ಗದಗ: ದಕ್ಷಿಣ ಕೋರಿಯಾದಲ್ಲಿ ಒಂದು ಹಂತದಲ್ಲಿ ದಿಢೀರನೆ ಸೋಂಕಿತರ ಸಂಖ್ಯೆ ಹೆಚ್ಚಿ ದೇಶವೇ ಆತಂಕಕ್ಕೆ ಈಡಾಗಲು ಕಾರಣವಾದದ್ದು ಒಬ್ಬ ಸುಪರ್-ಸ್ಪ್ರೆಡರ್! ಪೇಷಂಟ್-31 ಕಾರಣದಿಂದ ಒಂದೇ ದಿನಕ್ಕೆ ದೇಶದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿತ್ತು. ಹೀಗಾಗಿ ಒಬ್ಬ ಸುಪರ್-ಸ್ಪ್ರೆಡರ್ ಒಂದು ದೇಶ, ಒಂದು ರಾಜ್ಯ ಅಥವಾ ಕನಿಷ್ಠ ಒಂದು ಜಿಲ್ಲೆಯನ್ನಾದರೂ ಸೋಂಕಿನ ಆತಂಕಕ್ಕೆ ದೂಡಬಲ್ಲ.

ಟೈಫಾಯ್ಡ್ ಮೇರಿ

ಮಹಿಳೆ ಮೇರಿ ಮ್ಯಾಲನ್ (1869-1938) ‘ಟೈಫಾಯ್ಡ್ ಮೇರಿ’ ಎಂದೇ ಇತಿಹಾಸದಲ್ಲಿ ದಾಖಲಾಗಿದ್ದಾಳೆ. ವೃತ್ತಿಯಲ್ಲಿ ಕುಕ್ ಆಗಿದ್ದ ಈಕೆ ತನಗೇ ಗೊತ್ತಿಲ್ಲದಂತೆ ನೂರಾರು ಜನರಿಗೆ ಟೈಫಾಯ್ಡ್ ಹಬ್ಬಿಸಿದ್ದಳು. ಆಕೆಗೆ ಟೈಫಾಯ್ಡ್ ಲಕ್ಷಣ ಇರಲಿಲ್ಲ. ಶಿಕ್ಷೆ ಆಗಬಹದು ಎಂಬ ಕಾರಣಕ್ಕೆ ಆಕೆ ದಶಕ ಕಾಲ ತಲೆಮರೆಸಿಕೊಂಡು ಓಡಾಡಿದ್ದಳು. ಸಿಕ್ಕ ನಂತರ ಆಕೆಯನ್ನು ಸಾಯುವವರೆಗೆ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಅಮೆರಿಕದಲ್ಲಿ ಟೈಫಾಯ್ಡ್ ಬ್ಯಾಕ್ಟಿರೀಯಾ ಹೊಂದಿದ, ಆದರೆ ಲಕ್ಷಣಗಳಿರದ ಮೊದಲ ವ್ಯಕ್ತಿ ಎಂದು ಆಕೆಯನ್ನು ಗುರುತಿಸಲಾಗಿದೆ.

ಮೇರಿ ಮ್ಯಾಲನ್

ಕೇರಳ ಗ್ರಾಮದ ಸುಪರ್-ಸ್ಪ್ರೆಡರ್ಸ್
ಕೇರಳದ ಕರಾವಳಿಯ ಒಂದು ಗ್ರಾಮದಲ್ಲಿ ಜು.09ರ ವರೆಗೆ ಸಾಕಷ್ಟು ಪೊಲೀಸರ ಜೊತೆಗೆ 25 ಕಮಾಂಡೋಗಳನ್ನು ಡ್ಯೂಟಿಗೆ ಹಾಕಲಾಗಿದೆ. ಹಲವಾರು ಅಂಬುಲೆನ್ಸ್ ಗಳನ್ನು ನಿಲ್ಲಿಸಲಾಗಿದೆ. ಅಲ್ಲಿ ಈಗ ಖಾಲಿ-ಪೀಲಿ ತಿರುಗುವವರನ್ನು ಸೀದಾ ಅಂಬಲೆನ್ಸ್ ಗೆ ಹಾಕಿ ಆಸ್ಪತ್ರೆಗೆ ಸೇರಿಸಿ ಕ್ವಾರಂಟೈನ್ ಗೆ ಒಳಪಡಿಸಲು ನಿರ್ಧರಿಸಲಾಗಿದೆ. ಆ ಗ್ರಾಮದಲ್ಲಿ ಹಲವು ‘ಸುಪರ್ ಸ್ಪ್ರೆಡರ್’ಗಳು ಪತ್ತೆಯಾದ ನಂತರ ಈ ಕಠಿಣ ಕ್ರಮಕ್ಕೆ ಕೇರಳ ಸರ್ಕಾರ ಮುಂದಾಗಿದೆ.

