ಶಾಕಿಂಗ್ ನ್ಯೂಸ್: ಕೊರೋನಾ ಗಾಳಿ ಮೂಲಕ ಹರಡುತ್ತೆ, ಉಸಿರಾಡಿದಾಗ ದೇಹ ಸೇರುತ್ತೆ!

ನವದೆಹಲಿ: ಕೊರೋನಾದ ಸಣ್ಣ ಕಣಗಳು ಗಾಳಿಯಲ್ಲೇ ಇದ್ದು, ಜನದಟ್ಟಣೆಯ ವಾಸಸ್ಥಳಗಳಲ್ಲಿ ಅದು ಉಸಿರಾಟದ ಮೂಲಕವೇ ದೇಹ ಪ್ರವೇಶಿಸುತ್ತದೆ ಎಂದು 32 ದೇಶಗಳ 239 ವಿಜ್ಞಾನಿಗಳು ಅಭಿಮತ ವ್ಯಕ್ತಪಡಿಸಿದ್ದು, ಕೂಡಲೇ ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ಸೋಂಕು ನಿಯಂತ್ರಣದ ಮಾರ್ಗಸೂಚಿಗಳನ್ನು ಬದಲಿಸಬೇಕು ಎಂದು ಹೇಳಿದ್ದಾರೆ ಎಂದು ನ್ಯೂ ಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಸದ್ಯಕ್ಕೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂಎಚ್ಒ) ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಬಾರ್, ಹೊಟೆಲ್, ರೆಸ್ಟೊರೆಂಟ್, ಇಕ್ಕಟ್ಟಿನ ಕೆಲಸದ ಸ್ಥಳಗಳಲ್ಲಿ ಗಾಳಿಯಲ್ಲಿ ಕೊರೋನಾ ಕಣಗಳಿದ್ದರೆ ಅವು ಉಸಿರಾಟದ ಮೂಲಕವೇ ಮನುಷ್ಯ ದೇಹ ಪ್ರವೇಶಿಸುತ್ತವೆ.

ಇಲ್ಲಿವರೆಗೆ ಸೋಂಕಿತ ವ್ಯಕ್ತಿ ಸೀನಿದಾಗ, ಕೆಮ್ಮಿದಾಗ ಹನಿ(ಕಣ) ರೂಪದಲ್ಲಿ ಇನ್ನೊಬ್ಬರ ದೇಹ ಪ್ರವೇಶಿಸುತ್ತದೆ ಎನ್ನಲಾಗಿತ್ತು. ಇದಲ್ಲದೇ ಸೋಂಕು ಗಾಳಿಯ ಮೂಲಕ ದೇಹ ಪ್ರವೇಶಿಸುತ್ತದೆ ಎಂದು 239 ವಿಜ್ಞಾನಿಗಳು ತಮ್ಮ ಸಂಶೋಧನೆ ಮೂಲಕ ಹೇಳಿದ್ದಾರೆ.

ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ ಎಂದಷ್ಟೇ ಇಲ್ಲಿವರೆಗೆ ನಂಬಲಾಗಿತ್ತು. ಆದರೆ, ಇತ್ತೀಚಿನ ಬೆಳವಣಿಗೆ ನೋಡಿದರೆ ಕೊವಿಡ್ ವಾಯುಗಾಮಿ (ಏರ್ ಬಾರ್ನ್) ರೋಗ ಎಂದು ದೃಡಪಟ್ಟಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಇದು ನಿಜವಾದರೆ, ಕ್ವಾರಂಟೈನ್ ನಿಯಮಗಳನ್ನು ಬದಲಿಸಬೇಕಾಗುತ್ತದೆ. ಸೋಂಕಿತ ವ್ಯಕ್ತಿ ಸೀನಿದ, ಕೆಮ್ಮಿದ ಪ್ರದೇಶ ಒಂದು ಕೊಠಡಿ, ಒಂದು ಸಣ್ಣ ಹಾಲ್ ಆಗಿದ್ದರೆ ಆತನಿಂದ ದೂರ ಇದ್ದರೂ, ಸಾಮಾಜಿಕ ಅಂತರ ಕಾಪಾಡಿಕೊಂಡಿದ್ದರೂ ಕೂಡ ಗಾಳಿಯಲ್ಲಿ ಸ್ವಲ್ಪ ಕಾಲ ಜೀವಂತವಿರುವ ಸೋಂಕಿನ ಸಣ್ಣ ಕಣಗಳು ಉಸಿರಾಟದ ಮೂಲಕ ದೇಹ ಪ್ರವೇಶಿಸುತ್ತವೆ. ಹೀಗಾಗಿ ಕೊರೋನಾ ಸೋಂಕಿತ ವ್ಯಕ್ತಿ ಇರುವ ಪ್ರದೇಶ ಇಕ್ಕಟ್ಟಾಗಿದ್ದರೆ ಅಲ್ಲಿ ಗಾಳಿಯ ಮೂಲಕವೇ ಇತರರ ದೇಹವನ್ನು ಕೊರೋನಾ ಪ್ರವೇಸಿಸುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

(ಈ ಕುರಿತು ಹೆಚ್ಚಿನ ಅಪ್ ಡೇಟ್ ನಿರೀಕ್ಷಿಸಿ)

Exit mobile version