ಗದಗ: 8 ದಿನದಿಂದ ಅಗತ್ಯ ವಸ್ತು ಸಿಗದೇ ಕಂಗಾಲಾಗಿದ್ದ ಸೀಲ್ ಡೌನ್ ಪ್ರದೇಶದ ಜನರ ಎದುರು ತಹಸೀಲ್ದಾರ್ ಪ್ರತ್ಯಕ್ಷರಾದರು. ಅಸಮರ್ಪಕ ಸೀಲ್ ಡೌನ್ ನಿರ್ವಹಣೆಯಿಂದ ಸಿಟ್ಟಾಗಿದ್ದ ಲಕ್ಷ್ಮೇಶ್ವರ ತಾಲೂಕಿನ ಬಾಲೇಹೊಸೂರಿನ ಜನರು ಶನಿವಾರ ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿಯವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಶನಿವಾರ ಮುಂಜಾನೆ ಬಾಲೇಹೊಸೂರಿನ ಜನರು ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದನ್ನು ‘ಉತ್ತರಪ್ರಭ’ ವರದಿ ಮಾಡಿತ್ತು.

ಮಧ್ಯಾಹ್ನದ ಹೊತ್ತಿಗೆ ಸೀಲ್ ಡೌನ್ ಪ್ರದೇಶಕ್ಕೆ ತಹಸೀಲ್ದಾರ್ ಭ್ರಮರಾಂಬ ಅವರು ಭೇಟಿ ಕೊಟ್ಟಾಗ ಅಲ್ಲಿನ ಮಹಿಳೆಯರು, ಯುವಕರು ಮೇಡಂರನ್ನು ತರಾಟೆಗೆ ತೆಗೆದುಕೊಂಡರು.

‘ಅಲ್ರಿ ಮೇಡಂ, 8 ದಿನಾ ಒಬ್ಬರು ಇತ್ತಾಗ ಬಂದಿಲ್ಲ. ಇಲ್ಲಿ ಎಲ್ಲ ಬಂದ್ ಮಾಡ್ಯಾರ. ಆದ್ರ ಪಂಚಾಯತಿ ಕಾರ್ಯದರ್ಶಿ ಮುಂದ್ ನಿಂತು 80 ರೂಪಾಯಕ್ಕೆ ಕೆಜಿ ಟೊಮೆಟೊ ಮಾರಿಸ್ತಾನ. ವಿಡಿಯೋ ಮಾಡಿದ್ರ ಯಾಕ್ ಮಾಡ್ತೀರಿ ಅಂತಾನ. ಇಲ್ಲಿ ನೋಡಿದ್ರ ದುಡಿಮಿ ಇಲ್ಲ, ಅಕ್ಕಿನೂ ಕೊಟ್ಟಿಲ್ಲ’ ಎಂದು ಜನ ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲದಕ್ಕೂ ಮೌನವೇ ಉತ್ತರ ಎಂಬಂತಿದ್ದ ಭ್ರಮರಾಂಬರಿಗೆ ಭ್ರಮನಿರಶನದಲ್ಲಿದ್ದ ಜನರ ಎದುರು ಉತ್ತರಿಸಲಾಗಲಿಲ್ಲ.

8 ದಿನದ ನಂತರ ಬಂದ ಮೇಡಂ ಪ್ರತಿ ಮನೆಗೆ ಎರಡು ಕೆಜಿ ಅಕ್ಕಿ, ಎರಡು ಕೆಜಿ ಸಕ್ಕರಿ ಕೊಟ್ಟರಷ್ಟೇ. ಜನ ಗುಬ್ಬಿಗಳಂತೆ ಈಟೀಟು ತಿನ್ನಲು ಆಗುತ್ತಾ ಎಂಬ ಪ್ರಶ್ನೆ ಕೇಳಿ ಬಂದಿತು.

