ಉತ್ತರಪ್ರಭ

ರಾಜಕಾರಣಗೊಸ್ಕರ ಕೆಲಸ ಮಾಡುತ್ತಿಲ್ಲ- ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಗುಲಾಬಚಂದ ಜಾಧವ
ಆಲಮಟ್ಟಿ:
ಕೇವಲ ರಾಜಕಾರಣಗೋಸ್ಕರ ನಾವು ಕೆಲಸ ಮಾಡುತ್ತಿಲ್ಲ. ಜನತೆಯ ಸಂಕಷ್ಟಗಳಿಗೆ ಸ್ಪಂದಿಸಿ ಕೈಲಾದ ಮಟ್ಟಿಗೆ ನೆರವು ನೀಡುವ ನಿಟ್ಟಿನಲ್ಲಿ ಕಾಯಕ ಗೈಯುತ್ತಿರುವೆ. ಸುಶಿಕ್ಷಿತ, ಸುಭದ್ರ ದೇಶ ಕಟ್ಟುವುದಕ್ಕೆ ಅಳಿಲು ಸೇವೆ ಸಲ್ಲಿಸುತ್ತಿರುವೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ, ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.


ಸ್ಥಳೀಯ ಎಸ್.ವ್ಹಿ.ವ್ಹಿ.ಸಂಸ್ಥೆಯಡಿಯಲ್ಲಿ ಎಲ್.ಕೆ.ಜಿ ಯಿಂದ ಪದವಿವರೆಗೆ ನಡೆಯುತ್ತಿರುವ ಶಾಲಾ, ಕಾಲೇಜಿನ ಸುಮಾರು 1200 ಕ್ಕೂ ಅಧಿಕ ಮಕ್ಕಳಿಗೆ ಡಾ.ಫ.ಗು.ಹಳಕಟ್ಟಿ ಜನ್ಮದಿನಾಚರಣೆ ಅಂಗವಾಗಿ ಸಾವಿರಾರು ಸಂಖ್ಯೆಯಲ್ಲಿ ಉಚಿತ ನೋಟಬುಕ್ ವಿತರಿಸಿ ಅವರು ಮಾತನಾಡಿದರು.
ನಾಡಿನ ಸಂಸ್ಕೃತಿ ನಮ್ಮ ಶಿಕ್ಷಣದಲ್ಲಿ ಅಡಗಿದೆ. ಆ ಕಾರಣ ಶಿಕ್ಷಣದ ಪರಿಕಲ್ಪನೆ ನಮ್ಮಲ್ಲಿ ಉಚ್ಚಾಯ ಮಟ್ಟದಲ್ಲಿ ಹೊಳೆಯಬೇಕು. ಶಿಕ್ಷಣ ಹಾಗು ಸಂಸ್ಕಾರ ಇಂದಿನ ಅವಶ್ಯಕತೆವಾಗಿದ್ದು ಇವೆರಡು ಮೌಲ್ಯಭರಿತ ಗುಣಗಳನ್ನು ಶಿಕ್ಷಕರು ಮಕ್ಕಳ ಮನದಲ್ಲಿ ಬೆಳೆಸಬೇಕು ಎಂದರು.
ಸಮಾಜಕ್ಕೆ ಪ್ರಯೋಜನವಾಗುವ ಕೆಲಸದಲ್ಲಿ ತಲ್ಲಿನರಾದರೆ ಮನಸ್ಸಿಗೆ ಸಂತೃಪ್ತಿ, ನೆಮ್ಮದಿ ಸಿಗುವುದು. ಇನ್ನೊಬ್ಬರನ್ನು ಪ್ರೀತಿಸುವ ಭಾವ ನಿರ್ಮಲವಾಗಿ ಮೂಡಬೇಕು. ಉತ್ತಮ ಸಂಸ್ಕಾರದ ಬದುಕು ಎಲ್ಲರದ್ದಾಗಬೇಕು ಎಂದರು.
ಪ್ರತಿಭಾವಂತ ಬಡ, ನಿರ್ಗತಿಕ ಮಕ್ಕಳ ಶಿಕ್ಷಣಕ್ಕಾಗಿ ಸದಾ ಸಹಾಯಹಸ್ತ ಚಾಚಿ ನೆರವಾಗುತ್ತಲ್ಲಿದ್ದೆನೆ. ಖುದ್ದಾಗಿ ಅಂಥ ಮಕ್ಕಳ ಸ್ಥಿತಿಗತಿ ಅರಿತು ಶಿಕ್ಷಣಕ್ಕಾಗಿ ಆಥಿ೯ಕ ಸಹಾಯ ಒದಗಿಸುತ್ತಲ್ಲಿರುವೆ. ಇಂಥ ಸೇವೆಯಲ್ಲಿ ತೃಪ್ತಿಕರವಾಗಿರುವೆ. ಬಡಮಕ್ಕಳ ಓದಿಗೆ ಅವರ ಕಷ್ಟಗಳಿಗೆ ಬೆನ್ನೆಲುಬಾಗಿ ನಿಲ್ಲುವೆ ಎಂದು ಶಾಸಕ ನಡಹಳ್ಳಿ ನುಡಿದರು.
ಅತಿಥಿಗಳಾಗಿ ಆಗಮಿಸಿದ್ದ ಶಾಸಕರ ಪುತ್ರ ಯುವ ನಾಯಕ ಭರತಗೌಡ ಪಾಟೀಲ ತಮ್ಮ ತೇಜಸ್ವಿ ಭಾವಭಂಗಿಯ ಉತ್ಕಟ ವಿಚಾರಧಾರೆಯ ಮಾತುಗಳಿಂದ ಯುವ ಮನಗಳ ಗಮನ ಸೆಳೆದರು.
