ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಟ್ಟಿಗೆ ಅಡ್ಡೆಗಳಿಗೆ ಇಂದು ತಹಶೀಲ್ದಾರ್ ಯಲ್ಲಪ್ಪ ಗೋನೆಣ್ಣವರ್ ಭೇಟಿ ನೀಡಿದರು.
ತಹಶೀಲ್ದಾರ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ, ಹೆಸ್ಕಾಂ ಅಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಕಟ್ಟಿಗೆ ಅಡ್ಡೆಗಳ ಮಾಲಿಕರಿಗೆ ದಾಖಲೆ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಅಡ್ಡೆ ನಡೆಸಲು ಪರವಾನಿಗೆ, ಎನ್.ಎ, ಕೈಗಾರಿಕೆ, ಅರಣ್ಯ ಇಲಾಖೆ ನೀಡಿದ ದಾಖಲೆಗಳನ್ನು ಮಂಗಳವಾರ ಸಂಜೆಯೊಳಗೆ ಸಲ್ಲಿಸುವಂತೆ ಸೂಚಿಸಲಾಗಿದೆ. ಒಂದು ವೇಳೆ ದಾಖಲೆ ಸಲ್ಲಿಸದಿದ್ದರೆ ಮೊದಲ ಹಂತದಲ್ಲಿ ಕಟ್ಟಿಗೆ ಅಡ್ಡೆಗಳಿಗೆ ನೀಡಿದ ವಿದ್ಯುತ್ ಸಂಪರ್ಕ ಕಟ್ ಮಾಡಲಾಗುವುದು. ಎರಡನೇ ಹಂತದಲ್ಲಿ ಶಾಶ್ವತವಾಗಿ ಅಡ್ಡೆಗಳನ್ನು ಬಂದ್ ಮಾಡಿಸಲಾಗುವುದು. ಒಂದು ವೇಳೆ ಪರಿಸರ ಇಲಾಖೆ ಪರಿಶೀಲಿಸಿ ಎನ್.ಓ.ಸಿ ನೀಡಿದರೆ ನಾವು ಅನುಮತಿ ನೀಡಬೇಕಾಗುತ್ತದೆ ಎಂದು ತಹಸೀಲ್ದಾರ್ ಯಲ್ಲಪ್ಪ ಗೋನೆಣ್ಣವರ್ ಉತ್ತರಪ್ರಭಕ್ಕೆ ತಿಳಿಸಿದರು.
ಈ ಕುರಿತು ಉತ್ತರಪ್ರಭ ಸರಣಿ ವರದಿ ಪ್ರಕಟಿಸಿತ್ತು.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿಂದು 7571 ಕೊರೊನಾ ಪಾಸಿಟಿವ್!: ಯಾವ ಜಿಲ್ಲೆಯಲ್ಲಿ ಎಷ್ಟು?

ರಾಜ್ಯದಲ್ಲಿಂದು 7571 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈವರೆಗೆ ಒಟ್ಟು 264546 ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಇಂದು 6561 ಪ್ರಕರಣಗಳು ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿವೆ.

ಕೊರೊನಾ ವಿಚಾರ : ಶೀಘ್ರದಲ್ಲೇ ನೂತನ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಬುಧವಾರ ಬೆಂಗಳೂರಿನಲ್ಲಿ…

ಸರಿಯಾಗಿ ಕರ್ತವ್ಯ ನಿರ್ವಹಿಸದ ಸೂಪರ್ ಸ್ಪೆಷಾಲಿಟಿ ವೈದ್ಯರುಗಳ ವಿರುದ್ಧ ಕಠಿಣ ಕ್ರಮ – ಡಾ.ಸುಧಾಕರ್

ರಾಯಚೂರು: ಒಪೆಕ್ ಆಸ್ಪತ್ರೆಯನ್ನು ದುಃಸ್ಥಿತಿಯಿಂದ ಮುಕ್ತಗೊಳಿಸಿ ಅದನ್ನು ಗುಣಮಟ್ಟದ ಶ್ರೇಷ್ಠ ಆಸ್ಪತ್ರೆಯಾಗಿ ಪರಿವರ್ತಿಸಲು ಶ್ರಮಿಸುವಂತೆ ವೈದ್ಯಕೀಯ…

ರಾಜ್ಯಸಭೆಯತ್ತ ಎಚ್.ವಿಶ್ವನಾಥ್ ಚಿತ್ತ..?

ಇತ್ತಿಚಿನ ಬೆಳವಣಿಗೆಯನ್ನು ನೋಡಿದರೆ ವಿಶ್ವನಾಥ್ ಚಿತ್ತ ರಾಜ್ಯಸಭೆಯತ್ತ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಎಲ್ಲ ಕಾರಣಗಳಿಂದ ಶಿಘ್ರದಲ್ಲಿ ಬರಲಿರುವ ರಾಜ್ಯಸಭೆ ಚುನಾವಣೆಗೆ ಇನ್ನಷ್ಟು ಮಹತ್ವ ಬಂದಿದೆ