ಬೆಂಗಳೂರು: ಕರ್ನಾಟಕವನ್ನು ಇಟಲಿ ಅಥವಾ ನ್ಯೂಯಾರ್ಕ್ ಮಾಡಬೇಡಿ. ರಾಜ್ಯದಲ್ಲಿ ಶಂಕಿತರು, ಸೋಂಕಿತರು ವಿಲವಿಲ ಒದ್ದಾಡುವಂತಾಗಿದೆ. ಉತ್ತಮ ಚಿಕಿತ್ಸೆ, ಆಂಬುಲೆನ್ಸ್, ಗೌರವಯುತ ಅಂತ್ಯಸಂಸ್ಕಾರಗಳು ಮಾನವ ಹಕ್ಕುಗಳು. ಜನರ ಅಪೇಕ್ಷೆ, ನಿರೀಕ್ಷೆಗಳನ್ನು ಗಮನದಲ್ಲಿರಿಸಿ ದೃಢ ಹೆಜ್ಜೆಗಳನ್ನಿಡಿ ಎಂದು ಗದಗ ಶಾಸಕ ಎಚ್.ಕೆ. ಪಾಟೀಲ್ ಮುಖ್ಯಮಂತ್ರಿಗೆ ಮಂಗಳವಾರ ಪತ್ರ ಬರೆದಿದ್ದಾರೆ.

ಕೊವಿಡ್-19 ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗುತ್ತಿರುವುದನ್ನು ಟೀಕಿಸಿರುವ ಅವರು, ಕೊವಿಡ್ ನಿಯಂತ್ರಣ ಮತ್ತು ಚಿಕಿತ್ಸೆಯ ನಿರ್ವಹಣೆ ಕುರಿತು ಹಲವು ಸಲಹೆ ನೀಡಿದ್ದಾರೆ.ಹಾಸಿಗೆ ಕೊರತೆ, ಅಂಬುಲೆನ್ಸ್ ಅಸಮರ್ಪಕ ಸೇವೆ ಮತ್ತು ಊಟದ ಅವ್ಯವಸ್ಥೆಗಳನ್ನು ಕೂಡಲೇ ಸರಿಪಡಿಸಲು ಅವರು ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ ಎಲ್ಲರಿಗೂ ಕೊವಿಡ್ ವಿಮೆ ಒದಗಿಸಬೇಕು, ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಇತರ ಸಿಬ್ಬಂದಿ ಕೊರತೆ ತುಂಬಲು ಕೊವಿಡ್ ತುರ್ತು ನೇಮಕಾತಿ ಮಾಡಬೇಕು ಎಂದಿರುವ ಅವರು, ಮಾದರಿಗಳ ಪರೀಕ್ಷೆಯ ಫಲಿತಾಂಶಗಳು ವಿಳಂಬವಾಗದಂತೆ ನಿಗಾ ವಹಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಈ ಕುರಿತು ಟ್ವೀಟ್ ಕೂಡ ಮಾಡಿರುವ ಅವರು ಇದನ್ನು ಜನರ ಗಮನಕ್ಕೂ ತಂದಿದ್ದಾರೆ.

Leave a Reply

Your email address will not be published.

You May Also Like

ನಟ ಜಗ್ಗೇಶ್ ವಿರುದ್ಧ ದೂರು ದಾಖಲಿಸಿದ ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥ ಸಂದೀಪ್

ಬೆಂಗಳೂರು: ಜಗ್ಗೇಶ್ ವಿರುದ್ಧ ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥ ಸಂದೀಪ್ ಅಣಬೇರು ಸೈಬರ್ ಕ್ರೈಂ ಕೇಂದ್ರದಲ್ಲಿ…

ಹಾವೇರಿ ಜಿಲ್ಲೆಯಲ್ಲಿ ಒಂದೇ ದಿನಕ್ಕೆ ಮಾರಾಟವಾದ ಸಾರಿ ಎಷ್ಟು ಗೊತ್ತಾ?

ಒಂದೇ ದಿನ ಹಾವೇರಿಯಲ್ಲಿ ಕೊಟ್ಯಾಂತರ ಮದ್ಯ ಬಿಕರಿಯಾಗಿದ್ದು ಇದರಿಂದ ನಿನ್ನೆ ಒಂದೇ ದಿನಕ್ಕೆ ಅಬಕಾರಿ ಇಲಾಖೆಗೆ ಕೋಟ್ಯಾಂತರ ಕಮಾಯಿಯಾಗಿದೆ.

ನಾಳೆ ಕೆರೆ ಹಸ್ತಾಂತರ ಸಮಾರಂಭ ( ಉದ್ಘಾಟನೆಗೆ ವೀರೇಂದ್ರ ಹೆಗ್ಗಡೆಯವರ ಆಗಮನ)

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್, ಸ್ಥಳೀಯ ಪಟ್ಟಣ ಪಂಚಾಯ್ತಿ ಹಾಗೂ ಬಾಲಲೀಲಾ ಮಹಾಂತ ಶಿವಯೋಗಿ ಕೆರೆ ಸಮಿತಿ ಸಹಭಾಗಿತ್ವದಲ್ಲಿ ನಮ್ಮೂರು ನಮ್ಮ

ರಾಷ್ಟ್ರಮಟ್ಟದ ಟಿಸಿಇ ನೆಕ್ಷಾಥಾನ್ ಕೊಡಿಂಗ್ ಸ್ಪರ್ಧೆ

ಗದಗ: ನಗರದ ತೋಂಟದಾರ್ಯ ಇಂಜಿನೀಯರಿಂಗ್ ಕಾಲೇಜಿನಲ್ಲಿ 3 ಮತ್ತು   4ನೇ ಡಿಸೆಂಬರ್ 2021 ರಂದು ರಾಷ್ಟ್ರಮಟ್ಟದ…