ಮುಂಬಯಿ: ಜಾನ್ಹವಿ ಕಪೂರ್ ನಟಿಸಿರುವ ಕರಣ್ ಜೋಹಾರ್ ನಿರ್ಮಾಣದ ಗುಂಜಾನ್ ಸಕ್ಸೇನಾ-ದಿ ಕಾರ್ಗಿಲ್ ಗರ್ಲ್ ಸಿನಿಮಾ ಸಾಮಾನ್ಯ ಸಿನಿಮಾಗಳಂತೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದೆ ನೇರವಾಗಿ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರಣ್ ಜೋಹಾರ್, ವಿಡಿಯೋ ಹಂಚಿಕೊಂಡಿದ್ದು, ಅವರ ಪ್ರೇರಣಾದಾಯಿ ಪಯಣ ಇತಿಹಾಸ ನಿರ್ಮಿಸಿತು, ಇದು ಆಕೆಯ ಕಥೆ. ಗುಂಜಾನ್ ಸಕ್ಸೇನಾ-ದಿ ಕಾರ್ಗಿಲ್ ಗರ್ಲ್ ಶೀಘ್ರವೇ ನೆಟ್ ಫ್ಲಿಕ್ಸ್ ನಲ್ಲಿ ಬರುತ್ತಿದೆ ಎಂದು ಹೇಳಿದ್ದಾರೆ. ಬಿಡುಗಡೆಯ ದಿನಾಂಕ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.
1999 ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ವಾರ್ ಝೋನ್ ಗೆ ಯುದ್ಧ ವಿಮಾನ ಮುನ್ನಡೆಸಿದ್ದ ಮೊದಲ ಸೇನಾಧಿಕಾರಿ ಗುಂಜಾನ್ ಸಕ್ಸೇನಾರ ಕಥೆ ತೆರೆಗೆ ಬರುತ್ತಿದೆ.
ಜೀ ಸ್ಟುಡಿಯೋಸ್ ಹಾಗೂ ಧರ್ಮ ಪ್ರೊಡಕ್ಷನ್ ನಲ್ಲಿ ಮೂಡಿರುವ ಈ ಸಿನಿಮಾದಲ್ಲಿ ಪಂಕಜ್ ತ್ರಿಪಾಠಿ ಹಾಗೂ ವಿನೀತ್ ಕುಮಾರ್ ನಟಿಸಿದ್ದಾರೆ. ಈ ಸಿನಿಮಾ ಈ ಹಿಂದೆ ಏ.24 ಕ್ಕೆ ಬಿಡುಗಡೆಯಾಗಬೇಕಿತ್ತು.