ಲಕ್ಷ್ಮೇಶ್ವರ: ತಾಲೂಕಿನ ಹರದಗಟ್ಟಿ ಗ್ರಾಮದಲ್ಲಿ ಶಾಸಕ ರಾಮಣ್ಣ ಲಮಾಣಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.
ಕ್ಷೇತ್ರ ವ್ಯಾಪ್ತಿಯ ಎಲ್ಲ ತಾಂಡಾಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಿಸಲು ಕ್ರಮಕೈಗೊಳ್ಳಲಾಗಿದೆ. ತಾಂಡಾ ಅಭಿವೃದ್ಧಿ ನಿಗಮದಡಿ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ ಸಾಕಷ್ಟು ಕೆಲಸಗಳನ್ನು ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಕುಡಿಯುವ ನೀರು, ಇತರ ಮೂಲ ಸೌಲಭ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ತಾ.ಪಂ ಸದಸ್ಯೆ ಸುಶೀಲವ್ವ ಲಮಾಣಿ, ಸೋಮಸಿಂಗ್ ದೊಡ್ಡಮನಿ, ಮಲ್ಲೇಶಪ್ಪ ಲಮಾಣಿ, ಮಹೇಶ ಲಮಾಣಿ, ಮಹಾದೇವ ಮಾಳಗಿಮನಿ, ಪರಮೇಶ ಲಮಾಣಿ, ಫಕ್ಕೀರೇಶ ಕವಲೂರ, ಮಹಾದೇವ ಲಮಾಣಿ, ಚಿನ್ನಕ್ಕ ಲಮಾಣಿ, ಪುಟ್ಟವ್ವ ಲಮಾಣಿ, ಯಂಕಪ್ಪ ಕಾರಬಾರಿ, ಕಿರಣ ದೊಡ್ಡಮನಿ, ಶೇಕವ್ವ ಲಮಾಣಿ, ರಮೇಶ ಲಮಾಣಿ, ವೆಂಕಟೇಶ ಲಮಾಣಿ, ಫಕ್ಕೀರಪ್ಪ ಲಮಾಣಿ ಇದ್ದರು.