ಬೆಂಗಳೂರು: ಸಂದರ್ಭದ ಬಂಧಿಯಾಗಿ ಆಕೆ 3 ತಿಂಗಳು ಕಾಲ ತವರಲ್ಲೇ ಉಳಿಯಬೇಕಾಯಿತು. ಗಂಡ-ಮಗ ಬೆಂಗಳೂರಿನಲ್ಲಿ, ಆಕೆ ಚಂಡಿಗಢ್ ನಲ್ಲಿ. ಏನ್ ಜಗಳಾಡಿ ಹೋಗಿದ್ದರಾ? ಊಹೂಂ, ಸುಮ್ಮನೇ ವಾರದ ಮಟ್ಟಿಗೆ ಅಂತಾ ಹೋಗಿದ್ದರು.

ಯಾವ ಮುನ್ಸೂಚನೆ ನೀಡದೇ, ಜನರಿಗೆ ತಮ್ಮೂರಿಗೆ ತೆರಳುವ ಅವಕಾಶವನ್ನೂ ನೀಡದೇ ಏಕಾಏಕಿ ರಾತ್ರೋರಾತ್ರಿ ಲಾಕ್ ಡೌನ್ ಘೋಷಣೆಯಾದ ಪರಿಣಾಮ, ಯಾವ ಸಂಚಾರ ವ್ಯವಸ್ಥೆ ಇಲ್ಲದ ಕಾರಣ ಆಕೆಗೆ ತವರಿಂದ ಬೆಂಗಳೂರಿಗೆ ಬರಲಾಗಲಿಲ್ಲ.

ಅನ್-ಲಾಕ್ ನಂತರ ಸಂಚಾರ ಶುರುವಾದ ನಂತರ ಬೆಂಗಳೂರಿಗೆ ಬಂದರೆ ಪತಿರಾಯ ಬಾಗಲು ತೆಗೆಯುತ್ತಿಲ್ಲ. ಆಕೆಯ ಪಾಲಿಗೆ ಇದೊಂಥರಾ ಲಾಕ್ ಔಟ್! ನಗರದ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯಿದು.

ಮೂರು ತಿಂಗಳು ನಂತರ ಮಗನನ್ನು ನೋಡಲು ಬಂದ ಪತ್ನಿಯನ್ನು ಪತಿ ಮನೆಯ ಹೊರಗೆ ನಿಲ್ಲಿಸಿದ್ದಾನೆ. ಕೊನೆಗೆ ಮಹಿಳೆ ತಾನು 14 ದಿನ ಮನೆಯಲ್ಲಿ ನಿಮ್ಮಿಬ್ಬರಿಂದ ದೂರವಿದ್ದು ಕ್ವಾರಂಟೈನ್ ನಲ್ಲಿರುತ್ತೇನೆ, ಕೋವಿಡ್ ನೆಗೆಟಿವ್ ವರದಿ ಬಂದ ಬಳಿಕ ನಿಮ್ಮೊಂದಿಗೆ ಬೆರೆಯುತ್ತೇನೆ ಎಂದು ಕೇಳಿದರೂ ಪತಿ ಬಾಗಿಲು ತೆರೆದಿಲ್ಲ.

ಮಹಿಳೆ ವರ್ತೂರು ಠಾಣೆಯ ಪೊಲೀಸರನ್ನು ಸಂಪರ್ಕಿಸಿ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ. ಪೊಲೀಸರು ಫೋನ್ ಮಾಡಿದರೆ, ಪತಿ ರಿಸೀವ್ ಮಾಡಿಲ್ಲ. ಕೊನೆಗೆ ಪೊಲೀಸರು ಬರಬಹುದೆಂದು ತಿಳಿದು ಮನೆಗೆ ಬೀಗ ಹಾಕಿಕೊಂಡು ಎಸ್ಕೇಪ್ ಆಗಿದ್ದಾನೆ. ಪೊಲೀಸರು ಮಹಿಳೆಯನ್ನು ಆಕೆಯ ಸಂಬಂಧಿಕರ ಮನೆಯಲ್ಲಿರಿಸುವ ವ್ಯವಸ್ಥೆ ಮಾಡಿದ್ದಾರೆ.

ಲಾಕ್ ಡೌನ್ ಮತ್ತು ಕೊರೊನಾ ಈ ಎರಡೂ ಮಾಡಿದ ಎಡವಟ್ಟುಗಳು ಲಕ್ಷ ಲಕ್ಷ. ಈ ಪ್ರಕರಣದಲ್ಲಿ ಲಾಕ್ ಡೌನ್ ಮತ್ತು ಕೊರೋನಾ ತಾವು ಮಾತ್ರ ಜೋಡಿಯಾಗಿ, ಪತಿ-ಪತ್ನಿ ನಡುವೆ ಬಿರುಕು ಮೂಡಿಸಿವೆ.

Leave a Reply

Your email address will not be published. Required fields are marked *

You May Also Like

ಆಲಮಟ್ಟಿ ಶಾಲಾ-ಕಾಲೇಜು ಮಕ್ಕಳಿಗೆ ಉಚಿತ ನೋಟಬುಕ್ ವಿತರಣೆ

ಉತ್ತರಪ್ರಭ ರಾಜಕಾರಣಗೊಸ್ಕರ ಕೆಲಸ ಮಾಡುತ್ತಿಲ್ಲ- ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಗುಲಾಬಚಂದ ಜಾಧವಆಲಮಟ್ಟಿ: ಕೇವಲ ರಾಜಕಾರಣಗೋಸ್ಕರ ನಾವು…

ಎನ್ ಪಿಎಸ್ ರದ್ದುಗೊಳಿಸಲು ಆಗ್ರಹಿಸಿ ನಿಡಗುಂದಿಯಲ್ಲಿ ಬೈಕ್ ರ್ಯಾಲಿ

ಉತ್ತರಪ್ರಭ ಸುದ್ದಿ ನಿಡಗುಂದಿ: ಎನ್ ಪಿಎಸ್ ನೌಕರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬೆಂಗಳೂರಿನಿಂದ ಹೊರಟಿರುವ ಓಪಿಎಸ್…

ಪತ್ನಿ ಮತ್ತು ಮಗುವನ್ನು ಕೊಂದ ಪಾಪಿಗೆ ಜೀವಾವಧಿ ಶಿಕ್ಷೆ

ಉತ್ತರಪ್ರಭ ಸುದ್ದಿ ಗೋನಾಳ ಗ್ರಾಮದಲ್ಲಿ ಆರೋಪಿ ರಮೇಶ ದುಂಡಪ್ಪ ತೇಲಿ ಇವನು ಹೆಂಡತಿ ಮೇಲೆ ಸಂಶಯ…

ರಾಜ್ಯಕ್ಕೆ ಮಾದರಿಯಾದ ಜಿಲ್ಲಾ ಸಾಹಿತ್ಯ ಭವನ

ಜಿಲ್ಲೆಯಲ್ಲಿ ನಿರ್ಮಿಸಿರುವ ಕನ್ನಡ ಸಾಹಿತ್ಯ ಭವನವನ್ನು ರಾಜ್ಯದಲ್ಲಿಯೇ ಮಾದರಿ ಭವನವಾಗಿದೆ ಎಂದು ಕರ್ನಾಟಕ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಶರಣು ಗೋಗೇರಿ ಹೇಳಿದರು.