ಯಾರನ್ನು ಸುಪರ್-ಸ್ಪ್ರೆಡರ್ ಎನ್ನುತ್ತಾರೆ? ಇವರಿಂದ ಏನು ಅಪಾಯ? ಇವರಿಗೆ ಆ ತರಹದ ಸುಪರ್ ಶಕ್ತಿ ಇರುತ್ತದಾ? ಸುಪರ್-ಸ್ಪ್ರೆಡರ್ ವ್ಯಾಖ್ಯಾನ, ಸುಪರ್-ಸ್ಪ್ರೆಡರ್ ಎಂಬ ಪದ ಸಾಂಕ್ರಾಮಿಕ ರೋಗಗಳಿಗೆ ಸಂಬಂಧಿಸಿದೆ. ಒಬ್ಬ ಸೋಂಕಿತ ವ್ಯಕ್ತಿಯಿಂದ ಹಲವಾರು ಜನರಿಗೆ ಸೋಂಕು ತಗುಲಿದರೆ ಅಥವಾ ತಗುಲುವ ದಟ್ಟ ಸಾಧ್ಯತೆ ಇದ್ದರೆ ಅಂತಹವರನ್ನು ಸುಪರ್-ಸ್ಪ್ರೆಡರ್ ಎನ್ನುತ್ತಾರೆ. ಇದಕ್ಕೆ ನಿರ್ದಿಷ್ಠ ಸಂಖ್ಯೆಯ ವ್ಯಾಖ್ಯಾನ ಇಲ್ಲವಾದರೂ, ಪ್ರಾಥಮಿಕ ಸಂಪರ್ಕದಿಂದ ಆರಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿಸುವ ಪಾಸಿಟಿವ್ ವ್ಯಕ್ತಿಯನ್ನು ಸುಪರ್-ಸ್ಪ್ರೆಡರ್ ಎನ್ನಲಾಗುತ್ತದೆ.

ಇಂತಹ ವ್ಯಕ್ತಿಗೆ ಅಂತಹ ಸುಪರ್ ಪವರ್ ದಕ್ಕಿರುತ್ತದಾ ಎಂಬ ಪ್ರಶ್ನೆಗೆ ನೇರ, ಸರಳ ಉತ್ತರವಿಲ್ಲ. ಹೊರಗಡೆ ಸೋಂಕಿನ ಲಕ್ಷಣಗಳಿರದ ಸೋಂಕಿತ ವ್ಯಕ್ತಿ, ತನಗೆ ಸೋಂಕು ತಗುಲಿದೆ ಎಂಬ ಅರಿವಿಲ್ಲದೇ ಸಾಕಷ್ಟು ಜನರೊಂದಿಗೆ ಒಡನಾಡುವ ಮೂಲಕ ಅವರಲ್ಲಿ ಅನೇಕರಿಗೆ ಸೋಂಕು ತಗುಲಿಸಿಬಹುದು. ಇಂತಹ ಸೋಂಕಿತನನ್ನು ಸುಪರ್-ಸ್ಪ್ರೆಡರ್ ಎನ್ನುತ್ತಾರೆ. ಇನ್ನು ಕೆಲವರು ಲಕ್ಷಣಗಳಿದ್ದರೂ, ಸೋಂಕು ತಗುಲಿರಬಹುದು ಎಂಬ ಅನುಮಾನವಿದ್ದರೂ ಪರೀಕ್ಷೆಗೊಳಪಡದೇ ಹುಂಬತನದಿಂದ ಎಲ್ಲರೊಂದಿಗೆ ಬೆರೆಯುವ ಮನುಷ್ಯನೂ ಸುಪರ್-ಸ್ಪ್ರೆಡರ್ ಆಗಬಲ್ಲ. ಇನ್ನು ಕೆಲವರಲ್ಲಿ ಸಾಕಷ್ಟು ಸಂಖ್ಯೆಯ ವೈರಸ್ ಗಳಿದ್ದರೆ ಅವರು ಕೂ ಸುಪರ್-ಸ್ಪ್ರೆಡರ್ ಆಗಬಲ್ಲರು.

