ಬಾಗಲಕೋಟೆ: ಜಮಖಂಡಿ ತಾಲ್ಲೂಕಿನ ಸಾವಳಗಿಯಲ್ಲಿ ಕೋವಿಡ್-೧೯ ಸಂದರ್ಭದಲ್ಲಿ ಸರಕಾರಿ ಆದೇಶ ಪ್ರಕಾರ ಜನ ಸಾಮಾನ್ಯರಾಗಲಿ ಹಾಗೂ ಅಧಿಕಾರಿಗಳಾಗಲಿ ಸುರಕ್ಷಿತ ಅಂತರ, ಸ್ಯಾನಿಟೈಜರ್ ಬಳಕೆ, ಮಾಸ್ಕ್ ಧರಿಸುವುದು ಕಡ್ಡಾಯವೆಂದು ಕರೋನಾ ವಾರಿಯರ್ಸ್ ಸೇವೆ ಸಲ್ಲಿಸುತ್ತಿದ್ದಾರೆ.
ಆದರೆ ಇಲ್ಲಿ ಎಲ್ಲವನ್ನು ಗಾಳಿಗೆ ತೂರಿ ಸರಕಾರಿ ಆದೇಶಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ಸಾವಳಗಿ ವಿಭಾಗದ ಹೆಸ್ಕಾಂ ಶಾಖಾಧಿಕಾರಿ ಜೇತುಲಾಲ್ ರಾಠೋಡ ಕಚೇರಿ ಮುಂಭಾಗದಲ್ಲಿ ಸಿಬ್ಬಂದಿ ಹಾಗೂ ವಿದ್ಯುತ್ ಗುತ್ತಿಗೆದಾರರ ಜೊತೆಗೂಡಿ ಸುರಕ್ಷಿತ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಧರಿಸದೆ ಹುಟ್ಟು ಹಬ್ಬವನ್ನು ಕಚೇರಿಯ ಮುಂಭಾಗದಲ್ಲಿ ಆಚರಿಸಿಕೊಂಡಿದ್ದಾರೆ.
ಈ ಮೂಲಕ ಸರಕಾರಿ ಆದೇಶಕ್ಕೆ ಬೆಲೆ ಇಲ್ಲದಂತೆ ಮಾಡಿದ್ದಾರೆ. ಈ ಕೂಡಲೇ ಈ ವಿಷಯಕ್ಕೆ ಸಂಬಂಧಪಟ್ಟ ಮೇಲಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮಕೈಗೋಳ್ಳಬೇಕು ಎಂದು ಸಾವಳಗಿ ಗ್ರಾಮದ ಜನ ಆಗ್ರಹಿಸಿದ್ದಾರೆ.

ನಮ್ಮ ಸಿಬ್ಬಂದಿಗೆ ಬೇಡ ಅಂದರೂ ಒತ್ತಾಯದಿಂದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಅದನ್ನೇ ದೊಡ್ಡದು ಮಾಡಬೇಡಿ. – ಜೇತುಲಾಲ್ ರಾಠೋಡ್, ಹೆಸ್ಕಾಂ ಶಾಖಾಧಿಕಾರಿ, ಸಾವಳಗಿ

ಗ್ರಾ.ಪಂ, ಪೊಲೀಸ್ ಇಲಾಖೆ, ಆಶಾ ಕಾರ್ಯಕರ್ತರು ಹಾಗೂ ಅನೇಕರು ಹಗಲಿರುಳು ಎನ್ನುದೆ ಶ್ರಮಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಾಸ್ಕ್ ಹಾಕದೆ ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳದೆ ಸರ್ಕಾರಿ ಆದೇಶ ಗಾಳಿಗೆ ತೂರಿ ಹುಟ್ಟು ಹಬ್ಬವನ್ನು ಆಚರಿಸುವದು ಸರಿಯಲ್ಲ.

  • ಸಿದ್ದುಬಾ ಬಂಡಿವಡ್ಡರ, ತಾಲ್ಲಕು ಅಧ್ಯಕ್ಷ, ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆ
Leave a Reply

Your email address will not be published. Required fields are marked *

You May Also Like

ಕೇರಳದಲ್ಲಿ ಕೊರೊನಾ ಪ್ರಮಾಣ ಇಳಿಕೆ: ಪಿಣರಾಯಿ ವಿಜಯನ್

ಇಂದು ಕೇರಳದಲ್ಲಿ ಹೊಸದಾಗಿ ಕೊರೊನಾದ 40 ಪ್ರಕರಣಗಳು ದಾಖಲಾಗಿವೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದರು.

ಕೋಮು ಸೌಹಾರ್ದತೆ ಮತ್ತು ಅಜ್ಜನವರು

ಕೋಮುವಾದ ಈಗ ಇದೊಂದು ವಿಚಿತ್ರ ಶಬ್ದ. ಸೌಹಾರ್ದತೆಯ ಹುಡುಕಾಟ ಅನಿವಾರ್ಯವಾದ ಕಾಲ.

ಹಡಗಿಗೆ ದೀಪಾಲಂಕಾರ: ಕೋವಿಡ್19 ವಾರಿಯರ್ಸ್ಗೆ ಗೌರವ

ಹಡಗುಗಳನ್ನು ದೀಪಗಳಿಂದ ಅಲಂಕರಿಸುವ ಮೂಲಕ ಕೊರೋನಾ ವಾರಿಯರ್ಸ್ ಗೆ ವಿಶಿಷ್ಟ ರೀತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

ಗ್ರಾಪಂ ಚುನಾವಣೆ ಯಾವಾಗ ನಡೆಯಲಿವೆ ಗೊತ್ತಾ?

ಬೆಂಗಳೂರು : ರಾಜ್ಯದಲ್ಲಿ ಗ್ರಾಪಂಗೆ ಡಿಸೆಂಬರ್ ಸಮಯದಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ, ಸದ್ಯ ಈ ಚುನಾವಣೆಯನ್ನು ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.