ಜಾತಿ, ಮತ, ಪಂಥ, ಧರ್ಮ ಎಂಬ ಭೇದ ಭಾವ ವಿಲ್ಲದೇ ಸರ್ವರನ್ನು ಅಪ್ಪಿಕೊಂಡು ಬಡವರ ತೊಂದರೆಗಳಿಗೆ ತಮ್ಮ ತಂದೆಯವರು ಸ್ಪಂದಿಸುತ್ತಾ ಸಮಾಜಮುಖಿ ಪರ ವಿಭಿನ್ನ ಕೆಲಸ ಕಾರ್ಯಗಳನ್ನು ಕಳೆದೆರಡು ದಶಕಗಳಿಂದ ನಿರಂತರ ಸಾಗಿಸಿಕೊಂಡು ಬರುತ್ತಿದ್ದಾರೆ. ಬಡತನದ ಬೇಗೆಯಲ್ಲಿ ನೊಂದ ಮಕ್ಕಳಿಗೆ ಧೈರ್ಯ ತುಂಬಿದ್ದಾರೆ. ಬಸ್ ಪಾಸ್, ನೋಟ ಬುಕ್, ಟೆಸ್ಟ್ ಬುಕ್ ಉಚಿತ ವಿತರಣೆಯಂಥ ಮಾನವೀಯ ಕಾರ್ಯ ಕಳೆದ 20 ವರ್ಷದಿಂದ ನಡೆಯಿಸಿಕೊಂಡು ಸಾಗಿದ್ದಾರೆ.‌ ಕಳೆದ ವರ್ಷ 5 ಲಕ್ಷಕ್ಕೂ ಹೆಚ್ಚು ಉಚಿತ ನೋಟಬುಕ್ ವಿತರಣೆ ಮಾಡಿದ್ದು ವಿಶೇಷ. ಅಲ್ಲಲ್ಲಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಶಾಲಾ, ಕಾಲೇಜು ಪ್ರವೇಶ ಫೀ ಲಕ್ಷಾಂತರ ಹಣ ಭರಿಸಿದ್ದಾರಲ್ಲದೇ ಸಾಮೂಹಿಕ ವಿವಾಹಗಳನ್ನು ನೆರವೇರಿಸಿ ತಮ್ಮೆಲ್ಲರ ಪ್ರೀತಿ ಸಂಪಾದಿಸಿದ್ದಾರೆ. ವಿದ್ಯಾರ್ಥಿಗಳು ಉತ್ತಮವಾಗಿ ಓದಿ ಬರೆದು ಮುಂದೊಂದು ದಿನ ಅಧಿಕಾರಿಗಳಾಗಿ ಮಿಂಚಿ. ಆಥಿ೯ಕಾಗಿ ಸಬಲರಾಗಿ ತಾವು ಕೂಡಾ ಬಡಬಗ್ಗರ ಸಹಾಯಕ್ಕೆ ತಮ್ಮಂತೆ ನಿಲ್ಲಿ. ನೆರವಿನ ಹಸ್ತ ಕಳಕಳಿಂದ ಚಾಚಿದರೆ ಸಾಕು. ನಮ್ಮ ಸೇವೆ ಸಾರ್ಥಕತೆವಾದಂತೆ ಎಂದರು.
ಸಾಮರಸ್ಯದ ಬದುಕು ಸಮಾಜದಲ್ಲಿ ನಿಮಾ೯ಣವಾಗಬೇಕು ಎಂದು ಭರತಗೌಡ ಪಾಟೀಲ ಆಶಿಸಿದರು.
ನಾಲತವಾಡ ಎಸ್.ವ್ಹಿ.ಪಿಯು ಕಾಲೇಜಿನ ಉಪ ಪ್ರಾಚಾರ್ಯ ಸಿ.ಆಯ್.ಕುಪ್ಪಸ ಹಡೇ೯ಕರ ಸ್ಮಾರಕ ಭವನ ಕಾರ್ಯದರ್ಶಿ ವಿ.ಎಂ.ಪಟ್ಟಣಶೆಟ್ಟಿ, ಗ್ರಾಪಂ ಅಧ್ಯಕ್ಷ ಮಂಜುನಾಥ್ ಹಿರೇಮಠ, ಪ್ರಾಂಶುಪಾಲ ಎಚ್.ಎನ್.ಕೆಲೂರ, ಎಸ್. ಆಯ್. ಗಿಡ್ಡಪ್ಪಗೋಳ, ಬಸಯ್ಯ ಶಿವಯೋಗಿಮಠ, ತನುಜಾ ಪೂಜಾರಿ, ಕಮಲಾಕ್ಷಿ ಹಿರೇಮಠ ವೇದಿಕೆಯಲ್ಲಿದ್ದರು. ಪ್ರಾಚಾರ್ಯ ಪ್ರಭುಸ್ವಾಮಿ ಹೇಮಗಿರಿಮಠ ಸ್ವಾಗತಿಸಿದರು. ಪ್ರಕಾಶ ಧನಶೆಟ್ಟಿ ಪ್ರಾಸ್ತಾವಿಕ ನುಡಿದರು. ಎನ್.ಎಸ್.ಬಿರಾದಾರ ನಿರೂಪಿಸಿದರು. ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ ವಂದಿಸಿದರು.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯ 3 ತಾಲೂಕು ಸೇರಿ ರಾಜ್ಯದ 43 ಅತಿವೃಷ್ಠಿ, ಪ್ರವಾಹ ಪೀಡಿತ ತಾಲೂಕುಗಳ ಘೋಷಣೆ

