ಬೆಂಗಳೂರು: ಇಂದು ಪಿಯುಸಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುತ್ತಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ ಕುಮಾರ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು ಜುಲೈ 20ರ ಸುಮಾರಿಗೆ ಪ್ರಕಟವಾಗಲಿದೆ ಎಂದಿದ್ದಾರೆ.

‘ಅನೇಕ ವಿದ್ಯಾರ್ಥಿಗಳು ನನಗೆ ಫೋನ್ ಮಾಡಿ, ಇಂದು ಪಿಯುಸಿ ದ್ವಿತೀಯ ವರ್ಷದ ಫಲಿತಾಂಶ ಪ್ರಕಟವಾಗುತ್ತದೆಯೇ ಎಂದು ಕೇಳುತ್ತಿದ್ದಾರೆ.

ಇಲ್ಲ, ಇಂದು ಪ್ರಕಟವಾಗುವುದಿಲ್ಲ. ಮೊದಲೇ ತಿಳಿಸಿದಂತೆ ಜುಲೈ 20ರ ಸುಮಾರಿಗೆ ಪ್ರಕಟವಾಗುತ್ತದೆ’ ಎಂದು ಸಚಿವರು ಟ್ವೀಟ್ ಮಾಡಿ ಸ್ಪಷ್ಟೀಕರಣ ನೀಡಿದ್ದಾರೆ.

ಇಂದು ಗುರುವಾರ ಪಿಯುಸಿ ಫಲಿತಾಂಶ ಪ್ರಕಟ ಎಂದು ಸಾಮಾಜಿಕ ಜಾಲತಾಣದಲ್ಲಿ ಫೇಕ್ ಸುದ್ದಿಯೊಂದು ಬುಧವಾರ ಹರಿದಾಡಿತ್ತು. ಸಂಶಯಗೊಂಡ ನೂರಾರು ವಿದ್ಯಾರ್ಥಿಗಳು ಸಚಿವ ಸುರೇಶಕುಮಾರ್ ಅವರಿಗೆ ಫೋನ್ ಮಾಡಿ, ಮೆಸೆಜ್ ಮಾಡಿ ಈ ಸುದ್ದಿ ನಿಜವಾ ಎಂದು ಕೇಳಿದ್ದರು.

1 comment
Leave a Reply

Your email address will not be published. Required fields are marked *

You May Also Like

ಕಾರ್ಮಿಕರಿಗೆ ಆಹಾರ ಸಾಮಗ್ರಿ ವಿತರಣೆ

ಲಕ್ಷ್ಮೇಶ್ವರ: ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕರ…

ಗಣೇಶ ಸಂಭ್ರಮ- ಸಾಂಸ್ಕೃತಿಕ ಕಲರವ

ಉತ್ತರಪ್ರಭ ಸುದ್ದಿಆಲಮಟ್ಟಿ: ಇಲ್ಲಿನ ವಿವಿಧ ಬಡಾವಣೆಯಲ್ಲಿ ಗಣೇಶ ಉತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಹಲ ಗಜಾನನ ಯುವಕ…

ನಾಳೆ ಗದಗ ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಉತ್ತರಪ್ರಭ ಸುದ್ದಿಗದಗ: ಜಿಲ್ಲೆಯಲ್ಲಿ ಶುಕ್ರವಾರ ನಿರಂತರವಾಗಿ ಮಳೆಯಾಗುತ್ತಿದ್ದು, ಶನಿವಾರ ಸಹ ಮಳೆ ಮುಂದುವರಿಯುವದಾಗಿ ಹವಾಮಾನ ಇಲಾಖೆ…

ಈಗಿನಿಂದಲೇ ಹೊಸ ಗೆಟಪ್ ನಲ್ಲಿ ಬರಲು ತಯಾರಾಗುತ್ತಿದ್ದಾರೆ ಸುದೀಪ್!

ಲಾಕ್ ಡೌನ್ ಅವಧಿಯಲ್ಲಿ ಫ್ಯಾಂಟಮ್ ಕೆಲಸದಲ್ಲಿ ಸುದೀಪ್ ತೊಡಗಿಸಿಕೊಂಡಿದ್ದಾರೆ. ತಮ್ಮ ಮುಂದಿನ ಕಮರ್ಷಿಯಲ್ ಆಕ್ಷನ್ ಮೂವಿಗಾಗಿ ಹೊಸ ಗೆಟಪ್ ಪಡೆದಿದ್ದಾರೆ.