 376 ಜನರ ಮೇಲೆ ಪ್ರಕರಣ!

ನವದೆಹಲಿ: ನಗರದ ನಿಜಾಮುದ್ಧೀನ್ ಮರ್ಕಜ್ ನಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡಿದ್ದ 34 ರಾಷ್ಟ್ರಗಳ 376 ವಿದೇಶಿ…

ಗುಜರಾತ್ ಬಿಜೆಪಿಗೆ ಶಾಕ್: ಕೈ ಶಾಸಕರು ರೆಸಾರ್ಟ್ ಗೆ ಶಿಫ್ಟ್..!

ಜೈಪುರ: ಗುಜರಾತ್ ಕಾಂಗ್ರೆಸ್ ನ ಕೆಲವು ಶಾಸಕರನ್ನು ಕಾಂಗ್ರೆಸ್ ರಾಜಸ್ಥಾನದ ಸಿರೋಹಿಯಲ್ಲಿರುವ ರೆಸಾರ್ಟ್ ಗೆ ಕರೆದೊಯ್ಯಲಾಗಿದೆ.…

ಪುಟಾಣಿಗಳ ಬಿಂದಾಸ್ ಸ್ಟೇಪ್ಸ್…ಬೊಂಬಾಟ್ ಪ್ರಫಾರ್ಮನ್ಸ್ ಗೆ ಜನ ಫಿದಾ…!

ವಿಶೇಷ ವರದಿ: ಗುಲಾಬಚಂದ ಆರ್. ಜಾಧವಆಲಮಟ್ಟಿ : ಪುಟ್ಟ ಪುಟ್ಟ ಪುಟಾಣಿ ಮಕ್ಕಳು ಫೂಲ್ ಜೋಶ್…