ಭಾರತದ ಹಲವು ಸುಪರ್-ಸ್ಪ್ರೆಡರ್ಸ್
ಭಾರತದಲ್ಲಿ ಕೊರೋನಾ ಸಂದರ್ಭದಲ್ಲಿ ಹಲವಾರು ಸುಪರ್-ಸ್ಪ್ರೆಡರ್ ಗಳನ್ನು ಗುರುತಿಸಲಾಗಿದೆ.
ಮುಂಬೈನ ಪ್ರಭಾದೇವಿ ಏರಿಯಾದಲ್ಲಿರುವ ಕಾರ್ಪೋರೇಟ್ ಕಚೇರಿಯೊಂದಕ್ಕೆ ಊಟ ಒದಗಿಸುತ್ತಿದ್ದ 65 ವರ್ಷದ ಮಹಿಳೆಯ ಕಾರಣದಿಂದ ಆಕೆಯ ಇಡೀ ಕುಟುಂಬ ಮತ್ತು ಆಕೆಯಿಂದ ಊಟ ಪಡೆಯುತ್ತಿದ್ದವರನ್ನೆಲ್ಲ ಐಸೋಲೇಷನ್ ಗೆ ಒಳಪಡಿಸಬೇಕಾಗಿತು.

ಪೂರ್ವ ದೆಹಲಿಯಲ್ಲಿ ಸೌದಿ ಅರೇಬಿಯಾದ ಪಾಸಿಟಿವ್ ವ್ಯಕ್ತಿಯನ್ನು ಪರೀಕ್ಷಿಸಿದ್ದ ಮೊಹಲ್ಲಾ ಕ್ಲಿನಿಕ್ ವೈದ್ಯನಿಗೆ ಪಾಸಿಟಿವ್ ದೃಢಪಟ್ಟ ನಂತರ 900ಕ್ಕೂ ಅಧಿಕ ಪ್ರಾಥಮಿಕ ಮತ್ತು ದ್ವಿತೀಯ ಸಂರ್ಕಿತರನ್ನು ಏಸೋಲೇಷನ್ ಗೆ ಒಳಪಡಿಸಲಾಯಿತು.

ರಾಜಸ್ತಾನದ ಬಿಲ್ವಾರ್ನಲ್ಲಿ ವೈದ್ಯರೊಬ್ಬರು ಸೌದಿ ಅರೇಬಿಯಾದಿಂದ ಬಂದ ಸಂಬಂಧಿಕರನ್ನು ಮನೆಯಲ್ಲಿ ಇಟ್ಟುಕೊಂಡ ಪರಿಣಾಮ ವೈದ್ಯನಿಗೆ ಸೋಂಕು ತಗುಲಿತ್ತು. ಲಕ್ಷಣ ಇರಲಿಲ್ಲವಾದ್ದರಿಂದ ವೈದ್ಯ ಪರೀಕ್ಷೆ ಮಾಡಿಸಿಕೊಳ್ಳದೇ ಆಸ್ಪತ್ರೆಗೆ ತೆರಳಿದ್ದರಿಂದ ಅಲ್ಲಿನ 16 ವೈದ್ಯರಿಗೆ ಪಾಸಿಟಿವ್ ಕಾಣಿಸಿತ್ತು. ವೈದ್ಯನ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದ ಕಾರಣದಿಂದ 1,600 ಜನರನ್ನು ಐಸೋಲೇಷನ್ ಗೆ ಒಳಪಡಿಸಲಾಯಿತು. ಮೇಲೆ ಉಲ್ಲೇಖಿಸಿದ ಕೋರಿಯಾ ಮಹಿಳೆಯಿಂದ 2 ಸಾವಿರಕ್ಕೂ ಹೆಚ್ಚು ಜನರು ಐಸೊಲೇಷನ್ ಗೆ ಒಳಗಾದರು.

ಗದಗ ಜಿಲ್ಲೆಯ ಸುಪರ್-ಸ್ಪ್ರೆಡರ್
ಜಿಲ್ಲೆಯ ಮಟ್ಟಿಗೆ ಬಂದರೆ ಮುಖ್ಯವಾಗಿ ನಾಲ್ವರು ಸುಪರ್-ಸ್ಪ್ರೆಡರ್ ಕಂಡುಬಂದಿದ್ದಾರೆ. ಹರ್ತಿಯ ಆರ್.ಎಂ.ಪಿ. ವೈದ್ಯ , ಮುಂಡರಗಿ ಏತ ನೀರಾವರಿ ಇಲಾಖೆಯ ನೌಕರ ಮತ್ತು ನವಲಗುಂದ ತಾಲೂಕಿನ ಮೊರಬ ಗ್ರಾಮದ ದಂಪತಿ.