ಈಗ ಎಲ್ಲ ಒದಗಿಸುವ ಭರವಸೆಯ ಸಿಹಿಮಾತು ಹೇಳಿ ಹೋಗಿದ್ದಾರೆ. ತಮ್ಮ ಆಡಳಿತದ ತಪ್ಪು ನೋಡಿ ಭ್ರಮರಾಂಬರೇ ಭ್ರಮನಿರಶರಾಗಿರಬಹುದು ಎಂದು ಜನ ಮಾತಾಡಿಕೊಳ್ಳುವಂತಿತ್ತು ತಹಸೀಲ್ದಾರರ ವರ್ತನೆ.

Leave a Reply

Your email address will not be published. Required fields are marked *

You May Also Like

ಟೀಕಾಕಾರರಿಗೆ ಉತ್ತರ ಸಿಕ್ಕಿದೆ ಎಂದು ಭಾವಿಸುತ್ತೇನೆ: ಕೆ.ಸುಧಾಕರ್

ನಮ್ಮ ಬಗ್ಗೆ ವ್ಯಂಗ್ಯದ ಮಾತುಗಳನ್ನು ಆಡಿದ್ದವರಿಗೆ ಕ್ರಿಯಾಶೀಲ ಕಾರ್ಯ ಚಟುವಟಿಕೆಗಳ ಮೂಲಕ ಪ್ರತ್ಯುತ್ತರ ನೀಡಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ. ಎಂಟು ತಿಂಗಳ ರಾಜಕೀಯ ಗ್ರಹಣದ ಬಳಿಕ ಸಚಿವರಾದ ನಮ್ಮನ್ನು ಪ್ರತಿಪಕ್ಷದ ಕೆಲವರು ಲೇವಡಿ ಮಾಡಿದ್ದರು. ಇವರು ಏನು ಮಾಡುತ್ತಾರೋ ನಾವು ನೋಡುತ್ತೇವೆ ಎಂದು ಟೀಕೆಗಳ ಸುರಿಮಳೆ ಗೈದಿದ್ದರು. ಈಗ ಅವರಿಗೆಲ್ಲ ಉತ್ತರ ಸಿಕ್ಕಿರಬೇಕು ಎಂದು ಭಾವಿಸಿದ್ದೇನೆ ಎಂದರು.

ಗದಗ ಜಿಲ್ಲೆಯ ನಾಲ್ಕು ಕಂಟೇನ್ಮೆಂಟ್ ಪ್ರದೇಶಗಳ ನಿರ್ಬಂಧ ತೆರವು

ಗದಗ: ಜಿಲ್ಲೆಯ ರೋಣ ತಾಲ್ಲೂಕಿನ ಇಟಗಿ ಗ್ರಾಮದ ವಾರ್ಡ ನಂ. 4ರ ಎರಡು ಪ್ರದೇಶಗಳನ್ನು, ಲಕ್ಷ್ಮೇಶ್ವರ…

ಕಿಯೋನಿಕ್ಸ್ ಅಧ್ಯಕ್ಷರಾಗಿ ಬಿಜೆಪಿ ನಾಯಕ ಹರಿಕೃಷ್ಣ ಬಂಟ್ವಾಳ್ ಆಯ್ಕೆ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಅವರಿಗೆ ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್…

ಹಂತ ಹಂತವಾಗಿ ವಿದ್ಯುತ್ ಬಿಲ್ಲ ಕಟ್ಟಲು ಅವಕಾಶ ಕಲ್ಪಿಸಿ

ಗದಗ: ಜೂನ್ ನಿಂದ ಜುಲೈ ವರೆಗೆ ವಿದ್ಯುತ್ ಬಿಲ್‌ಗಳನ್ನು 3 ತಿಂಗಳ ನಂತರ ಹಂತ ಹಂತವಾಗಿ ಪಾವತಿಸಿಕೊಳ್ಳಬೇಕು ಎಂದು ಪ್ರಜಾ ಪರಿವರ್ತನಾ ವೇದಿಕೆಯ ರಾಜ್ಯಾಧ್ಯಕ್ಷ ಬಸಯ್ಯ ನಂದಿಕೋಲಮಠ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.