ಬೆಂಗಳೂರು : ಮತ್ತು ಬರುವ ಔಷಧಿ ಕುಡಿಸಿ ನಟಿಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ.
ಮೋಹಿತ್ ಎಂಬ ವ್ಯಕ್ತಿಯಿಂದಲೇ ಈ ದುಷ್ಕೃತ್ಯ ನಡೆದಿದೆ ಎನ್ನಲಾಗಿದೆ. ಈ ವ್ಯಕ್ತಿ ಖಾಸಗಿ ಕಂಪನಿಯಲ್ಲಿ ಸಿಇಒ ಆಗಿ ಕೆಲಸ ಮಾಡುತ್ತಿದ್ದು, ಅತ್ಯಾಚಾರ ಎಸಗಿದ್ದಾನೆ ಎಂದು ನಟಿ ಆರೋಪಿಸಿದ್ದಾರೆ.
ಮೋಹಿತ್ ಮತ್ತು ನಟಿ ಕಳೆದ ವರ್ಷ ರೆಸ್ಟೋರೆಂಟ್ನ ಲ್ಲಿ ಪರಿಚಯವಾಗಿದ್ದರು. ಆರೋಪಿ ಮೋಹಿತ್ ತನ್ನ ಕಂಪನಿ ಬ್ರಾಂಡ್ ಅಂಬಾಸಿಡರ್ ಮಾಡುವುದಾಗಿ ನಟಿಯನ್ನು ಪರಿಚಯ ಮಾಡಿಕೊಂಡಿದ್ದ. ಪರಿಚಯ ಸ್ನೇಹವಾಗಿ ಮೋಹಿತ್ ನಟಿಯ ಜೊತೆ ಸಲುಗೆ ಬೆಳೆಸಿದ್ದ. ನಂತರ ಆರೋಪಿ ಮೋಹಿತ್ ನಟಿಯ ಹುಟ್ಟು ಹಬ್ಬವನ್ನು ತನ್ನ ಮನೆಯಲ್ಲಿಯೇ ಆಯೋಜಿಸಿದ್ದ.
ಈ ಸಂದರ್ಭದಲ್ಲಿ ನಟಿಗೆ ಜ್ಯೂಸಿನಲ್ಲಿ ಮತ್ತು ಬರುವ ಮಾತ್ರೆ ಹಾಕಿದ್ದಾನೆ.. ಅದನ್ನು ಕುಡಿದ ನಟಿ ಪ್ರಜ್ಞೆ ತಪ್ಪಿದ್ದು, ಬಳಿಕ ಅತ್ಯಾಚಾರ ಎಸಗಿದ್ದಾನೆ. ಮರುದಿನ ಬೆಳಗ್ಗೆ ನಟಿಗೆ ನಿನ್ನನ್ನು ಅತ್ಯಾಚಾರ ಮಾಡಿರುವುದಾಗಿ ಆರೋಪಿ ಮೋಹಿತ್ ತಿಳಿಸಿ ಬೆದರಿಕೆ ಹಾಕಿದ್ದಾನೆ.
ಆರೋಪಿ ಮೋಹಿತ್, ಮೊಬೈಲ್ನ್ಲ್ಲಿ ಎಲ್ಲಾವೂ ರೆಕಾರ್ಡ್ ಆಗಿದೆ. ನಾನು ಹೇಳಿದಂತೆ ಕೇಳಬೇಕು ಎಂದು ಬೆದರಿಕೆ ಹಾಕಿದ್ದ. ಅಷ್ಟೇ ಅಲ್ಲದೇ ಮೊಬೈಲ್ ತೋರಿಸಿ ಮತ್ತೆ ಅತ್ಯಾಚಾರ ಮಾಡಿದ್ದಾನೆ. ಕೇವಲ ಅತ್ಯಾಚಾರ ಅಷ್ಟೇ ಅಲ್ಲ. ವಿಡಿಯೋವನ್ನು ಯೂಟ್ಯೂಬ್ಗೆ್ ಹಾಕುವುದಾಗಿ ಬೆದರಿಸಿ ಹಣ ವಸೂಲಿ ಮಾಡಿದ್ದಾನೆ. ಇದೇ ರೀತಿ ಬೆದರಿಕೆ ಹಾಕಿ ಸುಮಾರು ರೂ. 20 ಲಕ್ಷ ಲಕ್ಷ ಹಣ ವಸೂಲಿ ಮಾಡಿದ್ದಾನೆ ಎಂದು ನಟಿ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಕುರಿತು ಜೆ.ಜೆ. ನಗರ ಪೊಲೀಸ್ ಠಾಣೆಯಲ್ಲಿ ನಟಿ ದೂರು ದಾಖಲಿಸಿದ್ದಾರೆ. ನಟಿ ದೂರು ನೀಡಿರುವ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದಾನೆ. ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

You May Also Like

‘ಡ್ಯಾನ್ಸ್ ಇಂಡಿಯಾ ಡ್ಯಾನ್ಸ್’ ಹುಡುಗಿ :ಟಿವಿ ಶೋ ಮಾಡುತ್ತಲೇ ಶೇ.74 ಸ್ಕೋರ್

ಸದ್ಯ ಜನಪ್ರಿಯವಾಗಿರುವ ಅಲಾದ್ದೀನ್ ಫ್ಯಾಂಟಸಿ ಟಿವಿ ಶೋನಲ್ಲಿ ಪಾತ್ರ ಮಾಡುತ್ತಿರುವ ಈ ಹುಡುಗಿ ಶೂಟಿಂಗ್ ಮತ್ತು ಸ್ಟಡಿ ನಡುವೆ ಬ್ಯಾಲೆನ್ಸ್ ಮಾಡುತ್ತ ಗೆಲ್ಲುತ್ತಿದ್ದಾಳೆ.

ಸಿಡಿ ಪ್ರಕರಣ ನ್ಯಾಯಾಲಯಕ್ಕೆ ಮೊರೆ ಹೋದ ಆರು ಸಚಿವರು : ಇಂದು ಅರ್ಜಿ ವಿಚಾರಣೆ

ರಾಜ್ಯದಲ್ಲಿ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಹೊರಬೀಳುತ್ತಿದ್ದಂತೆ ರಾಜ್ಯದ 6 ಸಚಿವರು ನ್ಯಾಯಾಲಯದ ಮೊರೆ ಹೋಗಿದ್ದು ಇಂದು ಇನ್ನೂ 6 ಸಚಿವರು ನ್ಯಾಯಾಲಯದ ಮೊರೆ ಹೋಗಲಿದ್ದಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ ತಿಳಿಸಿದ್ದಾರೆ.

ಏ.1 ರಿಂದ ಬಿಪಿಎಲ್ ಕಾರ್ಡ್ ದಾರರಿಗೆ ವಿವಿಧ ಧಾನ್ಯ ವಿತರಣೆ

ಬಿಪಿಎಲ್ ಪಡಿತರದಾರರಿಗೆ ಆಹಾರ ಭದ್ರತೆ ಯೋಜನೆಯಡಿ ಅಕ್ಕಿಯ ಜೊತೆಗೆ ಜೋಳ, ಹೆಸರುಬೇಳೆ, ತೊಗರಿ ಹಾಗೂ ರಾಗಿ ವಿತರಿಸಲಾಗುತ್ತದೆ ಎಂಬುದಾಗಿ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.