ಪಾಸಿಟಿವ್ ಬಂದಿರುವುದು ಗೊತ್ತಿಲ್ಲದ ಆರ್.ಎಂ.ಪಿ ವೈದ್ಯ ಹರ್ತಿ, ಬೆಳದಡಿ, ಕಣವಿ, ಹೊಸೂರುಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಾಮಾನ್ಯ ಕಾಯಿಲೆಯ ಜನರನ್ನು ಪರೀಕ್ಷಿಸಿದ್ದ. ಆರಂಭದಲ್ಲೆ ಪ್ರಾಥಮಿಕ ಸಂಪರ್ಕಿತರೆಂದು 97 ಜನರನ್ನು ಕ್ವಾರಂಟೈನ್ ಮಾಡಲಾಗಿತ್ತು. ದ್ವಿತೀಯ ಸಂಪರ್ಕದಲ್ಲಿದ್ದವರು 400ಕ್ಕೂ ಹೆಚ್ಚಿರುವ ಸಾಧ್ಯತೆ ಇವೆ.

ಮುಂಡರಗಿಯ ನೀರಾವರಿ ಇಲಾಖೆ ನೌಕರ ಗಜೇಂದ್ರಗಡ ತಾಲೂಕಿನ ತನ್ನೂರು ಇಟಗಿಯಲ್ಲಿ ತನ್ನ ಕುಟುಂಬ ಸೇರಿ ಹಲವರಿಗೆ ಮತ್ತು ಮುಂಡರಗಿಯಲ್ಲಿ 25ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿಸುವ ಮೂಲಕ ಸುಪರ್-ಸ್ಪ್ರೆಡರ್ ಆಗಿದ್ದಾನೆ.

ಮೊರಬ ಗ್ರಾಮದ ಸೋಂಕಿತ ದಂಪತಿ ತಮಗೆ ಸೋಂಕು ಇರುವುದು ಗೊತ್ತಿಲ್ಲದೇ ಗದಗ ತಾಲೂಕಿನ ಹೊಂಬಳಕ್ಕೆ ಆಗಮಿಸಿ ಮದುವೆಯಲ್ಲಿ ಪಾಲ್ಗೊಂಡಿದ್ದರು. ಅವರಿಂದಾಗಿ ಹೊಂಬಳದಲ್ಲಿ ಹಲವಾರು ಜನರಿಗೆ ಸೋಂಕು ತಗುಲಿದೆ.

Leave a Reply

Your email address will not be published. Required fields are marked *

You May Also Like

ಸಂಕಷ್ಟದಲ್ಲೂ ಪರೋಪಕಾರಿ ಈ ಆಟೋ ಚಾಲಕ

ಲಾಕ್ ಡೌನ್ ಹಿನ್ನಲೆ ದುಡಿಮೆಯನ್ನೆ ನಂಬಿದ ಜನರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಇನ್ನು ತನಗೆಷ್ಟೆ ಸಂಕಷ್ಟ ಎದುರಾದರೂ ಆಟೋ ಚಾಲಕನೊಬ್ಬ ಜನಸೇವೆಗೆ ನಿಂತಿದ್ದಾನೆ.

ನಾಳೆಯಿಂದ ರಾಜ್ಯದಲ್ಲಿ ಬಸ್ ಸಂಚಾರ?: ನಿಯಮಗಳೇನು ಗೊತ್ತಾ?

ಬೆಂಗಳೂರು: ಲಾಕ್ ಡೌನ್ ನಿಂದ ಬಸ್ ಸಂಚಾರ ಬಂದ್ ಮಾಡಲಾಗಿತ್ತು. ಇದೀಗ ನಾಳೆಯಿಂದ ಮತ್ತೆ ಬಸ್…

ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟದ ಮಾಹಿತಿ

ಈಗಾಗಲೇ ರಾಜ್ಯದ ಬಹುತೇಕ ಕಡೆಗಳಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಪ್ರವಾಹ ಭೀತಿ ಜನರನ್ನು ಆವರಿಸಿದೆ. ಇನ್ನು ಜಲಾಶಯಗಳಲ್ಲಿಯೂ ಕೂಡ ಹೆಚ್ಚು ನೀರು ಸಂಗ್ರಹವಾಗುತ್ತಿದೆ. ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ, ಒಳಹರಿವು ಮೊದಲಾದ ಮಾಹಿತಿ ಇಲ್ಲಿದೆ

ಹಿರಿಯ ಸಾಹಿತಿ, ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ ಪಾಟೀಲ ನಿಧನ

ಬೆಂಗಳೂರ: ಹಿರಿಯ ಸಾಹಿತಿ, ನಾಟಕಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ)…