ಶ್ರೀನಗರ: ಬುಧವಾರ ರಾತ್ರಿ 9ಕ್ಕೆ ಜಮ್ಮು-ಕಾಶ್ಮೀರದ ಬಿಜೆಪಿ ನಾಯಕ ಶೇಖ್ ವಾಸೀಂ ಬಾರಿ, ಆತನ ತಂದೆ ಮತ್ತು ಸಹೋದರನನ್ನು ಉಗ್ರರು ಗುಂಡಿಕ್ಕಿ ಕೊಂದಿದ್ದಾರೆ.

ಹೊಸ ಕೇಂದ್ರಾಡಳಿತ ಪ್ರದೇಶದ ಬಂದಿಪೋರ್ ನಲ್ಲಿ ಘಟನೆ ನಡೆದಿದೆ. ರಾತ್ರಿ 9ರ ಸುಮಾರಿಗೆ ಸ್ಥಳೀಯ ಪೊಲೀಸ್ ಠಾಣೆಯ ಸಮೀಪದ ಅಂಗಡಿ ಎದುರು ಕುಳಿತಿದ್ದ ವಾಸೀಂ ಕುಟುಂಬದ ಸದಸ್ಯರ ಮೇಲೆ ಉಗ್ರರು ದಾಳಿ ನಡೆಸಿದರು.
ವಾಸೀಂ, ಅವರ ತಂದೆ ಬಶೀರ್ ಅಹ್ಮದ್, ಸಹೋದರ ಉಮರ್ ಬಶೀರ್ ತಲೆಗೆ ಗುಂಡಿಕ್ಕಿ ಪರಾರಿಯಾದರು. ತಕ್ಷಣ ಬಂದಿಪೋರ್ ಜಿಲ್ಲಾಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಿಸದೇ ಮೂವರೂ ನಿಧನರಾಗಿದ್ದಾರೆ.

ಇದನ್ನು ಭದ್ರತಾ ವೈಫಲ್ಯ ಎನ್ನಲಾಗಿದೆ. ‘ವಾಸೀಂ ಅವರಿಗೆ ಸರಕಾರ ಭದ್ರತೆ ನೀಡಿದ್ದು, ದಾಳಿ ವೇಳೆ ಎಲ್ಲ ಎಂಟೂ ಗಾರ್ಡ್ ಗಳು ಸ್ಥಳದಲ್ಲಿ ಇರಲಿಲ್ಲ. ಅವರನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಸುತ್ತಿದ್ದೇವೆ’ ಎಂದು ಐಜಿಪಿ ವಿನಯಕುಮಾರ್ ಹೇಳಿದ್ದಾರೆ.

‘ರಾತ್ರಿಯೇ ಪ್ರಧಾನಿ ಫೋನ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ’ ಎಂದು ಕೇಂದ್ರ ಮಂತ್ರಿ ಜಿತೇಂದ್ರ ಕುಮಾರ್ ಟ್ವೀಟ್ ಮಾಡಿದ್ದಾರೆ. ಜೆ.ಪಿ.ನಡ್ಡಾ, ರಾಮ್ ಮಾಧವ್, ಒಮರ್ ಅಬ್ದುಲ್ಲಾ ಸಂತಾಪ ಸೂಚಿಸಿ ಕೃತ್ಯವನ್ನು ಖಂಡಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ದೇಶದಲ್ಲಿ 2ನೇ ಬಾರಿಗೆ ಪತ್ತೆಯಾಯ್ತು ನಿಗೂಢ ಏಕಶಿಲೆ..!

ಜಗತ್ತಿನ ಹಲವೆಡೆ ಪತ್ತೆಯಾಗಿ ಬೆರಗು ಮೂಡಿಸಿದ್ದ ನಿಗೂಢ ಏಕಶಿಲೆ ಇದೀಗ ಭಾರತದಲ್ಲೂ ಎರಡನೇ ಬಾರಿಗೆ ಕಾಣಿಸಿಕೊಂಡಿದ್ದು, ಮುಂಬೈನ ಉಪನಗರ ಬಾಂದ್ರಾದ ಜಾಗ್ಗರ್ಸ್ ಪಾರ್ಕ್ನಲ್ಲಿ ನಿಗೂಢ ಏಕಶಿಲೆ ಪತ್ತೆಯಾಗಿರುವ ಬಗ್ಗೆ ಸ್ಥಳೀಯ ಕಾರ್ಪೋರೇಟರ್ ಆಸಿಫ್​ ಝಕೆರಿಯಾ ಇಂದು ಬೆಳಗ್ಗೆ ಟ್ವೀಟ್​ ಮಾಡಿ ತಿಳಿಸಿದ್ದಾರೆ.

ಜೈಲಿನಲ್ಲಿ ಇದ್ದುಕೊಂಡೇ ಅಪಹರಣಕ್ಕೆ ಸಂಚು!

ಪರಪ್ಪನ ಅಗ್ರಹಾರದಿಂದಲೇ ಕಿಡ್ನಾಪ್ಗೆ ಸಂಚು ರೂಪಿಸಿ, ತನ್ನ ಚೇಲಾಗಳ ಮೂಲಕ ಅದನ್ನು ಕಾರ್ಯರೂಪಕ್ಕೆ ತಂದಿದ್ದಾನೆ ಬೋಂಡ ಮಂಜ.

ರಾಜವೀರಮದಕರಿ ನಾಯಕ ಚಿತ್ರಿಕರಣಕ್ಕೆ ಸಿದ್ಧತೆ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಜ ವೀರಮದಕರಿ ನಾಯಕ ಸಿನಿಮಾ ಮತ್ತೆ ಆಗಸ್ಟ್ ನಲ್ಲಿ ಚಿತ್ರೀಕರಣ ಆರಂಭಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಕೊರೋನಾದಿಂದಾಗಿ ಸಿನಿಮಾ ಚಿತ್ರಿಕರಣ ಅರ್ಧಕ್ಕೇ ಸ್ಥಗಿತಗೊಂಡಿತ್ತು. ಆಗಸ್ಟ್ ಅಷ್ಟೊತ್ತಿಗೆ ಚಿತ್ರಿಕರಣಕ್ಕೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಿಂದ ಚಿತ್ರತಂಡ ಚಿತ್ರಿಕರಣದ ತಯಾರಿ ನಡೆಸಿದೆ. ಕೊರೊನಾ ಕಾರಣದಿಂದ ಹಲವು ಮುಂಜಾಗೃತ ಕ್ರಮಗಳ ಮೂಲಕ ಸರ್ಕಾರ‌ ಚಿತ್ರಿಕರಣಕ್ಕೆ ಅನುಮತಿ ನೀಡಿದರೆ ಚಿತ್ರಿಕರಣ ಆರಂಭಿಸುವ ತಯಾರಿಯಲ್ಲಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಇದ್ದಾರೆ.

ಟಿಕ್ ಟಾಕ್ ಬ್ಯಾನ್ ಗೆ ಆಗ್ರಹಿಸಿ ಮುಂಡರಗಿಯಲ್ಲಿ ಪ್ರತಿಭಟನೆ

ಚೀನಿ ಆಪ್ ಟಿಕ್ ಟಾಕ್ ನ್ನು ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿ ಮುಂಡರಗಿಯಲ್ಲಿಂದು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.