ಕೊರೋನಾ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ವೈರಸ್ ನಿರ್ಮೂಲನೆಗೆ ಶುಚಿತ್ವ ಕಾಪಾಡಿಕೊಳ್ಳುವುದು ಅಗತ್ಯ. ದಿನಕ್ಕೆ ಐದಾರು ಸಲ ನೀರು ಮತ್ತು ಸೋಪ್‍ನಿಂದ ಕೈ ತೊಳೆಯುವುದು ಒಳ್ಳೆಯದು.
ಮೊಸರು, ಹಾಲಿನ ಪ್ಯಾಕೆಟ್‍ಗಳ ಮೇಲೂ ಕೆಲ ಗಂಟೆಗಳ ಕಾಲ ಕೊರೋನಾ ವೈರಸ್ ಜೀವಂತ ಇರುವ ಕಾರಣ ಪ್ಯಾಕೆಟ್‍ಗಳನ್ನು ತೊಳೆದು, ನಂತರ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು.
ಅಂತರ್ಜಾಲದಲ್ಲಿ ಕೆಲವು ವಿಡಿಯೋಗಳು ಚಾಲ್ತಿಯಲ್ಲಿದ್ದು, ತರಕಾರಿ ಮತ್ತು ಹಣ್ಣುಗಳನ್ನು ಸೋಪ್ ಬಳಸಿ ತೊಳೆಯಬೇಕು ಎಂದು ತಪ್ಪು ಮಾಹಿತಿ ನೀಡಲಾಗುತ್ತಿದೆ. ಯಾವ ಕಾರಣಕ್ಕೂ ಸೋಪ್ ಅಥವಾ ಪಾತ್ರೆ ತೊಳೆಯುವ ಡಿಶ್ ಸೋಪ್ ಬಳಸಿ ತರಕಾರಿ ಮತ್ತು ಹಣ್ಣುಗಳನ್ನು ತೊಳೆಯಬಾರದು ಎಂದು ತಜ್ಞ ವೈದ್ಯರು ಅಭಿಪ್ರಾಯ ಪಡುತ್ತಾರೆ.
ಸೋಪ್‍ನಲ್ಲಿನ ರಾಸಾಯನಿಕಗಳು ಹಣ್ಣು, ತರಕಾರಿಗಳಲ್ಲಿ ಬೆರೆಯುವುದರಿಂದ ಅಸಾಧ್ಯ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ, ಎದೆ, ಜಠರ ಮತ್ತು ಕರುಳುಗಳಿಗೆ ಇದು ಅಪಾಯ ಒಡ್ಡುತ್ತದೆ. ತಣ್ಣೀರಿನಲ್ಲಿ ಸ್ವಚ್ಛವಾಗಿ ತೊಳೆದರೆ, ಶೇ. 95-97 ಸೂಕ್ಷ್ಮಕ್ರಿಮಿಗಳು ನಾಶವಾಗುತ್ತವೆ. ಹೀಗಾಗಿ ಒಂದಲ್ಲ, ಎರಡು ಸಲ ತಣ್ಣೀರಿನಿಂದ ತೊಳೆದರೆ ಸಾಕು ಎನ್ನುತ್ತಾರೆ ಆಹಾರ ತಜ್ಞರು ಮತ್ತು ವೈದ್ಯರು.