ಗದಗ: ಜಿಲ್ಲೆಯಲ್ಲಿಂದು 5 ಕೊರೊನಾ ಪಾಸಿಟಿವ್ ಪತ್ತೆಯಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 237 ಕ್ಕೆ ಏರಿಕೆಯಾಗಿದೆ. ಒಟ್ಟು 163 ಕೇಸ್ ಬಿಡುಗಡೆಯಾಗಿದ್ದು 70 ಸಕ್ರೀಯ ಪ್ರಕರಣಗಳಿದ್ದು, ಈವರೆಗೆ ನಾಲ್ವರು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಹೆಲ್ಥ್ ಬುಲೆಟಿನ್ ತಿಳಿಸಿದೆ.
ಕನಕಗಿರಿ ಕ್ಷೇತ್ರದ ಕುರುಬ ಸಮಾಜದ ಪ್ರಭಾವಿ ರಾಜಕಾರಣಿ ಮಾಜಿ ಸಚಿವ ನಾಗಪ್ಪ ಸಾಲೋಣಿಗೆ ತುಂಗಭದ್ರಾ ಕಾಡಾ ಅಧ್ಯಕ್ಷ ಸ್ಥಾನ ನೀಡಬೇಕೆಂದು ಇಲ್ಲಿನ ಕುರುಬ ಸಮಾಜದ ಯುವ ಮುಖಂಡ ಬೀರಪ್ಪ ವೆಂಕಟಾಪೂರ ಒತ್ತಾಯಿಸಿದ್ದಾರೆ.