2020ನೇ ಸಾಲಿನ ಮುಂಗಾರು ಋತುವಿನ ಸೆಪ್ಟೆಂಬರ್ ತಿಂಗಳಿನಲ್ಲಿ ಬಿದ್ದಿರುವ ಭಾರಿ ಮಳೆಯಿಂದ ಉಂಟಾಗಿರುವ ಅತಿವೃಷ್ಠಿ, ಪ್ರವಾಹದಿಂದ ಅಪಾರ ಪ್ರಮಾಣದಲ್ಲಿ ಮನೆ ಹಾನಿ, ಬೆಳೆಹಾನಿ ಹಾಗೂ ಮೂಲಭೂತ ಸೌಕರ್ಯಗಳು ಹಾನಿಯಾಗಿರುವ ಹಿನ್ನಲೆಯಲ್ಲಿ

ಯೋಧನ ಸಮಯ ಪ್ರಜ್ಞೆಯಿಂದ ಕರುಳು ಬಳ್ಳಿ ಸೇರಿದ ಅಜ್ಜಿ..!

ಅರ್ಥವಾಗದ ಊರು, ತಿಳಿದ ಭಾಷೆಯ ಮದ್ಯೆ ಏಕಾಂಗಿಯಾದ ಅಜ್ಜಿ ತನ್ನವರಿಗಾಗಿ ಅಳುತ್ತಿದ್ದಳು. ಅಜ್ಜಿಯ ಆರ್ಥನಾದ ಅಲ್ಲಿರುವ ಯಾರ ಗಮನಕ್ಕೂ ಬರಲೇ ಇಲ್ಲ. ಕಣ್ಣೀರಿಡುತ್ತಿದ್ದ ಇಳಕಲ್ ಸೀರೆಯುಟ್ಟ ಹಿರಿಯ ಜೀವ ಕರುನಾಡಿನವಳುವೆಂದರಿತಯೋಧ ಅಜ್ಜಿಯ ಆರ್ಥನಾದಕ್ಕೆ ಧ್ವನಿಯಾಗಿದ್ದಾರೆ. ತನ್ನವರನ್ನು ಕಳೆದುಕೊಂಡ ಅಜ್ಜಿಗೆ ತನ್ನ ಬಂಧು ಬಳಗದೊಂದಿಗೆ ತಳುಕು ಹಾಕುವ ಮೂಲಕ ಜಿಲ್ಲೆಯ ಮುಂಡರಗಿ ಸೈನಿಕ ಜನರ ಮೆಚ್ಚುಗೆಯ ಜೊತೆಗೆ ಸೈ ಎನಿಸಿಕೊಂಡಿದ್ದಾರೆ.

ಪರಿಶಿಷ್ಟರ ಪಟ್ಟಿಗೆ ಸೇರಿದ ಪರಿವಾರ, ತಳವಾರ ಸಿದ್ದಿ ಸಮುದಾಯ: ಸರ್ಕಾರದಿಂದ ಗೆಜೆಟ್ ಆದೇಶ

ಬೆಂಗಳೂರು: ಪರಿವಾರ, ತಳವಾರ ಸಿದ್ದಿ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ರಾಜ್ಯ ಸರ್ಕಾರ ಗೆಜೆಟ್ ಆದೇಶ…